ಪುಟ:Kanakadasa Haribhakthisara.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎರಡನೆಯ ಸಂಧಿ ೮೯ ಎರಡನೆಯ ಸಂಧಿ ಅವಳ ರೂಪಗುಣಾತಿಶಯಗಳ ನೆವಗೆ ಬಣ್ಣಿಸಲಳವೆ ಕೇಳಾ ಯುವತಿ ಲೋಕದ ಸತಿಯ ಬಗೆಯಂತಲ್ಲ ಭಾವಿಸಲು ಪ್ರವಿಮಲಾಕಾರದಲಿ ಮೃದುತರ ಸವಿನುಡಿಯ ಸಂಭಾಷಣೆಗಳಲಿ ಭುವನದೊಳು ನಾ ಕಾಣೆ ದಮಯಂತಿಗೆ ಸಮಾನರನು ಹಲವು ನಯನೀತಿಯಲಿ ಹಂಸೆಯ ಕಳುಹಲಂದಿನ ರಾಯಭಾರದಿ ನಳನೃಪಗೆ ಸತಿಯಾದಳಾ ದಮಯಂತಿ ಮನವೊಲಿದು |೪|| ಕೇಳು ಕುಂತೀತನಯ ಭೀಮನೃ ಪಾಲ ತನುಜೆಗೆ ವಿರಹ ಬಲಿದು ವಿಶಾಲವಾಗಿರಲಿತ್ತ ಕೇಳ್ಳೆ ನಿಷಧ ನಗರಿಯನು ಪಾಲಿಸುವ ನಳಚಕ್ರವರ್ತಿಯು ಮೇಲೆನಿಪ ಸಭೆಯಲ್ಲಿ ರತ್ನದ ಸಾಲುಹೊಳಹಿನ ಸಿಂಹಪೀಠದೊಳೆಸೆದು ಕುಳ್ಳಿರ್ದ ಮುರಹರನ ನಿಜಸೊಸೆಯ ರೂಪಂ ತಿರಲಿ ಚಂದ್ರನ ಮಗಳ ಚೆಲುವಂ ತಿರಲಿ ಮೈನಾಕನ ಸಹೋದರಿಯಂದವಂತಿರಲಿ ಶರಧಿತನುಜೆಯ ಸೌಂದರಿಯವನು ಮರಸಿತೆಂಬುದು ಲೋಕದೊಳಗಾ ಸರಸಿಜಾಕ್ಷಿಯ ಬಗೆಗೆ ಸರಿಯಿಲ್ಲರಸ ಕೇಳೆಂದ IDು. ಗೌಳ ವಂಗ, ಕಳಿಂಗ ಕುಂತಳ ಚೋಳ ಬರ್ಬರ ಸಿಂಧು ಕೇರಳ ಲಾಳ ಮಗಧ ವರಾಳ ಸೌರಾಷಾದಿ ಭೂಮಿಪರ ಬಾಳೆಯರ ಮಂತ್ರಿಗಳ ವೀರಭ ಟಾಳಿ ನಟ ಗಾಯಕರ ಕವಿಗಳ ಜಾಲ ಸಂದೋಹದಲಿ ಮೆರೆದುದು ನೃಪತಿಯಾಸ್ಥಾನ ಮಿಸುನಿಯೋಲೆಯ ಢಾಳ ಕದಪಿನೊ ಆಸೆಯೆ ಮೇಲುದು ಜಾರೆ ಕುಚಭರ ಕುಸಿಯೆ ನಡುವಲ್ಲಾಡೆ ಮಸಗಿದ ಮಂದಹಾಸದಲಿ ಎಸೆವ ಸೋರ್ಮುಡಿ ಭಾರದಲಿ ಬಾ ಗಿಸಿದ ಕೊರಳಿನ ಕೈ ವೀಣೆಯ ಬಿರುಸುಹಾಕ್ಷಿಯ ಸೊಬಗ ಬಣ್ಣಿಸಲರಿಯೆ ನಾನೆಂದ ಆ ಸಮಯದಲಿ ಬಂದನಲ್ಲಿಗೆ ದೇಶಯಾತ್ರಿಕ ಭೂಸುರನೊಳವ ನೀಶ ಕೇಳಿದನಿಳೆಯೊಳೇನುಂಟತಿ ವಿಚಿತ್ರವೆನೆ ಭೂಸುರೋತ್ತಮನೆಂದನೆಲೆ ಧರ ಣೇಶ ಕೇಳು ವಿದರ್ಭನಗರದೊ ಲೇಸು ಪುಣೋದಯದಿ ಪಡೆದನೊ ಭೀಮನೃಪ ಸುತೆಯ ಹೇಳುತಿರೆ ನುಡಿನುಡಿಗೆ ಮೆಚ್ಚುತ ಕೇಳಿ ತಲೆದೂಗಿದನು ನೈಷಧ ನಾಲಿಗಳಿಗೆ ಸರೋಜಮುಖಿ ಗೋಚರಸಿದಂತಾಗೆ ಬಾಲಿಕೆಯ ಮೋಹಿಸಿದ ಪುಷ್ಟಶ ರಾಳಿಯಲಿ ಮನನೊಂದು ಶಿವ ಶಿವ ಲೋಲಲೋಚನೆಯಂತು ತನಗಹಳೆನುತ ಚಿಂತಿಸಿದ ೩।