ಪುಟ:Kanakadasa Haribhakthisara.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩೮ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಐದನೆಯ ಸಂಧಿ ೧೩೯ ಕಾಣಿರೇ ಅರಸಂಚೆಗಳೆ ನೀವ್ ಕಾಣಿರೇ ನಿಜಪತಿಯ ಶುಕ ಪಿಕ ಕಾಣಿರೇ ಮೃಗ ಪಕ್ಷಿಗಳೆ ನಳಚಕ್ರವರ್ತಿಯನ್ನು ಕಾಣಿರೇ ತರುಲತೆಗಳಿನಿಯನ ಕಾಣಿರೇ ನೀವೆಂದು ಶೋಕದೊ ಛೇಣ ಲೋಚನೆ ಹಲುಬಿದಳು ಹಲವಂಗದಲಿ ಪತಿಯ ಹಾ ರಮಣ ನಳನೃಪತಿ ತನ್ನನ ದಾರಿಗೊಪ್ಪಿಸಿ ಕಳೆದೆ ಹರಿಹರಿ ರಸರ್ಪನ ಬಾಯ್ದೆ ತುತ್ತಾದೆನೆ ಜಗನ್ನಾಥ ಆರಿಗೊರಲುವನಿನ್ನು ಪ್ರಾಣವ ನಾರು ಕಾವವರಕಟ ಬಿಡಿಸ್ಯೆ ವಾರಿಜಾಕ್ಷ ಮುಕುಂದ ಸಲಹೆಂದೋರಲಿದಳು ತರಳೆ |೨೪| ೨೮) ಮುಡಿಕೆದರಿ ಹುಡಿಯೊಳಗೆ ಹೊರಳುತ ಲೊಡಲನೀಡಾಡಿಗಳು ಧರೆಯೊಳ ಗಡವಿ ಪಾಲಾಗೆಂದು ಪಡೆದಳೊ ತನ್ನ ನಿಜಜನನಿ ಮಡದಿಯರು ತನ್ನಂತೆ ಲೋಕದೊ ಳೊಡಲ ತೆತ್ತವರುಂಟೆ ಶೋಕದಿ ಪೊಡವಿಪತಿ ಮುಖದೋರೆನುತ ಹಂಬಲಿಸಿದಳು ಪತಿಯ ಶೈಲಶಿಖರದೊಳಿರ್ದು ಕೇಳಿದ ಬಾಲಕಿಯ ಶೋಕವನು ಬಿಲ್ಲಿನ ಕೋಲುಗಾರನು ಕರದ ಖಡ್ಡದ ಶಬರನೈತಂದು ಆ ಲತಾಂಗಿಯ ಪಿಡಿದು ನುಂಗುವ ಕಾಲಭುಜಗನ ಕಂಡು ನಿಜ ಕರ ವಾಳದಲಿ ಖಂಡಿಸಿದನಹಿಯನು ಬಿಡಿಸಿದನು ಸತಿಯ ೨೫] ೨ | ಮಾನವಾಧಿಪ ಕೇಳು ಬನದಲಿ ಮಾನಿನಿಗೆ ಮತ್ತೊಂದು ಕಂಟಕ ಹಾನಿ ಬಂದುದನೇನನೆಂಬೆನು ಪತಿಗೆ ಬಾಯ್ದಿಡುತ ಕಾನನದ ಬಳಿವಿಡಿದು ಬರೆ ಸು ಮ್ಯಾನದಲಿ ತರಗೆಲೆಯ ಹಕ್ಕೆಯ ಮೌನದಲಿ ಉರಗೇಂದ್ರನಿದ್ದನು ಬಲಿದ ನಿದ್ರೆಯಲಿ ಹಾಯೆನುತ ಸುರರುಲಿಯೆ ಹಾವಿನ ಬಾಯೊಳಗೆ ಸಿಲುಕಿರ್ದ ಕಮಲದ ಳಾಯತಾಕ್ಷಿಯ ಬಿಡಿಸಿದನು ಸಂತೈಸಿದನು ಸತಿಯ ರಾಯ ಕೇಳ್ಳೆ ರಾಹುವಿನ ಕಟ ವಾಯ ಚಂದ್ರನ ಸೆಳೆವವೋಲರಿ ದಾಯಿತಬಲೆಗೆ ಮೂರ್ಚೆ ತಿಳಿದುದು ಶಬರಮಂತ್ರದಲಿ ೨೬। |೩೦ ತರಳೆ ಕಾಣದೆ ಬರುತ ಮೆಟ್ಟಿದ ತುರಗಪತಿಯನು ಕೋಪದಲಿ ಮಿಗೆ ಸುರಿವ ಗರಳದಿ ರೌದ್ರಮಯ ರೂಪಿನಲಿ ಬಾಲಕಿಯ ತರುಬಿ ಹಿಡಿದುದು ತವಕದಲಿ ಹಿಮ ಕರನ ನುಂಗುವ ರಾಹುವಿನವೋಲ್ ಅರಸ ಕೇಳಂಗನೆಯ ವಿಧಿಯನು ಹೇಳಲೇನೆಂದ ಬಂದು ಕೆಂದಾವರೆಯ ಕೊಳದಲಿ ಮಿಂದು ನಿಂದಿರೆ ಶಬರನೆಂದನು ಇಂದುಮುಖಿ ನೀನೆನಗೆ ಸತಿಯಾಗೆನಲು ಖತಿಗೊಂಡು ಇಂದೆನಗೆ ಅಸುವಿತ್ತು ಸಲಹಿದ ತಂದೆಯಲ್ಲವೆ ನೀನು ಕೇಳು ಪು ಳಿಂದ ಮುಳಿದರೆ ಶಪಿಸುವೆನು ಹೋಗೆಂದಳಿಂದುಮುಖಿ ೨೭ ೨೭| |೩೧|