ಪುಟ:Kanakadasa Haribhakthisara.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ೩೧. ನಾಕುಲದಿ ಮಾಧವನು ಕರುಣಿಪ ಶ್ರೀ ಕಮಲವಲ್ಲಭನು ಮಿಗೆ ಬಿಡದಾದಿಕೇಶವನು ೧೦೮ ಮಂಗಳಂ ಮಂಗಳಂ ಸರ್ವದಿಭೂತಗೆ ಮಂಗಳಂ ಸರ್ವವನು ಪೊರೆವಗೆ ಮಂಗಳಂ ತನ್ನೊಳಗೆ ಲೋಕವ ಲಯಿಸಿಕೊಂಬವಗೆ ಮಂಗಳಂ ಸರ್ವಸ್ವತಂತ್ರಗೆ ಮಂಗಳಂ ಸಿರಿಗೊಡೆಯ ಚೆನ್ನಿಗರಾಯ ಕೇಶವಗೆ ಮಂಗಳಂ ಜಗದಾದಿ ಮೂರ್ತಿಗೆ ಮಂಗಳಂ ಶ್ರಿತಪುಣ್ಯಕೀರ್ತಿಗೆ ಮಂಗಳಂ ಕರಕಲಿತಚಕ್ರವಿದಳಿತನಕ್ರನಿಗೆ ಮಂಗಳಂ ದೌಪದಿಯ ಪೊರೆದಗೆ ಮಂಗಳಂ ಧುವರಾಜಗೊಲಿದರೆ ಮಂಗಳಂ ಬೇಲೂರ ಚೆನ್ನಿಗರಾಯ ಕೇಶವಗೆ ೨। ಜಯ ಸುರೇಂದ್ರವರಾರ್ಚಿತಾಂಘಿಯೆ ಜಯ ಪುರಾಧಿಪಸಂಸ್ತುತಾತ್ಮನೆ ಜಯ ಮಹಾಮುನಿ ಯೋಗಗಮ್ಮನೆ ಮೇಘಮೇಚಕನೆ ಜಯ ಜನಕಜೆ ಮುಖಾಬ್ಬಮಿತ್ರನೆ ಜಯ ಕಲಾಧಿಪ ಸೂರ್ಯನೇತ್ರನೆ ಜಯ ಜಯ ಜಗನ್ನಾಥ ದೇವನೆ ಚೆನ್ನಕೇಶವನೆ |೩|