ಪುಟ:Kanakadasa Haribhakthisara.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಮಣ ವಾಸುಕಿಶಯನ ಖಗಪತಿ ಗಮನ ಕಂಜಜನಯ್ಯ ರಕ್ಷಿಸು ನಮ್ಮನನವರತ ಪಕ್ಷ ನಿಗಮಾಧ್ಯಕ್ಷ ವರನಿಟಿ ಲಾಕ್ಷಸಖ ಸರ್ವೆಶ ರಕ್ಷಿಸು ನಮ್ಮನನವರತ ಕ್ಷೀರವಾರಿಧಿಶಯನ ಶಾಂತಾ ಕಾರ ವಿವಿಧ ವಿಚಾರ ಗೋಪೀ | ಜಾರ ನವನೀತಚೋರ ಚಕ್ರಾಧಾರ ಭವದೂರ ಮಾರಪಿತ ಗುಣಹಾರ ಸರಸಾ ಕಾರ ರಿಪುಸಂಹಾರ ತುಂಬುರು ನಾರದಪ್ರಿಯ ವರದ ರಕ್ಷಿಸು ನಮ್ಮನನವರತ ಚಿತ್ರಕೂಟನಿವಾಸ ವಿಶ್ವಾ ಮಿತ್ರ ಕ್ರತು ಸಂರಕ್ಷ ರವಿಶಶಿ ನೇತ್ರ ಭವ್ಯಚರಿತ್ರ ಸದ್ಗುಣಗಾತ್ರ ಸತ್ಪಾತ್ರ ಧಾತ್ರಿಜಾಂತಕ ಕಪಟನಾಟಕ ಸೂತ್ರ ಪರಮ ಪವಿತ್ರ ಫಲ್ಗುನ ಮಿತ್ರ ವಾಕ್ಯವಿಚಿತ್ರ ರಕ್ಷಿಸು ನಮ್ಮನನವರತ ತಾಮರಸದಳನಯನ ಭಾರ್ಗವ ರಾಮ ಹಲಧರರಾಮ ದಶರಥ ರಾಮ ಮೇಘಶ್ಯಾಮ ಸದ್ಗುಣಧಾಮ ನಿಸ್ಲಿಮ ಸಾಮಗಾನ ಪ್ರೇಮ ಕಾಂಚನ ಧಾಮಧರ ಸುತ್ತಮ ವಿನಮಿತ ನಾಮ ರವಿಕುಲಸೋಮ ರಕ್ಷಿಸು ನಮ್ಮನನವರತ ಮಂಗಳಾತ್ಮಕ ದುರಿತತಿಮಿರ ಪ ತಂಗ ಗರುಡತುರಂಗ ರಿಪುಮದ ಭಂಗ ಕೀರ್ತಿತರಂಗ ಪುರಹರಸಂಗ ನೀಲಾಂಗ ಅಂಗದ ಪ್ರಿಯನಂಗಪಿತ ಕಾ ಳಿಂಗಮರ್ಧನ ಅಮಿತ ಕರುಣಾ ಪಾಂಗ ಶ್ರೀನರಸಿಂಗ ರಕ್ಷಿಸು ನಮ್ಮನನವರತ IOO. ವೇದಗೋಚರ ವೇಣುನಾದ ವಿ| ನೋದ ಮಂದರಶೈಲಧರ ಮಧು ಸೂದನಾಚ್ಯುತ ಕಂಸದಾನವರಿಪು ಮಹಾಮಹಿಮ ಯಾದವೇಂದ್ರ ಯಶೋದೆನಂದನ ನಾದಬಿಂದು ಕಳಾತಿಶಯ ಪ್ರ ಹ್ಲಾದರಕ್ಷಕ ವರದ ರಕ್ಷಿಸು ನಮ್ಮನನವರತ ದಾಶರಥಿ ವೈಕುಂಠನಗರ ನಿ ವಾಸ ಕೈಜಗದೀಶ ಪಾಪ ವಿ ನಾಶ ಪರಮವಿಲಾಸ ಹರಿ ಸರ್ವೆಶ ದೇವೇಶ ವಾಸುದೇವ ದಿನೇಶ ಶತ ಸಂ ಕಾಶ ಯದುಕುಲವಂಶತಿಲಕ ಪ ರಾಶರಾನತ ದೇವ ರಕ್ಷಿಸು ನಮ್ಮನನವರತ TOO. ಅಕ್ಷಯಾಶ್ರಿತ ಸುಜನಜನ ಸಂ ರಕ್ಷಣ ಶ್ರೀವತ್ಸ ಕೌಸ್ತುಭ ಮೋಕ್ಷದಾಯಕ ಕುಟಿಲದಾನವ ಶಿಕ್ಷ ಕುಮುದಾಕ್ಷ ಪಕ್ಷಿವಾಹನ ದೇವಸಂಕುಲ ಕುಂದಕುಟ್ಕಲರದನ ಪರಮಾ ನಂದ ಹರಿ ಗೋವಿಂದ ಸನಕ ಸ ನಂದವಂದಿತ ಸಿಂಧುಬಂಧನ ಮಂದರಾದ್ರಿಧರ ಇಂದಿರಾಪತಿ ವಿಜಯಸಖ ಅರ