ಪುಟ:Kanakadasa Haribhakthisara.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೨೦೧ ಬಂದಳಾ ದಮಯಂತಿ ದೇವ ಮು ಕುಂದ ರಕ್ಷಿಸುಯೆನುತ ತನ್ನಯ ನಂದನರ ಸಹಿತೇರಿದಳು ಮಣಿಮಯ ವರೂಥವನು ಹಿಂದೆ ಮುಂದಿಲದ ನಾರೀ ವೃಂದ ನಡೆಯಲು ಮನದ ಹರ್ಷಾ ನಂದದಲಿ ನಡೆತಂದು ಹೊಕ್ಕಳು ನಿಷಧಪಟ್ಟಣವ ಪರಮ ಪುಣೋದಯನು ಸದ್ಗುಣ ಭರಿತ ಸತ್ಯಸುಭಾಷಿತನು ಸಂ ಗರಸುಧೈರ್ಯನು ನಿತ್ಯನಿರ್ಮಲ ನಿಗಮಕೋವಿದನು ಅರಸುಕುಲ ಪಾವನನು ನಳಭೂ ವರನು ಸಿಂಹಾಸನದಿ ರಂಜಿಸಿ ಧರೆಯನಾಳಿದ ವರಪುರದ ಚೆನ್ನಿಗನ ಕರುಣದಲಿ ೬O. |೭೪।। ನೋಡುತಿರ್ದರು ಪುರಜನರು ನೆಲೆ ಮಾಡದುಪ್ಪರಿಗೆಯಲಿ ಮಿಗೆ ಕರು ಮಾಡದೆಡೆಯಲಿ ಸೌಧಗಳ ಜಾಲಂಧ್ರ ಶಿಖರದಲಿ ನೋಡುವರ ತಾ ನೋಡಿ ನಸುನಗು ತಾಡುವರ ನೃತ್ಯದಲಿ ಗಾನವ ಪಾಡುವರ ಕಂಡಲ್ಲಿ ನಲಿಯುತ ಬಂದಳರಮನೆಗೆ ಮುನಿಕುಲಾಂಬುಧಿಚಂದ್ರ ರೋಮಶ ಮುನಿಪ ವಿಸ್ತರಿಸಿದನು ನಳಭೂ ಪನ ಚರಿತ್ರೆಯ ಕೇಳಿ ತಲೆದೂಗಿದನು ಯಮಸೂನು ಮನಕೆ ಹರುಷಾನಂದವಾಯ್ತಲೆ ಮುನಿಪ ನಿಮ್ಮಡಿ ಕರುಣದಲಿ ಇಂ ದೆನಗೆ ಫಲಿಸಿತು ಪುನ್ಯವೆಂದೆರಗಿದನು ಚರಣದಲಿ ೬೧। [೬೫] ಬಾಗಿಲಲಿ ರಥವಿಳಿದು ಬಳಿಕ ಸ ರಾಗದಿಂದೊಳಹೊಗುತಿರಲು ಪ ಗ್ಯಾಂಗನೆಯರಾರತಿಯನೆತ್ತಿದರತುಳ ವಿಭವದಲಿ ಭೋಗಿ ಶಯನನ ಕರುಣ ನಿಮಗುಂ ಟಾಗಿ ಸುಖಿಯಾಗೆಂದು ಹರಸಿದ ರಾಗ ಮುನಿನಿಕುರುಂಬವಕ್ಷತೆ ತಳಿದರಂಗನೆಗೆ ದೇವಮುನಿಗಳು ನೀವು ನಮ್ಮನು ಪಾವನವ ಮಾಡಿದಿರಿ ನಮಗಿ. ನ್ಯಾವುದರಿದುಂಟಿನ್ನು ಪಾರ್ಥನ ಹದನವೇನರಿಯೆ ಆ ವಿವರವೆನಗಿನ್ನು ತಿಳುಹನೆ | ದೇವನಗರಿಯೊಳಿಂದ್ರನಲಿ ಗಾಂ ಡೀವಿ ಸುಸ್ಥಿರನರಸ ಚಿಂತಿಸಬೇಡ ನೀನೆಂದ ೬೬ ಹರಕೆಗಳ ಕೈಕೊಳುತ ಸತಿ ಬಂ ದರಮನೆಯ ಹೊಕ್ಕಳು ನೃಪಾಲನ ಚರಣಕಮಲಕೆ ನಮಿಸಿ ಪಡೆದಳು ಪತಿಯ ಚಿತ್ತವನು ಅರಸ ಕೇಳ್ಳೆ ನಿಷಧಪತಿ ನಿಜ ತರುಣಿ ಸುತರೊಡಗೂಡಿ ಮಂಗಳ ಕರೆದೊಳೊಪ್ಪಿದ ಸಕಲದೇವಾಮರರು ಕೊಂಡಾಡೆ ಎಲೆ ಯುಧಿಷ್ಠಿರ ಕೇಳು ಲೋಕದ ಲಲನೆಯರ ಪರಿಯಲ್ಲಿ ನಾಲ್ವರು ಚೆಲುವೆಯರು ಗುಣಶೀಲಸಂಪನ್ನೆಯರು ಭುವನದಲಿ ನಳಿನಮುಖಿ ದಮಯಂತಿ ಸೀತಾ ಲಲನೆ ದೌಪದಿ ಚಂದ್ರಮತಿ ಕೋ ಮಲೆಯರಚ್ಯುತನಚ್ಚು ಮೆಚ್ಚಿನ ರಾಜವನಿತೆಯರು ೬೩ ೬೭