ಪುಟ:Kanakadasa Haribhakthisara.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೧೮ ಕನಕ ಸಾಹಿತ್ಯ ದರ್ಶನ-೨ ಎಂದು ಶಬ್ದ ಮಾಡುತ್ತಾ ಮೃಗಗಳನ್ನು ಅಟ್ಟುವುದು ಹಕ್ಕೆ-ಆಶ್ರಯ, ನೆಲೆ | ಹಚ್ಚಡ-ಹೊದಿಕೆ, ದುಪ್ಪಟ ಹದನು-ರೀತಿ ಹಡಪ-ಚೀಲ ಹಮ್ಮಳಿಸು-ಸೊಕ್ಕುಮುರಿ ಹಮ್ಮು-ಹೂಡು, ಜೋಡಿಸು ಹರಣ-ಪ್ರಾಣ ಹರಿ-ಓಡು, ಪಲಾಯನ ಹರಿಗೆ-ಗುರಾಣಿ ಹರಿಯ ಮಧ್ಯ-ಸಿಂಹದ ಸೊಂಟ, ಬಡನಡು ಹರಿವು-ಆಗುಮಾಡು, ಪೂರ್ಣಗೊಳಿಸು ಹವಣು-ಪ್ರಮಾಣ, ಲೆಕ್ಕ, ಅಳತೆ, ಹಂಚಿಕೆ ಹಲ್ಲಣಿಸು-ಸಿದ್ಧವಾಗು, ಹಲ್ಲಣ (ಜೇನು) ಹಾಕುವುದು ಹಲುಬು-ಕೊರಗು, ದುಃಖ ಹಸಾದ-ಅಪ್ಪಣೆ ಹಸ್ತಿವಾಹನ-ಇಂದ್ರ ಹಳುವ-ಅರಣ್ಯ ಹಾಸಂಗಿ-ಪಗಡೆದಾಳ, ಲೆತ್ತ ಹಾಸರೆ-ಹಾಸುಬಂಡೆ ಹಿಮಾಂಶುಕುಲ-ಚಂದ್ರವಂಶ ಹಾಹೆ-ಗೊಂಬೆ ಹಿಂತಾಲ-ಒಂದು ಜಾತಿಯ ತಾಳೆಮರ, ಕಿರುತಾಳೆ ಹಿರಣ್ಯ-ಚಿನ್ನ ಹುಡಿ-ಮಣ್ಣು, ದೂಳು ಹುತವಹನ-ಅಗ್ನಿ ಹುರುಳು-ಸಾರ, ಶಕ್ತಿ ಹೂಂಕರಿಸು-ರೋಷದಿಂದ ಕೂಗು ಹೇವರಿಸು-ಜುಗುಪ್ಪೆ ಪಡು ಹೃತಸುಖ-ಸುಖದಿಂದ ವಂಚಿತ, - ಸುಖನೀಗಿಕೊಂಡ ಹೆಬ್ಬಲ-ದೊಡ್ಡಸೇನೆ ಹೂಂಪುಳಿ-ರೋಮಾಂಚನ ಹೊದರು-ಪೊದೆ ಹೊದ್ದು-ಉಂಟಾಗು ಹೊನಲು-ಪ್ರವಾಹ ಹೊಯ್ದ-ಹೊಡೆತ, ಪೆಟ್ಟು ಹೊರಳು-ವ್ಯಾಪಕತೆ, ಬಾಗುವಿಕೆ, ಉರುಳುವುದು ಹೊರಿಗೆ-ಹೋರಾಟ, ಸ್ಪರ್ಧೆ ಹೊರೆ-ಪೊರೆ, ಕಾಪಾಡು, ಕೂಡು, ಸೇರು ಹೊಲಬು-ಕ್ರಮ, ದಾರಿ ಹೊಳಲು-ಪಟ್ಟಣ