ಪುಟ:Kanakadasa Haribhakthisara.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ವಿಂದನಾಭ ಪುರಂದರಾರ್ಚಿತ ನಂದಕಂದ ಮುಕುಂದ ರಕ್ಷಿಸು ನಮ್ಮನನವರತ ೧೨। ಕ್ಷೇಮಿಗಳು ನಿನ್ನಯ ಪದಾಬ್ಬ ಕ್ಷೇಮವಾರ್ತೆಯನರುಹಿ ರಕ್ಷಿಸು ನಮ್ಮನನವರತ ೧೨ ಬಾಣಬಾಹುಚ್ಛೇದ ರಾವಣ ಪ್ರಾಣನಾಶನ ಪುಣ್ಯನಾಮ ಪು ರಾಣ ಪುರುಷೋತ್ತಮ ನಿಪುಣ ಅಣುರೇಣು ಪರಿಪೂರ್ಣ ಕೋಣಿಪತಿ ಸುಲಲಿತ ಸುದರ್ಶನ | ಪಾಣಿ ಪಾಂಡವ ರಾಜಕಾರ್ಯ ಧು ರೀಣ ಜಗನಿರ್ಮಾಣ ರಕ್ಷಿಸು ನಮ್ಮನನವರತ ಈಗಲೀ ಮರ್ಯಾದೆಯಲಿ ಶರ ಣಾಗತರ ಸೇವೆಯೊಳು ಹೊಂಪುಳಿ ವೋಗಿ ಬಾಳುವರೇನು ಧನ್ಯರೊ ಹರ ಮಹಾದೇವ ಭೋಗಭಾಗ್ಯವ ಬಯಸಿ ಮುಕ್ತಿಯ ನೀಗಿ ನಿಮ್ಮನು ಭಜಿಸಲರಿಯದ ರಾಗಿಗಳ ಮಾತೇನು ರಕ್ಷಿಸು ನಮ್ಮನನವರತ ೧೩। ೧೭) ನೀಲವರ್ಣ ವಿಶಾಲ ಶುಭಗುಣ ಶೀಲ ಮುನಿಕುಲ ಪಾಲ ಲಕ್ಕಿ ಲೋಲ ರಿಪುಶಿಶುಪಾಲ ಮಸ್ತಕಶೂಲ ವನಮಾಲ ಮೂಲಕಾರಣ ವಿಮಲ ಯಾದವ ಜಾಲಹಿತ ಗೋಪಾಲ ಅಗಣಿತ ಲೀಲ ಕೋಮಲಕಾಯ ರಕ್ಷಿಸು ನಮ್ಮನನವರತ ಭಕ್ತಿಸಾರದ ಚರಿತೆಯನು ಹರಿ ಭಕ್ತರಾಲಿಸುವಂತೆ ರಚಿಸುವೆ ಯುಕ್ತಿಯಲಿ ಬರೆದೋದಿದವರಿಷ್ಟಾರ್ಥ ಸಿದ್ದಿಪುದು ಮುಕ್ತಿಗಿದು ನೆಲೆದೋರುವುದು ಹರಿ ಭಕ್ತರಿದನಾಲಿಪುದು ನಿಜಮತಿ ಭಕ್ತಿಗೊಲಿವಂದದಲಿ ರಕ್ಷಿಸು ನಮ್ಮನನವರತ |೧೪| IOC) ನಾಗನಗರಿ ಧರಿತ್ರಿ ಕೋಶ ವಿ ಭಾಗ ತಂತ್ರವಿಯೋಗ ಗಮನ ಸ ರಾಗ ಪಾಂಡವರಾಜ ಜಿತಸಂಗ್ರಾಮ ನಿಭೀಮ ಯೋಗಗಮ್ಯ ಭವಾಬ್ಬಿ ವಿಷಧರ ನಾಗಗಾರುಡಮಂತ್ರವಿದ ಭವ ರೋಗವೈದ್ಯವಿಚಿತ್ರ ರಕ್ಷಿಸು ನಮ್ಮನನವರತ ನಳಿನಲೋಚನ ನಿನ್ನ ಮೂರ್ತಿಯ ಕಳೆ ಬೆಳಗುತಿದೆ ಲಹರಿಯಲಿ ಭೂ ತಳದೊಳಚ್ಚರಿಯಾದ ನಾಮಾಮೃತ ಸಮುದ್ರದಲಿ ಬಳಸುವರು ಸತ್ಕವಿಗಳವರ ಗ್ಗಳಿಕೆಯೆನಗಿನಿತಿಲ್ಲ ಸನ್ನತಿ ಗಳಿಗೆ ಮಂಗಳವಿತ್ತು ರಕ್ಷಿಸು ನಮ್ಮನನವರತ ೧೫] ಶ್ರೀಮದುತ್ಸಹದೇವಸುತ ಶ್ರೀ ರಾಮ ನಿನ್ನಯ ಚರಣ ಸೇವಕ ಪ್ರೇಮದಿಂ ಸಾಷ್ಟಾಂಗವೆರಗಿಯೆ ಮಾಳೆ ಬಿನ್ನಪವ ಈ ಮಹಿಯೊಳೀವರೆಗೆ ನಾವು ಸು ಗಿಳಿಯ ಮರಿಯನು ತಂದು ಪಂಜರ ದೊಳಗೆ ಪೋಷಿಸಿ ಕಲಿಸಿ ಮೃದುನುಡಿ ಗಳನು ಲಾಲಿಸಿ ಕೇಳ್ವ ಪರಿಣತರಂತೆ ನೀನೆನಗೆ ತಿಳುಹು ಮತಿಯನು ಎನ್ನ ಜಿಹ್ನೆಗೆ