ಪುಟ:Kanakadasa Haribhakthisara.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ರಾಮಧಾನ್ಯ ಚರಿತ್ರೆ ಧೇನುವಿನ ಸಮ ನಿನ್ನ ಚಿತ್ತದಿ ಹಾನಿದೋರಲದೇಕೆ ಬಿಡು ಬಿಡು ಚಿಂತೆ ಯಾಕೆಂದ ತಪನತನಯನ ಸತಿಯರಿಗೆ ರಘು ನೃಪತಿಕೊಡಿಸಿದನಖಿಳ ದಿವ್ಯಾಂಬರ ಸುಭೂಷಣವ |೧೪೮) ೧೫೨। ದೇವರಿಗೆ ಪರಮಾನ್ನ ನೀ ಮನು ಜಾವಳಿಗೆ ಪಕ್ವಾನ್ನವೀತನು ನೀವು ಧರೆಯೊಳಗಿಬ್ಬರ ಹಿತದಲಿ ನೀವಿಹುದು ನಾವು ಕೊಟ್ಟೆವು ವರವ ಸಲ್ಲುವು ದಾವ ಕಾಲದಲಿನ್ನು ನೀವೇ ಪಾವನರು ಪರಮ ಸುಖಿಯೆಂದುಪಚರಿಸಿದನು ನೃಪತಿ ಪಾಂಡವಾಗ್ರಜ ಕೇಳು ಘನ ಕೋ ದಂಡ ದೀಕ್ಷಾಚಾರ್ ನೀ ಭೂ ಮಂಡಲದೊಳತಿ ಕೀರ್ತಿವಡೆದನು ಸತ್ಯಧರ್ಮದಲಿ ಚಂಡ ವಿಕ್ರಮ ರಾಮನೃಪ ಮಾ ರ್ತಾಂಡಸುತ ಮೊದಲಾದ ವಾನರ ತಂಡವನ್ನು ಕಳುಹಿಸಿ ಸುವಸ್ತುವನಿತ್ತು ಸತ್ಕರಿಸಿ ೧೪೯ ೧೫೩ ನಲವು ಹಿಂಗಿದ ವಿಹಿಯ ರಾಗಿಯು ಜಲವ ಹಸ್ತದೊಳೊರಸಿ ಇಂದ್ರನ | ಬಳಿಗೆ ಕಳುಹುವೆ ನಿನ್ನ ಸಂಶಯವೇಕೆ ಚಿತ್ತದಲಿ ಕಲಿತನವ ಕೈಕೊಂಡು ಸತ್ಯದ ಹೋಲಬುದಪ್ಪದೆ ಚೋಳದೇಶವ ನೋಲಿದು ನೀ ಸಲಹೆಂದು ನೇಮವನಿತ್ತು ಕಳುಹಿಸಿದ ಕರುಣದಿಂದ ವಿಭೀಷಣನ ಪತಿ ಕರಿಸಿ ಕರಿರಥ ತುರಗ ವಸಾ ಭರಣವಿತ್ತುಪಚರಿಸಿ ಕಳುಹಿದನಾಗಳಸುರರನು ಗುರು ವಸಿಷ್ಠನ ಮತದಿ ತಮ್ಮಂ ದಿರು ಸಹಿತ ಸಾಮ್ರಾಜ್ಯವಾಳಿದ ವರದನಗಪತಿಯಾದಿಕೇಶವರಾಯ ವಿಭವದಲಿ ೧೫OI I୦୪ ಪಾಂಡವಾಗ್ರಜ ಕೇಳಿದ್ರೆ ಮಾ ರ್ತಾಂಡ ವಂಶಜ ದಾಶರಥಿಯಾ ಖಂಡಲನ ಮತವಿಡಿದು ಕರಸಿದನುತುಳ ಧಾನ್ಯವನು ಗಂಡುಗಲಿಗಳು ನೀವು ಧರಣೀ ಮಂಡಲದೊಳಾದರಿಸಿ ದೇವರ ನಂಡಲೆದು ಸಲಹೆಂದು ನೇಮವನಿತ್ತು ಕಳುಹಿಸಿದ ಪ್ರೋಮಕೇಶ ವಿರಿಂಚಿ ವಾಸವ ತಾಮರಸದಳನಯನರಿವರು ಮ ಹಾ ಮಹಿಮರೀ ವಿಹಿಯ ನರೆದಲೆಗರ ವಿವಾದವನು ರಾಮ ಸಭೆಯಲ್ಲಿ ತೀರಿದುದು ಸು ತಾಮನೋಲಗದಲ್ಲಿ ಕೇಳೆವು ರಾಮಧಾನ್ಯದ ಕಥೆಯನಭಿವರ್ಣಿಸಿದೆ ನಿನಗೆಂದ ೧೫೧। ೧೫೫। ತಪಸಿಗಳನಾದರಿಸಿ ದೇಶಾ ಧಿಪರ ಮನ್ನಿಸಿ ಧರಣಿಯಮರರ ನುಪಚರಿಸಿ ವಿದ್ವಾಂಸ ಕವಿಜನ ಮಲ್ಲಗಾಯಕರ ಅಪರಿಮಿತ ಯಾಚಕರ ಕಳುಹಿಸಿ ಆಲಿಸಿದೆನೆಲೆ ಮುನಿಪ ನೀವಿದ ಪೇಳೆ ಕೇಳೆನು ಮೇಲೆ ಸಜ್ಜನ ಜಾಲ ತಣಿಯಿತು ಸಕಲ ಕರ್ಣಾಮೃತದಿ ರಂಜಿಸಿತು ಹೇಳಲೇನದ ಮನದ ಬೇಸರ