ಪುಟ:Kanakadasa Haribhakthisara.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಮೂರನೆಯ ಸಂಧಿ ೧೧೧ ಆರು ನೀವೆಲ್ಲಿಂದ ಬಂದಿರಿ ಕಾರಣವಿದೇನಮ್ಮ ರಾಜ ದ್ವಾರದಲಿ ನೀವ್ ಹೊಕ್ಕ ಹದನೇನಿಲ್ಲಿ ಗಂಡುನೊಣ ಸೇರಲಮ್ಮದು ನೀವಘಡದ ವೀರರತಿ ಸೌಂದರ್ಯರೆನೆ ನಳ ಭೂರಮಣ ನಸುನಗುತ ನುಡಿದನು ಸತಿಗೆ ವಿನಯದಲಿ ಇಳೆಯ ಮರ್ತ್ಯರು ನಾಕನಿಳಯರಿ ಗಳವೆಯಂತವರೆಲ್ಲ ನುಡಿಯಲು ಕುಲಗಿರಿಗೆ ನೊರಜಂತರವೆ ನೀ ನೋಡು ಚಿತ್ರದಲಿ ನಳನೃಪನ ಬಯಸುವಡೆ ನಿನಗವ ನೋಲಿವನೇ ಧಾತ್ರೀಶರೊಳಗ ಸ್ಥಳನೆ ಸಾಕೆಂದೆನಲು ಕನಲಿದು ನುಡಿದಳಾ ತರುಣಿ |೩೬ ೪OI ತರುಣಿ ಕೇಲಮರೇಂದ್ರನಟ್ಟಿದ ಚರನು ತಾ ಮಿಗೆ ನಿನ್ನ ರೂಪನು ಸುರಮುನಿಪನರುಹಿದರೆ ಕೇಳಿದನಿಂದ ವಿರಹದಲಿ ಕರಗಿ ಮದನನ ಶರಹತಿಗೆ ಮನ ಮರುಗಿ ಬಂದಿಹನಿಲ್ಲಿಗಾತಂ ಗರಸಿಯಾಗೆನೆ ಕೇಳಿ ಮುಖದಿರುಹಿದಳು ದಮಯಂತಿ ಮಾನವಾಧೀಶ್ವರರೊಳಗೆ ಸನು ಮಾನವುಳ್ಳವ ಸತ್ಯಸಂಧ ನಿ ಧಾನಿ ಹಿಮಕರವಂಶಪಾವನ ಸಾರ್ವಭೌಮನಲೆ ಆ ನರೇಂದಗೆ ಸರಿಯೆ ಮನುಮುನಿ ದಾನವಾಮರರಿನ್ನು ನಿಮಗೀ ಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ |೩೭| ೪೧. ಬಲ್ಲವರು ನೀವಧಿಕರೆಮೋಳು ಸಲ್ಲದೀ ನುಡಿಯೇತಕಿದು ಶಚಿ ವಲ್ಲಭನ ಮಾತೇನು ಸಾಕಂತಿರಲಿ ಎನಗಿನ್ನು ವಲ್ಲಭನು ನಳನೃಪತಿಯಲ್ಲದೆ ನಲ್ಲರುಂಟೇ ಜಗದಿ ನೀವ್ ಸುರ ರಲ್ಲ ನಿಮ್ಮಭಿಧಾನವೇನೆಂದಳು ಸರೋಜಮುಖಿ ನಿಷಧಪತಿಯೇ ಪತಿಯೆನುತ ಭಾ ವಿಸಿದೆನಾತನ ಕರುಣವೆನ್ನಲಿ ಪಸರಿಸಿದಡದು ಲೇಸು ಲೇಸಲ್ಲದೊಡೆ ನಳನೃಪಗೆ ಅಸುವ ತರುವೆನು ಎನಗೆ ಫಲ ಸಿ ದ್ವಿಸಲಿದೇ ಸಂಕಲ್ಪವೆಂದಾ ಶಶಿವದನೆ ಕಂಬನಿಯ ಮಿಡಿದಳು ನಖದ ಕೊನೆಯಲ್ಲಿ [೩೮] ದೂತರಲಿ ಕುಲಗೋತ್ರಗಳ ನೀ ನೇತಕರಸುವೆ ತರುಣಿ ಇಂದ್ರನು ಖ್ಯಾತ ಪುರುಷನು ಬಯಸುವುದು ಕೃತಪುಣ್ಯ ನಿನಗಿನ್ನು ಭೂತಳದ ನರರಧಿಕರೇ ಸಂ ಪ್ರೀತಿಯೇಕವರಲ್ಲಿ ಬಿಡು ಪುರು ಹೂತನನು ಕೈವಿಡಿದು ನೀ ಸುಖಿಯಾಗು ನಡೆಯೆಂದ ಕರಗಿತಂತಃಕರಣ ನೃಪತಿಗೆ ಸರಸಿಜಾಕ್ಷಿಯ ದೃಢವ ಕಂಡನು ಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆ ಸರಸಿಜಾನನೆ ಕೇಳು ತಾನೇ ಧರಣಿಪತಿ ನಳನೆನಲು ಲಜ್ಜಿಸಿ ಶಿರವ ನಸುಬಾಗಿದಳು ಮತ್ತಿಂತೆದಳಾ ನೃಪಗೆ [೩೯] ೪೩।