ಪುಟ:Kanakadasa Haribhakthisara.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ವೇನು ಕಾರಣ ವಾದವಿದು ನಮ ಗೇನು ಬುದ್ದಿಯನರುಹುವಿರಿ ಪೇಳೆಂದ ನರೆದಲೆಗೆ ಸೆರಗ ಹಿಡಿವುದೆ ಲೇಸೆನುತ ತವೆ ಕರಮುಗಿದು ತಲೆಗು ಪೇಳಿದನಾಗ ನರೆದಲೆಗೆ ೫೨। ೫೬ ಮಸೆದುದಿತ್ತಂಡಕ್ಕೆ ಮತ್ಸರ ಪಿಸುಣ ಬಲರತಿ ನಿಷ್ಟುರರು ವಾ ದಿಸಲು ಕಂಡನು ನೃಪತಿ ಮನದಲಿ ನೋಡಿ ನಸುನಗುತ ಹಿಸುಣರಿವದಿರ ಮತ್ತರವ ಮಾ ಣಿಸುವ ಹದನೇನೆನುತ ಯೋಚಿಸಿ ದಸುರ ಮುನಿಪರ ನೋಡೆ ಗೌತಮ ಮುನಿಪನಿಂತೆಂದ ಆಗಲದಕೇನೆಂದು ಕರುಣಾ ಸಾಗರನು ಬೀಳ್ಕೊಟ್ಟನವರನು ಯೋಗಿಗಳ ವಶಮಾಡಿ ಗೌತಮಮುನಿಯನುಪಚರಿಸಿ ರಾಗ ಮಿಗೆ ಮುನಿವರರನಲ್ಲಿ ಸ ರಾಗದಿಂದಲೆ ಕಳುಹಿ ಬಳಿಕಾ ಯಾಗಸಂರಕ್ಷಕನು ವೀಳೆಯವಿತ್ತನನಿಬರಿಗೆ |೫೩|| |೫೭ ಅರಸುಗಳು ನಾವೆಲ್ಲ ಭೂಮೀ ಸುರರು ನೆರದಿಹ ದಾನವರು ವಾ ನರರು ನಮಗೀ ನ್ಯಾಯವನ್ನು ಪರಿಹರಿಸಲಳವಲ್ಲ ಕರಸುವೆವು ಹರಿಹರವಿರಂಚಾ ದ್ಯರನಯೋಧ್ಯೆಗೆ ಅವರ ಗುಣವಾ ಧರಿಸಿ ಪೇಳ್ವರು ನಯದೊಳೆಂದನು ರಾಮ ನಸುನಗುತ ಹರದುದಾಕ್ಷಣದಲ್ಲಿ ಮದಿ ಸುರರು ಮಿಗೆ ಕೊಂಡಾಡೆ ಭೂಸುರ ವರರು ಕಳುಹಿಸಿಕೊಂಡು ಹೊಕ್ಕರು ತಮ್ಮ ಮಂದಿರವ ಹರುಷ ತಗ್ಗಿತು ತಾವರೆಗೆ ಮುಖ ವರಳಿದವು ನೈದಿಲೆಗೆ ತಾರಕೆ ನೆರೆದುವಾಕಾಶದಲಿ ಅಸ್ತಾಂಬುಧಿಗೆ ಇನನಿಳಿದ |೫೪। |೫೮ ಪರಮ ಧಾನ್ಯದೊಳಿಬ್ಬರೇ ಇವರಿರಲಿ ಸೆರೆಯೊಳಗಾರು ತಿಂಗಳು ಹಿರಿದು ಕಿರಿದೆಂಬಿವರ ಪೌರುಷವರಿಯಬಹುದಿನ್ನು ಪುರಕೆ ಗಮನಿಸಿ ನಾವು ನಿಮ್ಮನು ಕರೆಸುವೆವು ಕೇಳೆನುತಯೋಧ್ಯಾ ಪುರಿಗೆ ಪಯಣವ ಮಾಡಹೇಳಿದನಾ ವಿಭೀಷಣಗೆ ನೆಗಳಿದವು ಬೊಂಬಾಳದೀವಿಗೆ ಝಗಝಗಿಪ ನವರತ್ನದೊಡುಗೆಯ ಹೊಗರೊಗುವ ಕೈದುಗಳ ಸುಭಟರು ಮುಂದೆ ಸಂದಣಿಸೆ ನೆಗಹಿ ಕರಗಳ ಪಾಠಕರು ಬಿರು ದುಗಳ ಹೊಗಳಲು ಚೀರಿದವು ಕಹ ಳೆಗಳು ರಭಸದಿ ಬಂದು ಹೊಕ್ಕನು ನೃಪತಿಯರಮನೆಯ ೫೫। ೫೯ ಸೆರೆಗೆ ನಮ್ಮನು ನೂಕಿ ದೇವರು ಸಿರಿಯ ಮದದಲಿ ಕಳೆದರೆಮ್ಮನು ಮರದು ಸಲಹುವರಾರು ನಿಮ್ಮಯ ಕರುಣ ಹೊರತಾಗಿ ಧರೆಯೊಳಿನ್ನಪಕೀರ್ತಿ ನಾರಿಯ ಗಗನಮಣಿ ದಿಗುತಟವ ಸಾರಲು ಹೊಗರೊಗುವ ಬಲು ಕಾವಳವು ಸಲೆ ಜಗವ ಮುಸುಕಲು ಜನರು ನಿದ್ರಾಂಗನೆಯ ಕೇಳಿಯಲಿ ದೃಗುಯುಗಳನೆವೆ ಬಿಗಿದಿರಲು ಮನ