ಪುಟ:Kanakadasa Haribhakthisara.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೦೯ ಆಗಲಾ ದಮಯಂತಿ ಚಿತ್ರದ ಬಾಗಿಲುಪ್ಪರಿಗೆಯಲಿ ರತ್ನದ ತೂಗು ಮಂಚದ ಹಾಸಿನಲಿ ಕುಳ್ಳಿರಲಿ ಕೆಳದಿಯರು ಆ ಗರುವೆಯೋಲಗದೊಳಿರುತಿರೆ ಪೂಗಣೆಯನೆಸುಗೆಯಲಿ ನಳಚರಿ ತಾಗಮದ ಕಥನಗಳ ತಾನಾಲಿಸುತ ಚಿತ್ತದಲಿ ಅಲರ ಪರಿಮಳದೆಡೆಗೆ ತುಂಬಿಗ. ಳೊಲಿದು ಪೋಪಂದದಲಿ ಲೋಕದೊ ಛಲರು ವಿಕಸಿತವಾಗಿ ಹೋಹುದೆ ತುಂಬಿಯಿದ್ದೆಡೆಗೆ. ಸಲೆ ತವಕದಿಂದಮರಪತಿಯೆಡೆ ಗೋಲಿದು ನೀ ಪೋಪಂತೆ ಸುರಪತಿ ನಲುವಿನಿಂದಲಿ ನಿನ್ನ ಬಳಿಗೈದುವನು ಪುಣ್ಯವಲಾ ೨೮. |೩೨| ಬಂದರಲ್ಲಿಗೆ ಸುರಪ ಕಳುಹಿದ ಮದಗಮನೆಯರಖಿಳ ವಸ್ತುವ ತಂದು ಕಾಣಿಕೆಗೊಟ್ಟು ಕೈಮುಗಿದರಗಿ ನಿಂದಿರಲು ಬಂದ ಸತಿಯರ ನೋಡಿ ನೀವೆ ಲ್ಲಿಂದ ಬಂದಿರಿ ನಿಮ್ಮ ಹದನೇ ನೆಂದು ಬೆಸಗೊಳೆ ವಿನಯದಿಂದರುಹಿದರು ಮಾನಿನಿಗೆ ಎನಲು ಕೇಳಿದಳು ನುಡಿಯ ಸುರ ವನಿತೆಗೆಂದಳು ಚಿತ್ತವನಗೊ ಬನಲಿ ಸಿಲುಕಿತು ಮರಳಿಪೊಡೆ ಕಮಲಾಕ್ಷಗಳವಲ್ಲ ಅನಿಮಿಷಾಧಿಪ ತನಗೆ ದೇವಾಂ ಗನೆಯರಿರುತಿರೆ ಮನುಜಸತಿ ಪಾ ವನವೆ ಬರಿದೆ ದುರಾಸೆ ತನಗೇಕೆಂದಳಿಂದುಮುಖಿ ೨೯. |೩೩| ತಾಯೆ ಕೇಳಮರೇಂದ್ರ ನಿಮ್ಮ ನಿ ಜಾಯತದ ಚೆಲುವಿಕೆಯ ಕೇಳಿದು ಕಾಯಜನ ಶರಹತಿಗೆ ನೊಂದುರೆ ಕಳುಹಿದನು ನಮಗೆ ಆಯತದ ಭೂಷಣವ ತೊಡು ಸುರರಾಯನಿಗೆ ಸತಿಯಾಗು ಮರ್ತ್ಯದ ರಾಯರಸ್ಥಿರರವರ ನೆಚ್ಚದಿರೆಂದರಾ ಸತಿಗೆ ಮರಳಿದರು ಸುರಸತಿಯರಿತ್ತಲು ಬರುತೆ ನಳನೃಪತಿಲಕ ತಾ ಮನ ಹರುಷದಲಿ ನಿಜರೂಪ ತಾಳನು ರಾಜತೇಜದಲಿ ಅರಸನಿರೆ ದಮಯಂತಿ ಕಂಡ ಚರಿಯ ಮದನನೊ ನಳನೊ ನಳಕೂ ಬರನೊ ಜಯಂತನೊ ಎನೆ ವಿಸ್ಮಯಗೊಂಡಳಾ ತರುಣಿ |೩OI ೩೪। ಪದವಿ ಯಾವುದು ಲೋಕದಲಿ ಸುರ ಪದವಿಯಲ್ಲದೆ ಬೇರೆ ಮಿಕ್ಕಿನ ಪದವಿಯುಂಟೇ ತಾಯೆ ಭಾವಿಸಿ ನೋಡು ಚಿತ್ತದಲಿ ಸದರವೇ ನರಜನ್ಮದವರಿಗೆ ಒದಗಲರಿಯದು ಪುಣ್ಯ ನಿನಗಿದು ಸುದತಿ ಕರುಣಿಸು ಮಾತನೆಂದರು ನಗುತ ರಂಭೆಯರು ಎಂದು ಪರಿತೋಷದಲಿ ನಾರೀ ವೃಂದ ಸಹಿತದಿರೆದ್ದು ವಿನಯದಿ ನಿಂದು ಕರಗಳ ಮುಗಿದು ಸಿಂಹಾಸನದಿ ಕುಳ್ಳಿರಿಸಿ ತಂದು ಮುಕ್ತಾಫಲಗಳನು ಮುದ ದಿಂದ ಕಾಣಿಕೆಯಿತ್ತು ಸತಿಯರ ಸಂದಣಿಯ ಕೆಲಹೊತ್ತಿ ನುಡಿದಳು ಮಧುರವಚನದಲಿ |೩೧| ೩೫।