ಪುಟ:Kanakadasa Haribhakthisara.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೮೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೧೮೫ ಧರಿಸಿದನು ನಳನಾ ದುಕೂಲವ ಪರಿಹರಿಸಿತಾ ರೂಪು ಮುನ್ನಿನ ಪರಮತೇಜದ ದಿವ್ಯತನುವಿನೊಳೆಸೆದು ರಂಜಿಸಲು ಸುರರ ದುಂದುಭಿ ಮೊಳಗೆ ಮಲ್ಲಿಗೆ ಯರಳ ಮಳೆ ಸೂಸಿದರು ಗಗನದಿ ಸುರಸತಿಯರಕ್ಷತೆಯ ತಳಿದರು ಹರಸಿ ನಳನೃಪಗೆ ಒಂಬತ್ತನೆಯ ಸಂಧಿ |೩೪| ೩೪। ಕದನದಲಿ ಪುಷ್ಕರನ ಬಲವನು ಸದೆದು ಜೂಜಿಂ ಗೆಲಿದು ರಾಜ್ಯವ ಮುದದಿ ಪಾಲಿಸುತಿರ್ದನಾ ಸತಿಸಹಿತ ನಳಪತಿ ಸುರರು ಕೊಂಡಾಡಿದರು ಯಮ ಭಾ ಸ್ವರ ವಿರಿಂಚಾದಿಗಳುಲಿಯೆ ವರ ತರುಣಿ ಬಂದೆರಗಿದಳು ಪತಿಯಂಫ್ರಿಯಲಿ ದಮಯಂತಿ ಹರುಷದಲಿ ಬಿಗಿಯಪ್ಪಿದನು ಭೂ ಸುರರು ಸಂಭ್ರಮಿಸಿದರು ವರಪುರ ದರಸ ಚೆನ್ನಿಗರಾಯ ಸಲಹಿದನವರ ಕರುಣದಲಿ ಕೇಳು ಪಾಂಡುಕುಮಾರ ನಳಭೂ ಪಾಲನಭ್ಯುದಯವನು ಮಂಗಳ ದೇಳಿಗೆಯನೇನೆಂಬೆ ದಮಯಂತಿಯ ಮಹೋತ್ಸವವ ಲೀಲೆಯಲಿ ಮಜ್ಜನವ ಮಾಡಿ ದು ಕೂಲಮಣಿ ಭೂಷಣವ ಧರಿಸಿ ಚ ಡಾಳಿಸುವ ಕಾಂತಿಯಲಿ ಸಿಂಹಾಸನದಿ ಕುಳ್ಳಿರ್ದ |೩೫|| TOI

ಈತನಾರು ಪಿತಾಮಹನೋ ಪುರು ಹೂತನೋ ಮನ್ಮಥನೊ ಲಕ್ಷ್ಮೀ ನಾಥನೊ ಚಂದ್ರಮನೊ ಶಂಕರನೋ ಮಹಾದೇವ ಈತನೇ ನಳನೃಪತಿ ಭೂ ವಿ ಖ್ಯಾತನೆಲ್ಲಿಂದಿಲ್ಲಿ ಬಂದನು ಪೂತು ಮುಝರೇ ಎನುತ ಕೊಂಡಾಡಿತು ನೃಪಸ್ತೋಮ ಬಂದು ಕಂಡುದು ನಿಖಿಳ ಪುರಜನ ವಂದು ಕಾಣಿಕೆಗೊಟ್ಟು ಮುದದಲಿ ಸಂದಣಿಸೆ ಋತುಪರ್ಣ ಬಂದನು ಮಂತ್ರಿ ಜನಸಹಿತ ಸಂದ ಮಣಿಕಾಂಚನ ಸುವಸ್ತುವ ತಂದು ಸಮುಖದೊಳಿರಿಸಿ ವಿನಯದಿ ನಿಂದು ಬಿನ್ನಿಸಿದನು ಕರಗಳ ಮುಗಿದು ನಳನೃಪಗೆ