ಪುಟ:Kalyaand-asvaami.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸೂಳ್ಯದಲ್ಲಿ ಕ್ಷೋಭೆಯ ಕಿಡಿ. ಚೆಟ್ಟಯ ಸ್ವರವೇರಿತು. ಆತ ಆವೇಶಗೊಂಡು ಹಾಡಿದ. ಪಾದಗಳೂ ಆಗೊಮ್ಮೆ ಈಗೊಮ್ಮೆ ತಾಳಕ್ಕೆ ತಕ್ಕಂತೆ ಹಾರಿ ಕುಣಿದುವು. ಪ್ರತಿಯೊಂದು ಸಾರಿ ಮೈ ಕಮಾನಿನಂತೆ ಬಾಗಿ, ದುಡಿ ಮೇಲಕ್ಕೆ, ಸರಿದು ಕೆಳಕ್ಕೆ ಇಳಿದಾಗಲೂ, ಬಲೆಬೀಸುವ ಬೆಸ್ತನಾಗುತ್ತಿದ್ದ ಈ ಕುಡಿಯ. ಅದು ಹರ್ಷೋನ್ಮಾದದ ಸುಳಿಗೆ ಆ ಜನರನ್ನೆಲ್ಲ ಹಿಡಿದೆಳೆಯುವ ಬಲೆ. " ಹಿಗ್ಗಿ ಬೋಗಿ ಬೋಗಿ ಬೊ ! ಹೊ ! ಏಹಿ ! ಯೊ ! ಎಯ್ಯೊ !ಏಹಿ!ಯೊ! ತುಮ್ಮ ದೇವಿ ! ದೇವಿತಾ ! ಓ ! ಏಹಿ ! ಯೊ ! ಎಯ್ಯೊ ! ಏಹಿ ! ಯೊ ! ಶಂಭೊ ! ಶಿವೊ ! ಮಾದೇವೊ ! ಓ ! ಏಹಿ ! ಯೊ ! ಎಯ್ಯೊ !ಏಹಿ !ಯೊ !" ಒಂದರ ಬಳಿಕ ಇನ್ನೊಂದು. ಒಬ್ಬರ ಬಳಿಕ ಇನ್ನೊಬ್ಬರು. ಅದು ಮುಗಿಯುವುದಕ್ಕೆ , ಮುಂಚೆ ನಡುವಿರುಳು ದಾಟಿ ಬೆಳಕು ಹರಿದರೂ ಹರಿಯಿತೇ. ಅದನ್ನು ಚೆನ್ನಾಗಿ ತಿಳಿದಿದ್ದ ಪುಟ್ಟಬಸವ ಮನೆಗೆ ಹೊರಡುವ ಯೋಚನೆ ಮಾಡಿದ . ನಾಲಗೆಯಾಗಲಿ ಸಡಿಲವಾಗಿದ್ದ ರಾಮಗೌಡ ಹೇಳಿದ: "ಕೊಡಗರೆಲ್ಲಾ ಒಳ್ಳೆಯವರು. ನಿಮ್ಮಲ್ಲಿ ಭೇದಭಾವನೆ ಇಲ್ಲ. ಎಲ್ಲರೂ ದುಡಿ ತೆಗೆದು ಹಾಡ್ತೀರಿ. ನಮ್ಮಲಿ ಹಾಗಿಲ್ಲ. ದುಡಿ ಹಿಡಿದು ಹಾಡುವ ಜನ ಬೇರೆಯೇ. ಆದರೆ ಇತ್ತೀಚೆಗೆ ಯಕ್ಷಗಾನ ಅಂತ ಒಂದು ಶುರುವಾಗಿದೆ. ಆಹ್ ! ಏನು ಹೇಳ್ತೀರಿ !....ಅದು ಭಾರೀ ತಮಾಷೆಯಾಗಿರ್ತದೆ !" ಪುಟ್ಟಬಸವ ಮೆಲ್ಲನೆದ್ದುನಿಂತ. ರಾಮಗೌಡನೂ ಎದ್ದ . ಏಳಲು ಪ್ರಯಾಸಪಡಬೇಕಾಯಿತು. "ಸ್ವಾಮಿಯೋರು ಯಾಕೆ ಎದ್ದಿರಿ ?" "ಮನೆಯ ಕಡೆಗೆ ಹೋಗ್ತೀನಿ." "ಒಬ್ಬರೇ? ಛೆ ! ಆಗದು ! ನಾನೂ ಬರ್ತೀನಿ ನಡೀರಿ." "ಏನೂ ಬೇಡಿ. ನಾನು ಇದೇ ಊರವನು. ಒಬ್ಬನೇ ಹೋಗಬಲ್ಲೆ."