ಪುಟ:Kanakadasa Haribhakthisara.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಏಳನೆಯ ಸಂಧಿ ೧೫೭ ಏಳನೆಯ ಸಂಧಿ ಸೂಪಕಾರದೊಳಗ್ಗಳನು ಕಡು ರೂಪಿನವ ತಾನಲ್ಲ ಚಿತ್ತದಿ ಕಾಪುರುಷನೆನ್ನದಿರು ನೋಡಾ ತನ್ನ ಪೌರುಷವ ಭೂಪ ಮುಂಗೈಗಂಕಣಕೆ ಕುಲ ದೀಪ ಕನ್ನಡಿಯೇಕೆ ತರಿಸು ಪ್ರ ತಾಪವಾಜಿಯನೆಂದು ಬಿನ್ನೈಸಿದನು ನಸುನಗುತ ಮಗಳ ಕಾಣದೆ ಭೀಮನೃಪ ಮೂ ಜಗವ ಭೇದಿಸಿ ಚೈದ್ಯಭೂಪನ | ನಗರದಲ್ಲಿರೆ ಕಂಡು ಕರೆಸಿದ ತನ್ನ ನಿಜಸುತೆಯ ೪। ಕೇಳು ಧರ್ಮಜ ರತ್ನನಿರ್ಮಿತ ದಾಲಯದ ಸೊಬಗಿನಲಿ ಓಲಗ ಶಾಲೆಯಲಿ ಋತುಪರ್ಣನಿದ್ದನು ಸಿಂಹಪೀಠದಲಿ ಸಾಲ ಮಕುಟದ ನೃಪರು ಭೂಸುರ ಜಾಲ ಮಂತ್ರಿ ಪುರೋಹಿತರು ಗುಣ ಶೀಲರುನ್ನತ ಸತಿಯರಿಂದೆಸೆದಿರ್ದುದಾಸ್ತಾನ ಪೊಡವಿಪತಿ ಋತುಪರ್ಣ ಬಾಹುಕ ನುಡಿದ ವಚನಕೆ ಮೆಚ್ಚಿ ಮನದು ಗಡದ ತೇಜಿಯ ತರಿಸಿ ಕೊಡಲೇರಿದನು ಬೀದಿಯಲಿ ಮಡದ ಸನ್ನೆಗೆ ಕುಣಿದು ರವೆಗಾ ಲಿಡುತ ಜೋಡಣೆಯಿಂದ ಹಯವಡಿ ಗಡಿಗೆ ಚಿಮ್ಮಿತು ವಾಯುವೇಗದೊಳರಸ ಕೇಳೆಂದ IDು. ೧ ಇದು ಸಮಯ ತನಗೆಂದು ನಳನೃಪ ಮುದದಿ ವೇಷವ ತಾಳು ಹರಿಯಂ ದದಲಿ ಬಂದನು ಸಭೆಯ ಕಂಡನು ನೃಪಗೆ ಕೈಮುಗಿದು ಸದಮಲಾಸ್ಥಾನದಲಿ ರಿಪುಭಟ ಕದನಕಲಿಗಳು ಜೀಯೆನಲು ನಯ ಹೃದಯದಲಿ ಬಿನ್ನೈಸಿದನು ಋತುಪರ್ಣಭೂಪತಿಗೆ ಕರದ ವಾಫೆಯ ಸಡಿಲ ಬಿಡೆ ನಿ ಬರದ ಗಮನದೊಳ್ಳೆದಿತವನಿಯೊ ಳುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆ ಧರಣಿ ತಲ್ಲಣಿಸಿದುದು ಗಗನದಿ ಸುರರು ಕೊಂಡಾಡಿದರು ರಾವುತ ನರಸನಹುದೋ ಭಾಪು ಭಾಷೆಂದುದು ಸಮಸ್ತಜನ ಅವನಿಪತಿ ಕೇಳ್ ನಿಮ್ಮ ಪದಕಮ ಲವನು ಭಜಿಸುವೆ ಜೀಯ ಚಿತ್ತದಿ ಸವಡಿನುಡಿ ತನಗಿಲ್ಲ ಬಾಹುಕನೆಂಬುದಭಿಧಾನ ಭುವನದೊಳು ತಾನಶ್ಚಕುಲಹೃದ ಯವನು ಬಲ್ಲೆನು ಶಾಕಪಾಕದಿ ಸವಿಗೊಳಿಪ ವರವಿದ್ಯೆ ತನಗುಂಟೆಂದನವ ನಗುತ ಮುರುಹಿ ಹಿಡಿಯಲು ಮಡದ ಸನ್ನೆಗೆ ತಿರುಗಿತತಿವೇಗದಲಿ ಹಯವೋ ಸರಿಸಿ ಕಿರುಬೆಮರಿಡಲು ನಿಲಿಸುತ ಮಾರುವವನಿಳಿದು ಕರವ ಮುಗಿಯಲು ನೃಪತಿ ಮೆಚ್ಚುತ ತರಿಸಿ ಕೊಟ್ಟನು ಭೂಷಣಂಗಳ ಹಿರಿದು ಸಂಬಳವಿತ್ತು ನಿಲಿಸಿದನರಸ ಬಾಹುಕನ |೩||