ಪುಟ:Kanakadasa Haribhakthisara.pdf/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

୦୬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಐದನೆಯ ಸಂಧಿ ೧೪೩ ನೋಡಿದಳು ದಮಯಂತಿ ಭೀತಿಯ ಲೋಡುತಿಹ ಬೀಡಿಕೆಯ ವೈಶ್ಯರ ಹೇಡಿತನವನ್ನು ಕಂಡು ನಸುನಗುತಲ್ಲಿಗೈತಂದು ಓಡಲೇತಕೆ ನಿಮಗೆ ಉಪಹತಿ ಮಾಡುವಲು ತಾನಲ್ಲ ಜಗಕತಿ ರೂಢಿಸಿದ ನಳನೃಪನ ಸತಿ ತಾನೆಂದಳಿಂದುಮುಖಿ ಅವನಿಪತಿ ಕೇಳ್ ವೈಶ್ಯಕುಲಸಂ ಭವರು ಹಾಯ್ದಿದರಲ್ಲಿ ಗೂಡಾ ರವನು ಬಿಟ್ಟರು ಪಾಳೆಯವ ಮಲಗಿದರು ರಾತ್ರಿಯಲಿ ಅವಧಿ ಬಂಧುದನೇನನೆಂಬೆನು ಕವಿದು ಕಾಡಾನೆಗಳು ಮಡುವಿಗೆ ತವಕದಿಂ ನೀರಡಿಸಿ ಬಂದುದು ಗಿರಗಳಂದದಲಿ ೪OI ವೀರಸೇನನ ತನಯ ನಳಪ ಧಾರಿಣಿಯನುರೆ ಸೋತು ಕಾರ್ಯದ ಕಾರಣದಿ ನಡೆತಂದನಡವಿಗೆ ತನ್ನನಗಲಿದನು ದಾರಿದಪ್ಪಿದೆನಲ್ಲಿ ನಿಮ್ಮನು ಸೇರಿದೆನು ಪರದೇಶಿ ತನಗೊಂ ದೂರ ತೋರಿರೆ ನೀವೆನುತ ತುಂಬಿದಳು ಕಂಬನಿಯ ಮುರಿದು ತರುಗಳನಿಡುತ ಮೆಳೆಗಳ ನೊರಸಿ ಮುಟ್ಟುತ ಕೋಡಿನಲಿ ಬಲು ಮೊರಡಿಗಳ ಕಿತ್ತಿಡುತ್ತ ಸೊಂಡಿಲ ತೂಗಿ ಮದವೇರಿ ಕರಿಗಳ್ಳತರೆ ಕಂಡು ಭೀತಿಯೊ ಳಿರದೆ ಹಾಯ್ದರು ಕೆಲವು ಧೈರ್ಯದೊ ಳುರುಬಿ ನಿಂದರು ಸಬಳದಲಿ ಹೊಕ್ಕಿರಿದು ಕಾದಿದರು ೪O [೪೫] ತಾಯೆ ನಿಮ್ಮ ಪದಾಬ್ಬದರ್ಶನ ವಾಯಿತೆಮಗಿಂದಿನಲಿ ಧನ್ಯರು ಈಯವಸ್ಥೆಗೆ ತಂದುದೇ ವಿಧಿ ನಿಮ್ಮನೆನುತೆರಗಿ ನೋಯದಿರಿ ಇದೆ ಚೈದ್ಯಪುರವೆಂ ದಾ ಯುವತಿಯೊಡಗೊಂಡು ಬರುತಿರೆ ತೋಯಜಾಸ್ತನು ಪಶ್ಚಿಮಾಂಬುಧಿಗಿಳಿದನೋಲವಿನಲಿ ತೂಳಿದುವು ಮದಕರಿಗಳವರನು ಸೀಳಿ ಹಾಯುವು ಕೆಲರ ಮುಮೊನೆ | ಯಾಳು ಕವಿದುದು ಹೊಕ್ಕು ಕಾದಿದರತುಳ ಭುಜಬಲರು ತಾಳಬಲ್ಲರೆ ಕೆಲರು ಕರಿಗಳ ದಾಳಿಗಿದಿರೇ ಮುರಿದು ಹಾಯ್ದರು ಹೇಳಲೇನದನರಸ ತೆಗೆದೋಡಿದರು ದೆಸೆದೆಸೆಗೆ ಹಗಲು ಸವೆದುದು ಹೊಂಬಿಸಿಲು ನೆರೆ ದೆಗೆದುದತಿವೇಗದಲಿ ಕತ್ತಲೆ ಬಿಗಿದುದವನೀತಳವ ಪೆಟ್ಟಿಗೆ ಮುಚ್ಚಿದಂದದಲಿ ಸುಗುಣೆ ದಮಯಂತಿಗಳ ನೋಡಲು ಸೊಗಸಿ ಬಂದನಿಮಿಷರವೋಲ್ ತಾ ರೆಗಳು ಮೂಡಿದುವಂಬರದಿ ಪ್ರಜ್ವಲಿಪ ಕಾಂತಿಯಲಿ ತರಹರಿಸಿ ನಿಲಲರಿದು ಕರಿಗಳ ಉರುಬು ಘನವಿಟ್ಟಿಸಿ ಕೊಲುತಿದೆ ಹರಣವನು ಹೋಗಾಡಲೇಕೆಂದುಳಿದ ಪಟುಭಟರು ತೆರಳಿತಲ್ಲಿಯದಲ್ಲಿ ವಾಣಿ ಜ್ಯರು ಮುರಿದು ಬರೆ ಕಾಣುತಾ ವೈ ಶ್ಯರಗಧಿಪ ಚಿಂತಿಸಿದ ಹದನೇನೆಂದು ಮನದೊಳಗೆ ೪೩. ೧೪೭