ಪುಟ:Kanakadasa Haribhakthisara.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎರಡನೆಯ ಸಂಧಿ ಅರುಣಮಯದಾನನದ ಪದಯುಗ. ಗರಿಗಳುನ್ನತ ಧವಳ ದೇಹದ ಪರಮ ತೇಜದೊಳೆಸೆವ ಹಂಸೆಯ ಕಂಡು ಬೆರಗಾಗಿ ಹರಹರಾ! ಇದರಾಯತವ ಮುರ ಹರನು ತಾನೇ ಬಲ್ಲನೆನುತ ಕ್ಯರದಿ ಮೆಲ್ಲನೆ ಕರವ ನೀಡುತ ಪಿಡಿದ ಹಂಸವನು ಮರನ ಹುತ್ತವನೇರಿದರ ಸಂ ಗರದಿ ದೈನ್ಯಂಬಡುವರಾಯುಧ ಮುರಿದ ಬರಿಗೈಯವರ ನೀರೊಳು ಹೊತ್ತು ನಿಂದವರ ತರುಣಿಯರ ಮರೆಗೊಂಡವರ ನಿ ಬರದಿ ಮುರಿದೋಡುವರ ನಿದ್ರಾ ಭರದೊಳಿರ್ದರ ಕೋಲುವುದುಚಿತವೆ ಎಂದುದಾ ಪಕ್ಷಿ |೧೬| ೨೦] ಒದರಿ ಕುಣಿಯಲು ಹಸ್ತದೊಳಗದ ಕದಲದಂತಿರೆ ಪಿಡಿಯಲರಸನ ವದನಕಮಲವ ನೋಡಿ ಹೆದರಿತು ಬಹಳ ಭೀತಿಯಲಿ ಹೃದಯ ಕರಗುವ ಮಾತನೆಂದುದು ಮದಕರಿಗೆ ನೊರಜಂತರವೆ ಕೈ ಸದರದವರನು ಕೋಲುವುದೇನರಿದೆಂದುದಾ ಪಕ್ಷಿ ನುಡಿಗೆ ನಾಚಿದನರಸ ಹಂಸದ ನಡವಳಿಗೆ ಮೆಚ್ಚಿದನು ನಿನ್ನನು ಹಿಡಿದು ಕೊಲುವವನಲ್ಲ ನಿನ್ನಾಲಯಕೆ ಹೋಗೆಂದು ಬಿಡಲು ರೆಕ್ಕೆಯ ಕೊಡಹಿ ಹಾರಿತು ಒಡನೆ ಮರಳಿತು ಧರೆಗೆ ರಾಯನ ಕಡೆಗೆ ಮಂಡಿಸಿ ಕುಳಿತು ನುಡಿದುದು ನೃಪಗೆ ವಿನಯದಲಿ ೧೭ ೧೭| |೨೧|| ಕರಿಗಳನು ಮುರಿದಿಡುವ ಸಿಂಹಕೆ ನರಿಗಳಿದಿರೇ ತಾನು ನಿನಗಂ ತರವೆ ಸಾಕಂತಿರಲಿ ಕಂಡವರೆಲ್ಲ ಕಡುನಗರೆ ಅರಿಭಯಂಕರ ಶತ್ರುಗಳ ಸಂ ಹರಿಸುವುದು ನೃಪನೀತಿ ನಿನಗಿದು ತರವೆ ಬಿಡು ಪರಹಿಂಸೆ ದೋಷವಿದೆಂದುದಾ ಪಕ್ಷಿ ಭೂರಮಣ ಕೇಳಸುವ ಕಾಯುಪ ಕಾರಮಾಡಿದೆ ನೀನು ನಿನಗುಪ ಕಾರ ಮಾಡುವೆನೆನಲದೇನೆಂದರಸ ಬೆಸಗೊಂಡ ಸಾರಹೃದಯನೆ ಚಿತ್ತವಿಸು ವಿ . ಸ್ತಾರದಿಂದರುಹುವೆನು ಭುವನದೊ ಳಾರಿಗುಂಟೀ ಪರಮಸುಕೃತಗಳೆಂದುದಾ ಪಕ್ಷಿ ೧೮ ೨೨| ಬಡಬಗೌತಣವಿಕ್ಕುವೆಡೆಯೊ ಕುಡಿತೆ ಜಲವೇ ಮಂಜು ಸುರಿಯ ಲೊಡನೆ ಕೆರೆ ತುಂಬುವುದೆ ನೃಪ ನೀನೆನ್ನ ಭುಂಜಿಸಲು ಒಡಲಿಗಾಪ್ಯಾಯನವೆ ಕೇಳೆಲೆ ಪೊಡವಿಪತಿ ಬಿಡು ನನ್ನ ಮನೆಯಲಿ ಮಡದಿ ಸುತರುಮ್ಮಳವ ನೋಡೆಂದೊರಲಿತಾ ಪಕ್ಷಿ ಅರಸ ಕೇಳತಿದೂರದಲಿ ಸುರ ಪುರವ ಪೋಲ್ವ ವಿದರ್ಭಪಟ್ಟಣ ದರಸು ಭೀಮನೃಪಾಲನಾತನ ತನುಜೆ ದಮಯಂತಿ ಪರಮ ಪುಣ್ಯಾಂಗನೆ ಮಹಾಸುಂ ದರಿ ನಿಪುಣೆ ಗಜಗಮನೆ ನಯಗುಣ ಭರಿತೆ ಸೊಬಗಿನ ಸೋನೆ ತಾನಿಹಳಲ್ಲಿ ವನಜಾಕಿ ೧೯