ಪುಟ:Kanakadasa Haribhakthisara.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ೩೫ ರಾಮಧಾನ್ಯ ಚರಿತ್ರೆ ಶ್ರೀ ರಮಾಪತಿ ಸಿಂಧುಶಯನ ಮು ರಾರಿ ಮುನಿಕುಲ ಪೂಜಿತಾಂಘಿ ಸ ರೋರುಹಾಕ್ಷ ಸುದರ್ಶನಾಂಕಿತ ದೇವ ಭವದೂರ ಮಾರಪಿತ ಕೌಸಲಾದೇವಿ ಕು ಮಾರ ರಘುಕುಲ ರಾಮನೃಪ ವರ ಪೌರ ಚೆನ್ನಿಗರಾಯ ಪಾಲಿಸು ಸಕಲ ಸಜ್ಜನರ ಗಿರಿಜೆಯರಸನ ಭಜಿಸಿ ಲಕ್ಷ್ಮೀ ವರನ ಪಾದಾಂಬುಜಕೆ ವಂದಿಸಿ ಕರಿಮುಖನ ಬಲಗೊಂಡು ಗೀರ್ವಾಣಿಗೆ ನಮಸ್ಕರಿಸಿ ಗುರುವಿನಂಫಿಗೆ ನಮಿಸಿ ಸತ್ಕವಿ ವರರ ಮನದಲಿ ನೆನೆದು ವರಪುರ ದರಸನನು ಕೊಂಡಾಡಿ ಪೇಳುವೆನೀ ಮಹಾಕಥೆಯ ೨ - ರಾಮಧಾನ್ಯದ ಕೃತಿಯನೀ ಜನ ದಾಮವೆಲ್ಲಾದರಿಸುವಂದದಿ ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ ಪ್ರೇಮದಿಂದಾದರಿಸಿ ಕೇಳ ಸ ನಾಮರಿಗೆ ಸತ್ತರುಣದಲಿ ರಘು ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ ೩. ಧರೆಯನೆಲ್ಲವ ಸೋತು ಜೂಜಲಿ ಕುರುಪತಿಗೆ ಕೈದಳಿಸಿ ತಮ್ಮಂ ದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲು ಪರಮ ಋಷಿ ಶಾಂಡಿಲ್ಯ ಮುನಿ ಸ