ಪುಟ:Kanakadasa Haribhakthisara.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮ ಕನಕ ಸಾಹಿತ್ಯ ದರ್ಶನ-೨ ಸುತ್ತು ತೊಡಕನು ಮಾಣಿಬೆಲೆ ಪುರು ಷೋತ್ತಮನೆ ಮನವೊಲಿದು ರಕ್ಷಿಸು ನಮ್ಮನನವರತ ಪಾಪವನು ಪರಿಹರಿಸೆ ನೀ ನಿಜ ರೂಪಿನಲಿ ಬಂದೊಲಿದು ರಕ್ಷಿಸು ನಮ್ಮನನವರತ ೬OI ೧೭೪। ಇಂದು ಈ ಜನ್ಮದಲಿ ನೀನೇ ಬಂಧು ಹಿಂದಣ ಜನ್ಮದಲಿ ಬಳಿ ಸಂದು ಮುಂದಣ ಜನ್ನಕಧಿಪತಿಯಾಗಿ ಇರುತಿರಲು ಎಂದಿಗೂ ತನಗಿಲ್ಲ ತನು ಸಂ ಬಂಧ ನಿನ್ನದು ಎನಗೆ ನೀ ಗತಿ ಯೆಂದು ಬಿನ್ನವಿಸಿದೆನು ರಕ್ಷಿಸು ನಮ್ಮನನವರತ ಐದು ತತ್ತ್ವಗಳಾದವೊಂದ ಕೈದು ಕಡೆಯಲಿ ತತ್ತ್ವವಿಪ್ಪ ತೈದು ಕೂಡಿದ ತನುವಿನಲಿ ವಂಚಿಸದೆ ನೀನಿರಲು ಭೇದಿಸನೆ ಜೀವಾತ್ತ ತಾ ಸಂ ಪಾದಿಸಿದ ಸಂಚಿತದ ಕರ್ಮವ ನಾದರಿಸಿ ಕಲ್ಗೊಂಡು ರಕ್ಷಿಸು ನಮ್ಮನನವರತ ೬OI ೬೫ ಗಣನೆಯಿಲ್ಲದ ಜನನಿಯರು ಮೊಲೆ ಯುಣಿಸಲಾ ಪಯಬಿಂದುಗಳನದ ನೆಣಿಸಲಳವೇ ಸಪ್ತಸಾಗರಕಧಿಕವೆನಿಸಿಹುದು ಬಣಗು ಕಮಲಜನದಕೆ ತಾನೇ ಮಣೆಯಗಾರನು ಈತ ಮಾಡಿದ ಕುಣಿಕೆಗಳ ನೀ ಬಿಡಿಸಿ ರಕ್ಷಿಸು ನಮ್ಮನನವರತ ಎಂಟು ಗೇಣಿನ ದೇಹ ರೋಮಗ ಳೆಂಟು ಕೋಟಿಯ ಕೀಳರುವ ತೆಂಟು ಮಾಂಸಗಳಿಂದ ಮಾಡಿದ ಮನೆಯ ಮನವೊಲಿದು ನೆಂಟ ನೀನಿರ್ದಗಲಿದಡೆ ಒಣ ಹೆಂಟಿಯಲಿ ಮುಚ್ಚುವರು ದೇಹದ ಲುಂಟೆ ಫಲ ಪುರುಷಾರ್ಥ ರಕ್ಷಿಸು ನಮ್ಮನನವರತ ೬೨। ೬೬ ಲೇಸ ಕಾಣೆನು ಜನನ ಮರಣದಿ ಗಾಸಿಯಾದೆನು ನೊಂದೆನಕಟಾ ಲೇಸೆನಿಸಿ ನೋಡಲು ಪರಾಪರವನ್ನು ನೀನಾಗಿ ನೀ ಸಲಹುವವನಲ್ಲವೇ ಕರು ಣಾಸಮುದ್ರನು ನೀನಿರಲು ಕಮ ಲಾಸನನ ಹಂಗೇನು ರಕ್ಷಿಸು ನಮ್ಮನನವರತ ಸ್ನಾನ ಸಂಧ್ಯಾ ಧ್ಯಾನ ಜಪ ತಪ ದಾನ ಧರ್ಮ ಪರೋಪಕಾರ ವಿ ಹೀನ ಕರ್ಮದೊಳಿರುವೆನಲ್ಲದೆ ಬೇರೆ ಗತಿಯುಂಟೆ ಏನು ಮಾಡಿದಡೇನು ಮುಕ್ತಿ ಜ್ಞಾನವಿಲ್ಲದಡಿಲ್ಲ ಭಕ್ತಿಗೆ ನೀನೆ ಕಾರಣನಾಗಿ ರಕ್ಷಿಸು ನಮ್ಮನನವರತ ೬೩ ೬೭ ಕಾಪುರುಷರೈದಾರು ಮಂದಿ ಸ ಮೀಪದಲಿ ಕಾಡುವರು ಎನ್ನನು ನೀ ಪರಾಮರಿಸದೆ ಪರಾಕಾಗಿಹುದು ಲೇಸಲ್ಲ ಶ್ರೀ ಪದಾಬ್ಬದ ಸೇವೆಯಲಿ ನೆರೆ ಕೋಪವೆಂಬುದು ತನುವಿನಲಿ ನೆರೆ ಪಾಪ ಪಾತಕದಿಂದ ನರಕದ ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ದವಲೆ ರಾಪು ಮಾಡದೆ ಬಿಡನು ಯಮನು ನಿ