ಅಮರ ಸುಳ್ಯದಲ್ಲಿ ಕ್ಷೋಭೇಯ ಕಿಡಿ "ಅಲೋ ಕರಿಯಪ್ಪ, ನಿನಗಾದರೂ ಹ್ಯಾಗೆ ತಿಳೀಬೇಕು? ನೀನೂ ಮಗುವೇ!" "ಸ್ವಾಮಿಯವರಿಗೆ ಲಗ್ನವಾದರು ಆಗಿದೆ,"ಸೋಮಯ್ಯ. "ಅದೇನಿದ್ರೂ ಮಕ್ಕಳಾಗೋವರೆಗು ಮಗೂನೆ ಕಣಪ್ಪಾ!" ಆ ಮಾತು ಕೇಳಿ ಉಳಿದ ಕೆಲವರು ನಕ್ಕರು. ಅ ನಗೆಗದಲಿನಲ್ಲಿ ತಾನು ತೇಲುತ್ತ ಪುಟ್ಟಬಸವ ನುಡಿದ: "ಪ್ರತಿಯೊಂದಕ್ಕೂ ಸಮಯ ಒದಗ್ಬರಬೇಕು ಕಣ್ರಪೋ." "ಹೊ ಹ್ಹೂ ಹ್ಹೋ!" ಎಂದ ನಂಜಯ್ಯ. "ಭೇಷ್! ಇಂಗ್ಲಿ ನೋರನ್ನು ಕಡಲಿಗೆ ಎಸೆದ್ಮೇಲೆ ಪುಟ್ಟಬಸಪ್ನೋರು ದೊಡ್ಡಬಸಪ್ನಾಗ್ತಾರೆ! ಹ ಹ್ಹ ಹ್ಹಾ!" ರಾಮಗೌಡನೆಂದೆ: "ಅಮೇಲೆ ಸ್ವಾಮಿಯೋರು ನಮ್ಜತೆ ಕುಡೀತಾರೆ." ಬೇರೆ ಮಾತುಗಳೊ ಕೇಳಿಸಿದುವು: "ಕುಣೀತಾರೆ." "ಹಾಡ್ತಾರೆ." ಹೊರಗೆ ಅಂಗಳದಲ್ಲಿ ಆಗಿಶ್ಟೀಕೆಯ ಕೆಂಡದ ಮೇಲೆ ಕೈ ಒಣಗಿಸುತಿದ್ದ ಒಬ್ಬ ಕೂಗಿಕೊಂಡ: "ಯಾರಾದರೂ ಹಾಡ್ರಪೋ." ತಪೋಮಗ್ನ ಶಿವನಂತೆ ಕುಳಿತಿದ್ದ ಚೆಟ್ಟಯನ್ನು ಕುರಿತು ಪುಟ್ಟಬಸಪ ಹೇಳಿದ: "ಹಾಡಬಾರ್ದಾ?" ಕರಿಯ ಕಲ್ಲಿನಿಂದ ಕಡೆದ ವಿಗ್ರಹವಾಗಿದ್ದ ಚಟ್ಟ.ಎವೆಗಳ ಅಗಾಗ್ಗೆ ಮುಚ್ಚಿ ತೆರೆದು, ಕೆಂಪಡರಿದ್ದ ಕಣ್ಣುಗಲನ್ನು ತೋರಿಸುತಿದ್ದುವು. ತನ್ನನ್ನು ಉದ್ದೇಶಿಸಿ ಪುಟ್ಟಬಸವ ಮಾತನಾಡಿದನೆಂದು ಸಂತು ನಾದ ಚಟ್ಟ,ಮುಖದಗಲಕ್ಕೊ ನಗೆಯರಳಿಸಿ ನುಡಿದ: "ಎಲ್ಲೇ ತೆ ದುಡಿ?' ಸೋಮಯ್ಯ ಮಕ್ಕಳನ್ನು ಕರೆದು ಹೇಳಿದ: "ತಗಂಬನ್ನಿ ದುಡಿ. ಕಾಯಿಸಿ!"
ಪುಟ:Kalyaand-asvaami.pdf/೯೭
ಗೋಚರ