ಪುಟ:Kanakadasa Haribhakthisara.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎಂಟನೆಯ ಸಂಧಿ ೧೮೧ ತರಳರಿಗೆ ನೀರೆರೆದು ಕಾಂಚನ ವರ ದುಕೂಲವನಿತ್ತು ದಿವ್ಯಾ ಭರಣ ಭೂಷಿತರಾದ ತನಯರ ದಾದಿಯರ ಕೈಲಿ ಪಿರಿದು ಕಳುಹಲು ಬಾಣಸಿನ ಮಂ ದಿರದ ಬಾಗಿಲ ಮುಂದೆ ಬಿಡೆ ಸಂ ಚರಿಸಿ ಸುಳಿದಾಡುವರ ಕಂಡನು ನೃಪತಿ ಹರುಷಿಸುತ ಹಿಮಕರಾನ್ವಯತಿಲಕ ವಸುಧಾ ರಮಣ ಪುಣೋದಯ ಸುಭಾಷಿತ ವಿಮಲಗುಣ ಚಾರಿತ್ರ ಸನ್ನುತ ಸತ್ಯಸಂಚಾರ ಕುಮತಿ ಪುಷ್ಕರ ಮುನಿದನೇ ವಿ ಕ್ರಮದರಿದ್ರತೆ ಬಂದುದೇ ಸಾ ಕಮಿತ ಭುಜಬಲ ಪಾಲಿಸೆಂದಳು ಪತಿಗೆ ದಮಯಂತಿ ೪೮. ೫೨ ತರಳರನು ಪಿಡಿದೆತ್ತಿ ತೊಡೆಯೊಳ ಗಿರಿಸಿ ಮುದ್ದಾಡಿದನು ನೋಡುತ | ಸುರಿವ ಕಂಬನಿಗಳಲಿ ಬಾಹುಕ ಮರುಗುತಿರಲಂದು ಮರೆಯ ಜಾಲಂಧ್ರದಲಿ ಕಂಡಳು ತರುಣಿ ನಳನ್ನಪನೀತನಹುದೆಂ ದುರುತರದ ಪ್ರೇಮದಲಿ ಬಂದಳು ಜನನಿಯರಮನೆಗೆ ಮುನ್ನ ಮಾಡಿದ ಕರ್ಮಫಲ ಋತು ಪರ್ಣನಲಿ ಸೇವೆಯನು ಮಾಡುವು ದುನ್ನತಿಕೆಯಲಿ ಬಂದುದೇ ಮಿಗೆ ಸಾರ್ವಭೌಮರಿಗೆ ತನ್ನ ಪುಣ್ಯದ ಹಾನಿ ತಾನಿದ ಕಿನ್ನು ಬಳಲುವುದೇನು ಗುಣಸಂ ಪನ್ನ ರಕ್ಷಿಸು ಸತಿಯನೆಂದೆರಗಿದಳು ಪದಯುಗಕೆ ೪೯ [೫೩ ತಾಯೆ ಸಂಶಯವಿಲ್ಲ ನೈಷಧ ರಾಯನೀತನು ಸೂತನಲ್ಲ ವಿ ಡಾಯದಲಿ ಬಂದಿಹನು ನೋಡು ಕುರೂಪಿ ವೇಷದಲಿ ರಾಯರೊಳಗಗ್ಗಳೆಯ ನಳನೃಪ | ಮಾಯವನ್ನು ತೋರಿಹನು ಇವನ ನಿ ಜಾಯತವ ತಾ ಬಲ್ಲೆ ಕರೆಸೆಂದಳು ಸರೋಜಮುಖಿ ತುರುಬ ಹಿಡಿದೆತ್ತಿದನು ಸತಿಯಳ ಸುರಿವ ಕಂಬನಿದೊಡೆದು ನುಡಿದನು ಬರಿದೆ ಚಿಂತಿಸಲೇಕೆ ಮಾನಿನಿ ಬಿಡು ಮನೋವ್ಯಥೆಯ ಅರಿಯದವಳೇಂ ನೀನು ಲೋಕದ ಸರಸಿಜಾಕ್ಷಿಯರೆಲ್ಲರಿಗೆ ನೀ | ಗುರುವಲಾ ಬರಿದೆನ್ನ ಬಯಸಲು ಬೇಡ ಹೋಗೆಂದ |೫OI ಧರಣಿಪತಿಯನುಮತದೊಳಾತನ ಕರೆಸಿದಳು ನೃಪನರಸಿ ಬಾಹುಕ ನಿರದೆ ಬಂದನು ರಾಜಮಂದಿರದಲ್ಲಿ ಕುಳ್ಳಿರಲು ತರಳೆ ಮಾಸಿದ ಸೀರೆಯಲಿ ಗರ ಗರಿಕೆ ತಪ್ಪಿದ ಚೆಲುವಿನಲಿ ನಿಂ ದಿರಲು ಕಂಡನು ಸತಿಯ ತಲೆಬಾಗಿದನು ಲಜ್ಜೆಯಲಿ ವಿನಯಹೀನರು ತಾನು ಮನದಲಿ ನೆನೆದು ತಪ್ಪಿದ ನಿರ್ದಯನು ಕಾ ನನದಿ ನಿನ್ನನು ಬಿಸುಟು ಕಳೆದ ದುರಾತ್ಮ ಬಾಹಿರನ ನೆನೆವರೇ ಬಿಡು ಮರುಳೆ ನಿನಗಿಂ ದಿನಲಿ ಮಾಳ್ವ ಪುನಸ್ಕೃಯಂವರ ಮನಕೆ ಸರಿಬಂದವನ ನೀನೊಲಿಸೆಂದನಾ ನೃಪತಿ |೫೧l ೫೫।