ಪುಟ:Kanakadasa Haribhakthisara.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಐದನೆಯ ಸಂಧಿ ೧೩೩ ಐದನೆಯ ಸಂಧಿ ನುಡಿಯ ಕೇಳುತ ಮನದಿ ಮಿಡುಕುತ ಪೊಡವಿಪತಿ ಸತಿಸಹಿತ ಘನಘೋ ರಡವಿಯಲಿ ಬರುತಿರೆ ಜಗನ್ನೋಹನದ ಪಕ್ಷಿಗಳು ಪೊಡವಿಗಿಳಿಯಲು ಕಂಡಪೇಕಿಸಿ ಪಿಡಿವೆನೆಂದುರವಣಿಸಿ ನೃಪ ಹ ಶೃಡವ ಬೀಸಿದಡದನು ಕೊಂಡೊಯ್ಯುವು ನಭಸ್ಥಳಕ್ಕೆ ಅಡವಿಯಲಿ ಪತಿ ಕಳೆದುಬಿಡೆ ಫಣಿ ಯೊಡಲಿಗಿಳಿಯದೆ ಮುಂದೆ ಕರಿಗಳ ಪಡೆಗೆರಗಿ ದಮಯಂತಿ ಹೊಕ್ಕಳು ಚೈದ್ಯನಗರಿಯನು ಕೇಳು ಕುಂತೀತನಯ ನಳನೃಪ ಬೀಳುಕೊಟ್ಟನು ಪುರವನಲ್ಲಿಂ ಮೇಲೆ ನಡೆದರು ಪಯಣಗತಿಯಲಿ ಹಲವು ಯೋಜನವ ಹೇಳಲೇನದನವರ ವಿಧಿಯನು ತಾಳಿಗೆಗಳೊಣಗಿದವು ಸತಿಯಳ ಕಾಲೊಡೆದು ಸುರಿವರುಣಜಲದಲಿ ಬಟ್ಟೆ ಕೆಸರಾಯ್ತು ಮೂಗಿನಲಿ ಬೆರಳಿಟ್ಟು ಮಕುಟವ ತೂಗಿದನು ನಸುನಗುತ ನಿಂದಿರ ಲಾಗ ಸೂಚಿಸಿದವು ನಿರಂತರ ರಾಜ್ಯಭೋಗವನು ಬೇಗದಿಂದಪರಿಹರಿಸಿಕೊಂಡವ ರೀಗವಾವಿದನರಿದಿರೆಂದು ಸ ರಾಗದಿಂದಲಿ ಮಾಯವಾದವು ಪಕ್ಷಿಯುಗಳಗಳು IDು. ೧l ಎಳೆಯ ಬಾಳೆಯ ಸುಳಿಯು ಅನಲನ ಜಲದ ಹೊಯ್ದಲಿ ನೊಂದವೋಲ್ ಕಡು ಬಳಲಿದಬಲೆಯ ಕಂಡು ನೃಪ ಮರುಗಿದನು ಮನದೊಳಗೆ ಲಲಿತ ಹೇಮದ ತೂಗುಮಂಚದ ಹೊಳೆವ ಮೇಲ್ವಾಸಿನಲಿ ಮಲಗುವ ಲಲನೆಗೀ ವಿಧಿ ಬಂದುದೇ ಹಾಯೆನುತ ಬಿಸುಸುಯ್ದ ಧರಣಿಪತಿ ಕೇಳ್ ನಿಷಧಪತಿ ಕಲಿ ಪುರುಷ ಮಾಯವ ಬಲ್ಲನೇ ಮನ ಮರುಗಿ ನಿರ್ವಾಣದಲಿ ನಿಂದಿರಲಾಗ ಸತಿ ಕಂಡು ಹರಹರಾ ಎನುತಾಗ ಸೀರೆಯ ಸೆರಗನರಿದಿತ್ತಳು ನೃಪಾಲಗೆ ಶಿರವ ನಸುಬಾಗಿದನು ನಾಚಿಕೆಯಾಗಲಿಂತೆಂದ ಮರುಗಲಿನ್ನೇಕರಸ ಬಿಡು ವಿಧಿ ಬರೆದ ಬರೆಹವ ತಪ್ಪಿಸಲು ಹರಿ ಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು ಹರೆವುದಾಕ್ಷಣ ತುಂಬುವುದು ಗೋ ಚರಿಸುವುದು ಸಿರಿ ನಿತ್ಯವೇನಿದ ನರಿಯದವನೇ ನೋಯಲೇಕೆಂದಳು ಸರೋಜಮುಖಿ ಧರೆಯ ನೃಪರಿಗೆ ನಿಷಧಪುರಪತಿ ಯರಮನೆಯ ಬಾಗಿಲಿನ ಸುಮುಖವು ದೊರಕಲದು ತಾ ಪುಣ್ಯವೆಂಬೀಯರಸುತನ ನಮಗೆ ಹರೆದುದೆಲ್ಲ ಸಮಸ್ತ ರಾಜ್ಯದ ಸಿರಿಗೆ ಬಾಹಿರನಾಗಿ ಸತಿಯಳ ಸೆರಗನುಡುವಂತಾಯ್ಕೆ ಹರಹರಾ ಎನುತ ಬಿಸುಸುಯ್ದ |೩|