ಪುಟ:Kanakadasa Haribhakthisara.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೦ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೧೯೧ ಹೊಳೆವ ಸಿಂಧದ ಸಾಲ ಝಲ್ಲರಿ ಗಳ ಪತಾಕದ ಚಿತ್ರ ಚಮರಾ ವಳಿಗಳಿಂದಲಿ ಧಾತುಗುಂದಿದುದಶ್ರತಳ ಮುಸುಕಿ ಉಲಿವ ಮಂಗಳಪಾಠಕರ ಕಳ ಕಳಿಕೆ ಮಿಗೆ ಹೆಬ್ಬಲ ಛಡಾಳಿಕೆ ನೆಲ ಬಿರಿಯಿತಂದು ಬಿಟ್ಟುದು ನಿಷಧ ನಗರಿಯಲಿ ಹೊಕ್ಕರಾಹವದೊಳಗೆ ಮೊನೆಯ ಇಕ್ಕಲಿಸಿ ಬರೆ ಕಂಡು ಮಝರೇ ಚುಕ್ಕಿಗಳಿರಾ ಎನುತ ಹೊಯ್ದರು ಬೆರಸಿ ಪಟುಭಟರ ಇಕ್ಕಿದರು ಸುರಗಿಯಲಿ ಕರಿಗಳ ತಿಕ್ಕಿ ತಿವಿದರು ತೇರುಗಳ ಮುರಿ ದಿಕ್ಕಿ ಪರಿಘದೊಳೊರಸಿದರು ಕಾಲಾಳ ಮೂದಲಿಸಿ |OO. ೨೪ು. ದಾಳಿಯಿಟ್ಟರು ಹರಿದು ದಿಕ್ಕಿನ ಮೂಲೆಯವರಂಜಿದರು ಮುಮ್ಮೊನೆ ಯಾಳು ಕವಿದುದು ಹಿಡಿದರಗ್ಗದ ಸೆರೆಯ ಸೂರೆಗಳ ಕೇಳಿದನು ಪುಷ್ಕರನು ನಿಷಧನ ದಾಳಿ ಬರುತಿದೆ ಖತಿಯ ಭರದಲಿ ಕಾಳಗಕೆ ನಳನೃಪತಿ ಬಂದನೆನುತ್ತ ಮುಳಿದೆದ್ದ ಇಟ್ಟಣಿಸಿ ಬರೆ ತೇಜಿಗಳ ನೆರೆ ಕಟ್ಟಿ ಖಂಡಿಸಿ ಭಟರನಾ ಬೆ ಇಟ್ಟಿ ಕಡಿದರು ಬೆರಸಿ ಬಹ ಬಲು ವೀರನಾಯಕರ ಹೊಟ್ಟುಗುಟ್ಟಿದರರುಣಜಲ ಸಾ ಲಿಟ್ಟುದವನಿಯೊಳಮಮ ನೆರೆ ಜಗ ಜಟ್ಟಿಗಳು ಕಾದಿದರು ರಣದಲಿ ಸುರರು ಬೆರಗಾಗೆ |೨೧| [೨೫] ಆಗಲಿದಕೇನೀಗ ರಾಜ್ಯವ ನೀಗಿದಳಲಿನೊಳೊಮ್ಮೆ ಕದನಕೆ ತಾಗಿದನು ತಪ್ಪೇನು ಬರಹೇಳೆಮ್ಮ ಸೈನಿಕರ ಈಗಲೀತನ ಕಡಿದು ಸೆರೆಗಳ ಬೇಗ ಹಿಡಿಯೆಂದೆನುತ ನಿಜಬಲ ಸಾಗರವ ನೆರಹಿದನು ಕಳುಹಿದ ತನ್ನ ದಳಪತಿಯ ಸಾರಥಿಯನೆಚ್ಚರಿಸಿ ರಥಿಕರು ತೋರಿದರು ಕೈಗುಣವ ಸರಳಿನ ಸಾರದಲಿ ರಿಪುಭಟರ ತಲೆಗಳ ತರಿದರಲ್ಲಲ್ಲಿ ಕಾರಿದರು ರಕುತವನು ತೇರಿನ ವಾರುವಂಗಳು ಮುಗ್ಗಿದುವು ರಣ ಧೀರರೆಚ್ಚಾಡಿದರು ಗಾಯದೊಳೊರಲಿತುಭಯಬಲ |೨೨| [೨೬ ಹರಿಗೆ ಖಡ್ಡ ಕಠಾರಿ ತೋಮರ ಪರಶು ಮುದ್ಧರ ಕುಂತ ಬಲ್ಲೆಹ ಪರಿಘ ಚಕ್ರ ತ್ರಿಶೂಲ ಕಕ್ಕಡ ಭಿಂಡಿವಾಲ ಚಯ ಸುರಗಿ ಸಬಳ ಮುಸುಂಡಿ ಮೊದಲಾ ದುರತರದ ಕೈದುಗಳ ಪಟುಭಟ ರುರವಣಿಸಿ ತಾಗಿದರು ರಿಪುಮೋಹರವನನುಗೊಳಿಸಿ ಕೆಡೆದ ತಲೆಗಳ ಸಿಡಿದ ಹುಬ್ಬಿನ ಕಡಿದ ತೋಳಳ ನೆಗ್ಗಿದೆಲುಗಳ ಉಡಿದ ತೊಡೆಗಳ ಮಿದುಳ ಖಂಡದ ಹರಿದ ಕರುಳುಗಳ ಒಡೆದ ನೆತ್ತಿಗಳಿಂದ ರಕುತದ ಮಡು ಹರಿಯೆ ತರಹರಿಸಲಾರದೆ ಪಡೆ ಮುರಿದು ಬರತಿರಲು ಕಂಡನು ಖಾತಿಯೋಳು ನಳನು ೨೭ |೨೩|