ಪುಟ:Kanakadasa Haribhakthisara.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೪ ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ೫೫ ತನಿಹನಗ್ರಜನಗ ಖೇದದ ಮನದ ಪರಿತಾಪವನು ಮಾಣಿಸು ಬೇಗ ಹೋಗೆಂದ ಚರಣಕಭಿಮುಖನಾಗಿ ವಂದಿಸಿ ಹರುಷಮಿಗೆ ಹೊರವಂಟು ಹೊಕ್ಕನಯೋಧ್ಯಪುರವರವ ೭೬ IOSOI ಹರುಷಮಿಗೆ ಜನಪದದ ಪರಿಯಂ ತರದಿ ಬಂದನಿಲಜನ ಕಳುಹಿಸಿ ಮರಳಿದನು ಗುಹನಿತ್ತ ಮಾರುತಿ ಮುಂದೆ ಪಥವಿಡಿದು ಬರುತ ಮಾರ್ಗಾಂತರದಿ ಕಾನನ ಗಿರಿ ಶಿಖರಗಳ ಕಳೆದು ಬರೆ ವಿ ಸರದ ನಂದೀಗ್ರಾಮವನು ಕಂಡಲ್ಲಿ ಮನನಲಿದು ಚೀರಿದವು ಕಹಳೆಗಳು ತಮ್ಮಟೆ ಭೇರಿ ಶಂಖ ನಿನಾದ ಹಬ್ಬಿತು ಸಾರಿತಂದಿನ ದಿವಸದಲಿ ಶತ್ರುಘ್ನ ಬಂದನೆನೆ ಆರತಿಯ ತಳಿಗೆಗಳ ಸಂದಣಿ ಕೇರಿ ಕೇರಿಯೊಳ್ಳದಿದವು ಕೈ ವಾರಿಗಳ ಗಡಣದಲಿ ಹೊಕ್ಕನು ರಾಜ ಮಂದಿರವ 1೭೭ IOSOL ಬಂದು ಭರತನ ಕಂಡು ನಮಿಸಿದ ಡೆಂದ ನೀನಾರಿಲ್ಲಿಗಿಂ ತಂದ ಕಾರಣವೇನು ನಿನ್ನಭಿಧಾನವೇನೆನಲು ನಿಂದು ಕೈಗಳ ಮುಗಿದು ನಸುನಗೆ ಯಿಂದ ನುಡಿದನು ಹನುಮ ತಾ ರಘು ನಂದನನ ಸೇವಕನು ಕಳುಹಿದ ದೇವ ನಿಮ್ಮಡಿಗೆ ಜನನಿಯರು ಮೂವರಿಗೆ ನಮಿಸಿದ ತನುಜನನು ತಕ್ಕೆಸಿ ಪೇಳಿದ ನಿನಕುಲಾನ್ವಯ ಬಂದ ಭಾರದ್ವಾಜನಾಶ್ರಮಕೆ ಎನಲು ಹರುಷಾನಂದಮಯರಸ ಹೊನಲಿನೊಳಗೋಲಾಡಿದರು ಮುಖ ವನಜವರಳಿತು ಜನನಿಯರಿಗವನೀಶ ಕೇಳೆಂದ 1೭೮ ೮೨। ರಾವಣನ ಸಂಹರಿಸಿ ಲಂಕೆಯ ನಾ ವಿಭೀಷಣಗಿತ್ತು ಸೀತಾ ದೇವಿ ಲಕ್ಷ್ಮಣ ಸಹಿತ ಭಾರದ್ವಾಜನಾಶ್ರಮಕೆ ದೇವ ಬಂದನು ಸಕಲ ವಿಭವದಿ ನೀವು ಚಿತ್ತದೊಳವಧರಿಸಿಯೆನೆ ಪಾವಮಾನಿಯ ನುತಿಸಿ ತಕ್ರೈಸಿದನು ಭರತೇಂದ್ರ ಕರೆಸಿದನು ಶತ್ರುಘ್ನ ಮಂತ್ರಿ ಶ್ವರ ಸುಮಂತನ ಕೂಡೆ ನುಡಿದನು ತರುಣಿಕುಲ ರಾಜೇಂದ್ರನಣ್ಣನ ಬರವ ಕೇಳಿದೆವು ಪುರವ ಶೃಂಗರಿಸಲ್ಲಿ ಕರಿ ರಥ ತುರಗ ಮೇಳೆಸಿರಲಿ ಮೋದದ ತರುಣಿಯರು ಸಂದಣಿಸಿ ನಡೆಯಲಿ ನೃಪನ ದರುಶನಕೆ ೭೯ ೮೩। ಹರುಷ ಹೆಚ್ಚಿದ ಮನದಿ ತಮ್ಮನ ಕರೆದು ಶತ್ರುಘ್ನನನಯೋಧ್ಯಾ ಪುರಿಗೆ ಕಳುಹಿದ ಜನನಿಯರಿಗೀ ವಾರ್ತೆಯೆಲ್ಲವನು ಅರುಹಿ ಬಾಯೆನಲಗಜನ ಸಿರಿ ಎಂದು ಮಂತ್ರಿಯೋಳರುಹಿ ತಾ ನಿಜ ಮಂದಿರಕೆ ನಡೆತಂದು ಪಯಣವ ನಂದು ಮಾಡಿದ ಜನನಿ ಕೌಸಲದೇವಿ ಮೊದಲಾದ ಇಂದುವದನೆಯರೇರುತಿರ್ದರು