ಪುಟ:Kanakadasa Haribhakthisara.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ೯ ಮೊಳಗುವಂದದಿ ನಿನ್ನ ನಾಮಾ ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ ರಿಬ್ಬರೇ ಲೋಕಪ್ರಸಿದ್ದರು ಹಬ್ಬಿಸಿದೆ ಪ್ರಾಣಿಗಳ ರಕ್ಷಿಸು ನಮ್ಮನನವರತ |೨೦| ೨೦l ಪೊಗಳಲಳವೇ ನಿನ್ನ ನಾಮವ ಸುಗುಣ ಸಚ್ಚಾರಿತ್ರ ಕಥನವ ನಗಣಿತೋಪಮ ಅಮಿತ ವಿಕ್ರಮ ಗಮ್ಯ ನೀನೆಂದು ನಿಗಮತತಿ ಕೈವಾರಿಸುತ ಪದ | ಯುಗವ ಕಾಣದೆ ಬಳಲುತಿದೆ ವಾ ಸುಕಿಶಯನ ಸರ್ವೆಶ ರಕ್ಷಿಸು ನಮ್ಮನನವರತ ಸಿರಿಯು ಕುಲಸತಿ ಸುತನು ಕಮಲಜ ಹಿರಿಯ ಸೊಸೆ ಶಾರದೆ ಸಹೋದರಿ ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು ನಿರುತ ಮಾಯೆಯು ದಾಸಿ ನಿಜ ಮಂ ದಿರವಜಾಂಡವು ಜಂಗಮ ಸ್ಥಾ ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ | ೨೧. [೨೫] ವೇದ ಶಾಸ್ತ್ರ ಪುರಾಣ ಪುಣ್ಯದ ಹಾದಿಯನು ನಾನರಿಯೆ ತರ್ಕದ ವಾದದಲಿ ಗುರುಹಿರಿಯರರಿಯದ ಮೂಢಮತಿಯೆನಗೆ ಆದಿಮೂರುತಿ ನೀನು ನೆರೆ ಕರು ಣೋದಯನು ಹೃದಯಾಂಗಣದಿ ಜ್ಞಾ ನೋದಯವನೆನಗಿತ್ತು ರಕ್ಷಿಸು ನಮ್ಮನನವರತ ಸಾಗರನ ಮಗಳರಿಯದಂತೆ ಸ ರಾಗದಲಿ ಸಂಚರಿಸುತಿಹ ಉ ದ್ಯೋಗವೇನು ನಿಮಿತ್ತ ಕಾರಣವಿಲ್ಲ ಲೋಕದಲಿ ಭಾಗವತರಾದವರ ಸಲಹುವ ನಾಗಿ ಸಂಚರಿಸುವುದು ಈ ಭವ ಸಾಗರದಿ ಮುಳುಗಿಸದೆ ರಕ್ಷಿಸು ನಮ್ಮನನವರತ |೨೨| ೨೬ ಹಸಿವರಿತು ತಾಯ್ ತನ್ನ ಶಿಶುವಿಗೆ ಒಸೆದು ಮೋಲೆ ಕೊಡುವಂತೆ ನೀ ಪೋ ಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು ಬಸಿರೊಳಗೆ ಬ್ರಹ್ಮಾಂಡಕೋಟಿಯ ಪಸರಿಸಿದ ಪರಮಾತ್ಮ ನೀನೆಂ ದುಸಿರುತಿವೆ ವೇದಗಳು ರಕ್ಷಿಸು ನಮ್ಮನನವರತ ಹಸ್ತಿವಾಹನನಾದಿಯಾದ ಸ ಮಸ್ತ ದೇವನಿಕಾಯದೊಳಗೆ ಪ್ರ ಶಸ್ತನಾವನು ನಿನ್ನವೋಲ್ ಶರಣಾಗತರ ಪೊರೆವ ಹಸ್ತಕಲಿತ ಸುದರ್ಶನದೊಳರಿ ಮಸ್ತಕವನಿಳುಹುವ ಪರಾತ್ಪರ ವಸ್ತುವಲ್ಲವೆ ನೀನು ರಕ್ಷಿಸು ನಮ್ಮನನವರತ |೨೩|| |೨೭| ಇಬ್ಬರಣುಗರು ನಿನಗೆ ಅವರೊಳ ಗೊಬ್ಬ ಮಗನೀರೇಳು ಲೋಕದ ಹೆಬ್ಬೆಳಸು ಬೆಳೆವಂತೆ ಕಾರಣಕರ್ತನಾದವನು ಒಬ್ಬ ಮಗನದ ಬರೆವ ಕರಣಿಕ ಹಗೆಯರಿಗೆ ವರವೀವರಿಬ್ಬರು ತೆಗೆಯಲರಿಯರು ಕೊಟ್ಟ ವರಗಳ ತೆಗೆದುಕೊಡುವ ಸಮರ್ಥರಾರೀ ಜಗಕೆ ನಿನ್ನಂತೆ ಸುಗುಣರಿನ್ನಾರುಂಟು ಕದನವ