ಪುಟ:Kanakadasa Haribhakthisara.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎಂಟನೆಯ ಸಂಧಿ ೧೭೭ ಜೀಯ ಚಿತ್ತೈಸುರವಣಿಸಿ ನಿ ರ್ದಾಯದಲಿ ಹಿಂದುಳಿದುದಂಬರ ವಾಯುಗತಿಯಲಿ ದಾಟಿ ಬಂದೆವು ಹಲವು ಯೋಜನವ ಹೋಯಿತಾ ಮಾತೇಕೆ ನಡೆಯೆನೆ ರಾಯ ಮೆಚ್ಚಿದ ಸಾರಥಿಯ ಬಿರು ದಾಯಕನು ನೀನೆಂದು ಕೊಂಡಾಡಿದನು ಬಾಹುಕನ ಮಾನವಾಧಿಪ ಕೇಳು ಲೋಕಕೆ ದೀನಜನಬಾಂಧವನು ನಳನೃಪ ಕಾನನದೊಳವನತ್ತ ಕಳುಹಿಸಿ ಬಂದು ರಥವೇರಿ ಆ ನರೇಂದ್ರಂಗಶ್ವಹೃದಯವ ತಾನರುಹಿ ಆತನಲಿ ಪಡೆದನು ಸಾನುರಾಗದಿ ಭೋರುಹದ ಹೃದಯವನು ನಿಮಿಷದಲಿ |೩೨। |೩೬ ಮುಂದೆ ಕಂಡು ಬರುತಲಡವಿಯೊ ಳೊಂದು ತಾರೆಯ ಮರನನದರೊಳು ಸಂದ ಫಲಪರ್ಣಂಗಳೆಣಿಸದೆ ಸೂತ ಪೇಳೆನಲು ಇಂದೆನಗೆ ಮತಿದೊರದವನಿಪ ಕುಂದದೆನಗಿದ ಪೇಳು ನೀನೆನ ಗೆಂದೊಡಾ ಸಾರಥಿಗೆ ಲೆಕ್ಕವನರುಹಿದನು ನೃಪತಿ ಕರದ ವಾಫೆಯ ಕೊಂಡು ನೃಪಗೆ ಚರಿಸಿ ನೂಕಿದ ತೇಜಿಗಳು ಹೂಂ ಕರಿಸಿ ಮನ ಮುಂಕೊಂಡು ಹಾಯ್ದುದು ಬಿಟ್ಟ ಸೂಟಿಯಲಿ ಭರದ ಗಮನವನೇನನೆಂಬೆನು ನೆರೆದ ಜನವಲ್ಲಲ್ಲಿ ನಿಂದುದು ಧರೆಯೊಳೀ ಸಾರಥಿಗೆ ಸರಿಯಾರರಸ ಕೇಳೆಂದ |೩೩| |೩೭| ಇಳಿದು ರಥವನು ಬಂದು ವೃಕ್ಷದ ಬಳಿಗೆ ನಿಂದಾ ಶಾಖೆಗಳಲಿಹ ಫಲದ ಪರ್ಣಂಗಳೆಣಿಸಿದನಾ ಪದ್ಯಸಂಖ್ಯೆಯಲಿ ಒಲಿದು ಲೆಕ್ಕವ ಕಂಡು ತಾ ಮನ ನಲಿದು ನಳನೃಪ ಪುಷ್ಕರನ ತಾ ಗೆಲುವ ಹದನಾಯ್ಕೆನುತ ಬರೆ ಕಲಿಪುರುಷನಿದಿರಾದ ತುರಗ ಹೇಷಾರವದ ಗಾಳಿಯ ಧರಧುರದ ಚೀತ್ಕತಿಯ ಸಾರಥಿ ಯುರವಣೆಯ ರಥದಚ್ಚುಗಳ ಝೇಂಕಾರ ನಾದದಲಿ ಭರದಿ ಕೆಂಧೂಳಿಡುತ ಬರಲಾ ಪುರಜನರು ಸಂದಣಿಸಿ ನೋಡಲು ಪರಿಚರರು ಬಂದರು ವಿದರ್ಭನೃಪಾಲಗರುಹಿದರು |೩೪|| [೩೮] ಎಲೆ ನೃಪಾಲಕ ನಿನ್ನ ಸತ್ಯದ ನೆಲೆಯನೀಕ್ಷಿಸಬೇಕೆನುತ ಬಂ ದಳಲಿಸಿದೆ ಹಿರಿದಾಗಿ ನೋಯದಿರಿನ್ನು ಚಿತ್ತದಲಿ ತೊಲಗಿದೆನು ಇಂದಿನಲಿ ಶುಭ ಮಂ ಗಳಕರವು ನಿನಗಪ್ಪುದೆನಲಾ ನಳನೃಪತಿ ಖತಿಗೊಂಡು ಶಾಪವ ಕೊಡದೆ ಮನ್ನಿಸಿದ ಬಂದನೇ ಋತುಪರ್ಣನೆನುತಾ ನಂದ ಮಿಗೆ ಕರೆಸಿದನು ಸಚಿವರ ಮಂದಿಯನು ಕಳುಹಿಸಲು ಕರೆತಂದರು ನಿಜಾಲಯಕೆ ಸಂದಣಿಯ ಪರಿಹರಿಸಿ ನೃಪ ಮುದ ದಿಂದ ಬೇರರಮನೆಯೋಳುಲುಗ. ಳಿಂದಯೋಧ್ಯಾಪತಿಯ ಸತ್ಕರಿಸಿದನು ಭೀಮನೃಪ |೩೫|| ೩೯