ಪುಟ:Kalyaand-asvaami.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೋಮಯ್ಯನ ಮನೆಗೆ ರಾತ್ರೆ ಅವರೆಲ್ಲ ಊಟಕ್ಕೆ ಹೋದರು.ಅದು ಬಾಂಧವರಿಗಾಗಿ ಏರ್ಪಡಿಸಿದ್ದ ಔತಣ.ಪುಟ್ಟಬಸವನಂತೆ ಶಾಕಾಹಾರಿಗಳೂ ಕೆಲವರು ಅಲ್ಲಿದ್ದರು.ಆದರೆ ಉಳಿದ ಹೆಚ್ಚಿನವರಿಗೋಸ್ಕರ,ಕಾಡುಗಳಲ್ಲಿ ಬೇಟೆಯಾಡಿ ತರಕಾರಿ ತರಲಾಗಿತ್ತು.ಕುಡಿಯಲು,ಸಿದ್ದವಾಗಿತ್ತು ವಿವಿಧ ಹಣ್ಣುಗಳನ್ನು ಭಟ್ಟಿ ಇಳಿಸಿ ತಯಾರಿಸಿದ್ದ ಸಾರಾಯಿ. ಪುಟ್ಟಬಸವ ಕುಡಿಯಲಿಲ್ಲ.ಕುಡಿಯುವ ಅಭ್ಯಾಸವೇ ಇರಲಿಲ್ಲ.ಆತನಿಗೆ.ಮಾಂಸದ ಅಡುಗೆ ನಂಜಯ್ಯನಿಗೆ ಇಷ್ಟವಿರಲಿಲ್ಲವಾದರೂ ಕುಡಿತ ಪ್ರಿಯವಾಗಿತ್ತು. ಶುದ್ದ ಶಾಕಾಹಾರಿಗಳಿಗೆಂದೇ ಸಿದ್ದವಾಗಿದ್ದುವು,ಭಕ್ಷ್ಯ ಭೋಜ್ಯಗಳು,ಒಡೆ ಪಾಯಸಗಳು. ಪುಟ್ಟಬಸವನ ಮಗ್ಗುಲಲ್ಲೇ ಕುಳಿತಿದ್ದ ರಾಮಗೌಡ.ಬುಡ್ಡಿಗಳು ಒಂದೊಂದಾಗಿ ಬರಿದಾಗುತ್ತಿದ್ದರೂ ಆತ ಎಚ್ಚರ ತಪ್ಪಿರಲಿಲ್ಲ.ನಾಲಗೆತಡವರಿಸಲಿಲ್ಲ ಕಣ್ಣುಗಳು ಮಾದಕವಾದುವು ಅಷ್ಟೆ. ಬಾರಿಬಾರಿಗೂ ಪುಟ್ಟಬಸವನೆಡೆಗೆ ನೋಡುತ್ತಲಿದ್ದ ಆತ ಕೇಳಿದ; "ಸ್ವಾಮಿಯವರಿಗೆ ಇಂಥಾ ಅಭ್ಯಾಸ ಒಂದೂ ಇಲ್ಲಹಾಗಾದರೆ." ನಸುನಕ್ಕು ಪುಟ್ಟಬಸವನೆಂದ ; "ಇಲ್ಲ ಗೌಡರೆ." ಆ ಸಂಭಾಷಣೆ ಕೇಳಿಸಿತು ನಂಜಯ್ಯನಿಗೆ,ಆತನ ವಿಚಾರದ ವೀಣೆಯಿಂದ ಆಗಲೇ ಅಪಸ್ವರ ಹೊರಡತೊಡಗಿತ್ತು.ನಾಲಗೆಯೂ ಪದಗಳನ್ನು ಜಗ್ಗಿ ಎಳೆಯುತ್ತಿತ್ತು.ಆತನೆಂದ: "ಅವರದೇನು ಕೇಳ್ತೀರಿ?ಅವರಿನ್ನೂ ಮಗುವೇ.ಕೇಳ್ನೋಡಿ,ಹೌದು ಅಲ್ಲವೋ ಅಂತ." "ಅಂದರೆ?"ಎಂದು ಕೇಳಿದ ಕರಿಯಪ್ಪ,ತನಗೆ ಅರ್ಥವಾಗಲಿಲ್ಲವೆಂದ. ಉತ್ತರ ಕೊಡುವುದಕ್ಕೆ ಮುಂಚೆ ನಂಜಯ್ಯ 'ಖೊ ಖೊ ಖೋ'ಎಂದು ನಕ್ಕ