ಪುಟ:Kanakadasa Haribhakthisara.pdf/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಐದನೆಯ ಸಂಧಿ ೧೩೫ ಧರೆಯ ಸಂಪದದಷ್ಟ ಭೋಗವ ಪರಿಹರಿಸಿ ನಿಜಪುತ್ರಮಿತ್ರರ ತೊರೆದು ನಂಬಿದ ಸತಿಯ ಘೋರಾರಣ್ಯ ಮಧ್ಯದಲಿ ಹಿರಿದು ಬಳಲಿಸಿ ನೋಯಿಸಿದೆ ಕೇಳ್ ತರುಣಿ ಎನ್ನವೋಲಾರು ಪಾಪಿಗ ಳಿರದೆ ನೀ ಹೋಗಿನ್ನು ತಂದೆಯ ಮನೆಗೆ ನಡೆಯೆಂದ ಶೋಕವೇಕೆ ತರುಣಿ ಬಾರೆಂ ದಾ ಕಮಲಲೋಚನೆಯ ತೋಳಿನೊ ಲೌಕಿ ಬಿಗಿಯಪಿದನು ಸೆರಗಿನೊಳೊರಸಿ ಕಂಬನಿಯ ಜೋಕೆಯಲಿ ಕುಳ್ಳಿರಿಸಿ ತೊಡೆಯೋಳ ನೇಕ ಪ್ರೀತಿಯೋಳೆಂದ ನೀನವಿ ವೇಕಿಯೇ ಬಿಡು ಮನದ ದುಗುಡವನೆಂದನಾ ನೃಪತಿ ೮). ೧೨। ಇನಿಯನಾಡಿದ ನುಡಿಗೆ ಅಂಗನೆ ಕನಲಿ ನುಡಿದಳು ಶೋಕದಲಿ ನೀ ನಿನಿತು ಮುನಿದಾಡುವರೆ ಸಾಕಿನ್ನಾರು ಗತಿಯೆನಗೆ ಅನುದಿನವು ನಾ ನಿಮ್ಮ ಪದಯುಗ ವನಜವನು ಭಜಿಸುವುದ ತೊರೆದೀ ತನುವ ಸೈರಿಸಲಾಪನೇ ಹೇಳೆಂದಳಿಂದುಮುಖಿ ಎಂದು ಸತಿಯಳ ಸಂತವಿಟ್ಟರ ವಿಂದನಾಭಧ್ಯಾನದಲಿ ಬರೆ ಮುಂದೆ ಘೋರಾರಣ್ಯವೆಸೆದುದು ಘನಭಯಂಕರದಿ ಸಂದ ಖಗ ಮೃಗವಲ್ಲಿ ನೆರೆದಿರೆ ಬಂದು ಹೊಕ್ಕರು ಕಾನನವನರ ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ ೯) [೧೩ ನೆಳಲು ತನುವಿನ ಬಳಿಯೊಳಲ್ಲದೆ ಚಲಿಸುವುದೆ ತಾ ಬೇರೆ ನಿಮ್ಮಡಿ ನಳಿನದಲಿ ಸುಖದುಃಖವಲ್ಲದೆ ಬೇರೆ ಗತಿಯುಂಟೆ ಹಳುವವೇ ಸಾಮ್ರಾಜ್ಯ ನಿಮ್ಮಡಿ ನೆಳಲಿನಲಿ ತಾನಿರುವೆನಲ್ಲದೆ ನಿಳಯವೇ ನನಗಡವಿಯೆಂದೆರಗಿದಳು ಪದಯುಗಕೆ ಲೋಕಕಧಿಪತಿ ನಳನ ರಾಣಿಗೆ ಶೋಕ ಪರ್ಬದ ತೆರದಿ ಕತ್ತಲೆ ಲೋಕವನು ಮುಸುಕಿದುದು ಭರಣಿಯ ಮುಚ್ಚುವಂದದಲಿ ಭೀಕರಧ್ವನಿಗಳಿಗೆ ಹೆದರಿದ ಳಾ ಕಮಲಲೋಚನೆಯ ಕಂಡು ವಿ ವೇಕನಿಧಿ ಸಂತಯಿಸಿ ಬಿಗಿಯಪ್ಪಿದನು ತೂಪಿರಿದು ೧೦|| |೧೪|| ಎನುತ ಸುರಿದಳು ಕಣ್ಣಿನಲಿ ಕಂ ಬನಿಯ ಮಿಡಿದಳು ಬೆರಳಿನಲಿ ಮು ನಲಿ ಮಾಡಿದ ಕರ್ಮಫಲವಿದಕೇನ ಮಾಡುವುದು ಎನಗೆ ಚಿಂತಿಸಲೇಕೆ ನೀನಿಂ ದಿನಲಿ ನಿರ್ಮಲ ಚಿತ್ತದಲಿ ಕಾ ನನವ ಸಂಚರಿಸುವೆನು ನಿಮ್ಮೊಡನೆಂದಳಿಂದುಮುಖಿ ತರುಣಿಯಂಜದಿರಂಜದಿರು ವಿಧಿ ಬರೆದ ಬರೆಹವಿದೆನುತ ವೃಕ್ಷದ ತರಗೆಲೆಯ ಹಾಸಿನಲಿ ಮಲಗಿಸಿ ಸತಿಯನೀಕ್ಷಿಸುತ ವರರತುನ ಮಂಚದಲಿ ಪವಡಿಸಿ ಪರಮ ಸುಖವಿಹ ಸತಿಗೆ ವಿಧಿಯಿದು ಹರಹರಾಯೆನುತರಸ ಕಂಬನಿದುಂಬಿದನು ಮರುಗಿ ೧೧. |೧೫|