ಪುಟ:Kalyaand-asvaami.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗ್ಗಕ್ಶ್ಟಯ ಉರಿಯನ್ನು ಬಲಗೋಳಿಸಿದರು. ಆ ಕಾರಿರುಳಲ್ಲೂ ಕರಿಯ ಬಿಳಿಯ ಗೋದಿ ಬಣ್ಣದ ಮೈಗಳನ್ನೆಲ್ಲ ಬೆಂಕಿ ಬೆಳಗಿತು. ಚೆಟ್ಟ ಗೋಸ್ಕರ ಜಾಗಬಿಟ್ಟು ಬೆಂಕಿಯ ಸುತ್ತಲೂ ಜನ ನೆರೆದರು. ನಿದ್ದೆಯ ಯೋಚನೆಯಿಲ್ಲದೆ ಚಿಕ್ಕವರೂ ಬಂದರು.ತಮ್ಮ ಊಟದ ಕೆಲಸವನ್ನು ಮುಗಿಸಿದ್ದ ಆ ಮನೆಯ-ಸುತ್ತ ಮುತ್ತಲಿನ-ಹೆಂಗಸರೂ ಕೂಡಾ. ಮನೆ ಬಾಗಿಲ ಬಳಿಯಲ್ಲೂ ಮೆಟ್ಟಿಲುಗಳ ಮೇಲೂ ಅವರು ಕುಳಿತರು. ಎತ್ತರ ದೇಹದ ಚೆಟ್ಟ ಎದ್ದುನಿಂತ. ದುಡಿಯ ತೂಗುದಾರ ಆತನ ಕೊರಳನ್ನು ಬಳಸಿತು. `ಡುಮ್ ಕಿ ಡಿಕಿ'ಎಂದು ದುಡಿಯನ್ನು ಸದ್ದುಮಡಿ ಚೆಟ್ಟ ಕೇಳಿದ; "ಯಾವ ಹಾಡು ಹಾಡ್ಲಿ ?" ಕರಿಯಪ್ಪನೆಂದ: "ಯಾವುದಾದರೂ ಹಾಡ್ರೀ." "ಬೆಳಕು ಹಬ್ಬದ ಪದ ಹೇಳ್ಲಾ ?" ನಂಜಯ್ಯ ನಕ್ಕ. "ಓಹೋ! ಈ ಕಗ್ಗತ್ಲೇಲಿ ಬೆಳಕುಹಬ್ಬದ ಹಾಡೇ ಸರಿ!" ಚೆಟ್ಟಯ ಭುಜ ಕುಲುಕಿತು. ಮೈ ಮಿಸುಕಿತು. ಕಮಾನಿನಂತೆ ಬಾಗುತ್ತ ದುಡಿಯನ್ನು ಮೇಲಕ್ಕೊಯ್ದು ಕೆಳಕ್ಕೆ ತಂದು, `ಡುಮ್ ಕಿ ಡಿಕಿ' ಎಂದ ಆತ ತೆರೆದ ಬಾಯಿಂದ ಆಲಾಪನೆ ಹೊರಟು ಆ ಆವರಣವನ್ನು ಭೇದಿಸಿ,ಹೊಲಗಳನ್ನು ದಾಟಿ, ಅಡವಿಯತ್ತ ಹರಿಯಿತು. ಚೆಟ್ಟ ಆರಂಭಿಸಿದ: "ಹಿಗ್ಗಿ ಬೋಗಿ ಬೋಗಿ ಬೊ !ಹೊ !ಏಹಿ ! ಯೊ !ಎಯ್ಯೊ! ಏಹಿ!ಯೊ! ಹುರ್ ತೂಮ !ಬೋಗಿ ಬೊ ಹೊ !ಓ ಕುಯಿ ! ಏಯಿ !ಏಯಿ! ಯೊ!ಎಯ್ಯೊ!ಏಯಿ !ಏಯಿ ! ಯೊ!" ಮತ್ತೆ ಮತ್ತೆ ಆ ಸಾಲು. ಅಗ್ಗಿಕ್ಶ್ಟೀಕೆಗೆ ಯಾರೊ ತರಗೆಲೆಗಳನ್ನು ಸುರಿದರು. ಭುಗ್ ಭುಗಿಲೆಂದು ಹತ್ತಿಕೊಂಡಿತು ಬೆಂಕಿ. ಕೀಚಲು ಧ್ವನಿಯಲ್ಲಿ ಹುಡುಗರು ಕೊಗಾಡಿದರು. "ಹುಯ್!" ಎಂದು ಉತ್ಸಾಹಿತನಾದ ನಂಜಯ್ಯ