ಪುಟ:Kanakadasa Haribhakthisara.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೪೬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಐದನೆಯ ಸಂಧಿ ೧೪೭ ಕ್ಷಿತಿಯನೆಲ್ಲವ ಸೋತು ಜೂಜಲಿ ಪತಿ ಬನಕೆ ಬಂದೆನ್ನನಗಲಿದ ಮತಿವಿಕಳತನದಿಂದ ತಿರುಗುತ ಬಂದೆ ನಿಮ್ಮಡಿಗೆ ಹಿತವರಾರನು ಕಾಣೆ ನೀವೇ ಗತಿಯೆನಗೆ ಪರದೇಶಿಯನು ಪರ ಹಿತವೆ ಪುಣ್ಯವು ರಕ್ಷಿಸೆಂದಳು ನಳನೃಪನ ರಾಣಿ ಚೇದಿಭೂಪನ ಮಡದಿ ತನ್ನ ಸ ಹೋದರಿಯ ಸುತೆಯೆಂದು ಬಲ್ಲಳೆ ಮೇದಿನಿಯೋಳಿವಳಾರ ಸತಿಯೆಂದರಿಯದಾಕೆಯನು ಆದರಿಸಿ ಸಲಹಿದಳು ಮಗಳೋ ಪಾದಿಯಲಿ ದಮಯಂತಿಯನು ಮನ ಭೇದವಿಲ್ಲದೆ ಕರುಣದಿಂದಂಗನೆಯ ನೃಪನರಸಿ |೫೬) ೫೬। ನುಡಿಯ ಕೇಳುತ ಚೈದ್ಯಭೂಪನ ಮಡದಿ ನೂಪುರ ಘಲಿರುಘಲಿರೆನ ಲಡಿಯಿಡುತ ಬಂದಪ್ಪಿ ಸೆರಗಿನೊಳೊರಸಿ ಕಂಬನಿಯ ಬಿಡು ವ್ಯಥೆಯ ವರಭೂಷಣಂಗಳ ತೊಡು ದುಕೂಲವನುಡು ಸುಮಾಲ್ಯವ ಮುಡಿಗೆ ಸೇರಿಸು ತರುಣಿಯೆಂದಳು ಚೈದ್ಯನೃಪನರಸಿ ಮನದ ದಗೆಯಡಗಿತು ಸುನೀತಿಯ ಮನೆಯೊಳಿದ್ದಳು ಭೇದವಿಲ್ಲದೆ ಅನುದಿನದೊಳಾಹಾರ ನಿದ್ರಾಂಗನೆಯ ತಾನುಳಿದು ವನಜನಾಭನ ಕರುಣದಲಿ ಬಂ ದಿನಿಯನೆಂದಿಗೆ ಮುಖವ ತೋರುವ ನೆನುತ ಚಿಂತಿಸುತಿರ್ದಳಾ ವರಪುರದ ಚೆನ್ನಿಗನ |೫೭ ೬೧। ದೇವಿ ನಿಮುಪಚಾರವೇ ಸಂ ಭಾವನೆಯಲಾ ನಮಗೆ ಬೇರಿ ನ್ಯಾವ ಭೂಷಣವೇಕೆ ದೇಸಿಗರಾವು ನಿಮ್ಮಡಿಯ ಸೇವೆಯಲಿ ತಾನಿಹೆನು ಹೀನವ ನಾವು ಬಳಸುವರಲ್ಲ ತನ್ನನು ಕಾವ ಹದನನು ನೀವೆ ಬಲ್ಲಿರಿಯೆಂದಳಾ ಸತಿಗೆ 1280 ಎನಲು ನಸುನಗುತೆಂದಳಾ ಮಾ ನಿನಿಗೆ ತಮ್ಮಿಂದಾಗದುಪಹತಿ ನಿನಗೆ ಪೇಳೆವು ಹೀನ ಕೆಲಸವ ಚಿಂತೆ ಬೇಡಿನ್ನು ತನಗೆ ಮಗಳು ಸುನೀತಿಯಾಕೆಯ ಮನೆಯೊಳಿರು ಸೈರಂದ್ರಿತನದಿಂ ದನವರತ ನೀನೆಂದು ನೇಮಿಸಿ ಕಳುಹಿದಳು ಮನೆಗೆ ೫೯