ಪುಟ:Kanakadasa Haribhakthisara.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ೧೧ ಬಗೆದು ನಿನ್ನೊಳು ಜಯಿಸುವವರೀ ಜಗದೊಳುಂಟೇ ದೇವ ರಕ್ಷಿಸು ನಮ್ಮನನವರತ ಹಸದಿ ಮೆರೆದವನಾಗಿ ನೀ ಮೆ ಚೈಸಿದೆ ತ್ರಿಜಗವನೆಲ್ಲ ರಕ್ಷಿಸು ನಮ್ಮನನವರತ ೨೮ |೩೨| ಸುಮನಸರ ವೈರದಲಿ ಕೆಲಬರು ಕುಮತಿಗಳು ತಪದಿಂದ ಭರ್ಗನ ಕಮಲಜನ ಪದಯುಗವ ಮೆಚ್ಚಿಸಿ ವರವ ಪಡೆದಿಹರು ಸಮರ ಮುಖದೊಳಗುಪಮೆಯಲಿ ವಿ ಕ್ರಮದಿ ವೈರವ ಮಾಡಿದವರಿಗೆ ಅಮರಪದವಿಯನಿತ್ತೆ ರಕ್ಷಿಸು ನಮ್ಮನನವರತ ಎಲ್ಲರಲಿ ನೀನಾಗಿ ಸುಮನಸ ರಲ್ಲಿ ಅತಿಹಿತನಾಗಿ ಯಾದವ ರಲ್ಲಿ ಬಾಂಧವನಾಗಿ ದಾನವರಲ್ಲಿ ಹಗೆಯಾಗಿ ಕೊಲ್ಲಿಸಿದೆ ಭೀಮಾರ್ಜುನರ ಕೈ ಯಲ್ಲಿ ಕೌರವ ಕುಲವನೆಲ್ಲವ ಬಲ್ಲಿದನು ನೀನಹುದು ರಕ್ಷಿಸು ನಮ್ಮನನವರತ ೨೯) |೩೩| ಬಲಿಯ ಬಂಧಿಸಿ ಮೊರೆಯಿಡುವ ಸತಿ ಗೊಲಿದು ಅಕ್ಷಯವಿತ್ತು ಕರುಣದಿ ಮೊಲೆಯನುಣಿಸಿದ ಬಾಲಿಕೆಯ ಪಿಡಿದಸುವನಪಹರಿಸಿ ಶಿಲೆಯ ಸತಿಯಳ ಮಾಡಿ ತ್ರಿಪುರರ ಲಲನೆಯರ ವ್ರತಗೆಡಿಸಿ ಕೂಡಿದ ಕೆಲಸ ಉತ್ತಮವಾಯ್ತು ರಕ್ಷಿಸು ನಮ್ಮನನವರತ ನರಗೆ ಸಾರಥಿಯಾಗಿ ರಣದೊಳು ತುರಗ ನೀರಡಿಸಿದರೆ ವಾರಿಯ ಸರಸಿಯನು ನಿರ್ಮಿಸಿ ಕಿರೀಟಿಯ ಕೈಲಿ ಸೈಂಧವನ ಶಿರವ ಕೆಡುಹಿಸಿ ಅವನ ತಂದೆಯ ಕರತಳಕೆ ನೀಡಿಸಿದೆ ಹರಹರ ಪರಮ ಸಾಹಸಿ ನೀನು ರಕ್ಷಿಸು ನಮ್ಮನನವರತ |೩OI |೩೪|| ಕರಿಯ ಕಾಯಾ ಜಲದಿ ಮಕರವ ತರಿದು ಹಿರಣ್ಯಾಕ್ಷಕನ ಸೀಳು ತರಳನನು ತಲೆಗಾಯ್ತು ಶಕಟಾಸುರನ ಹತಮಾಡಿ ದುರುಳ ಕಂಸನ ಕೊಂದು ಮಗಧನ ಮುರಿದು ವತ್ಸನ ಹಮ್ಮಳಿಸಿ ಖರ ಹರಣವನು ಹಿಂಗಿಸಿದೆ ರಕ್ಷಿಸು ನಮ್ಮನನವರತ ಬವರದಲಿ ಖತಿಗೊಂಡು ಗದೆಯೊಳು ಕವಿದು ನಿನ್ನ ಶ್ರುತಾಯುಧನು ಹೊ ಕವಘಡಿಸಿ ಹೊಯ್ದಾಡಿ ತನ್ನಾಯುಧದಿ ತಾ ಮಡಿದ ವಿವರವೇನೋ ತಿಳಿಯೆನೀ ಮಾ ಯಮನು ನೀನೇ ಬಲ್ಲೆ ನಿನ್ನಾ ಯವನು ಬಲ್ಲವರುಂಟೆ ರಕ್ಷಿಸು ನಮ್ಮನನವರತ |೩೧| |೩೫|| ಶಿಶುತನದ ಸಾಮರ್ಥ್ಯದಲಿ ಕೆಲ ರಸುರರನು ಸಂಹರಿಸಿ ಚಕ್ರವ ಬಿಸುಟು ಯೌವನ ಕಾಲದಲಿಯಾ ಪಾಂಡುಸುತರಿಂದ ವಸುಮತಿಯ ಭಾರವನಳುಹಿ ಸಾ ಇಳೆಗೆ ಪತಿಯಾದವನು ಯಾದವ ರೊಳಗೆ ಬಾಂಧವ ನಿನಗೆ ಸೋದರ ದಳಿಯನಾದಭಿಮನ್ಯುವನು ಕೊಲ್ಲಿಸಿದೆ ಕೊಳುಗುಳದಿ ಅಳಲಿನಬುಧಿಯೊಳದ್ದಿ ತಂಗಿಯ