ಪುಟ:Kanakadasa Haribhakthisara.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೧೯೩ ಕರೆದು ಸಾರಥಿಗರುಹಿದನು ಪು ಸ್ಮರನ ಬಲ ಕೈಮೀರಿ ಬರುತಿರೆ ತಿರುಹು ತೇಜಿಯನಿತ್ತಲಿವದಿರನೊರಸಿ ಬೆನ್ನಿನಲಿ ಕರುಳ ತೆಗೆವೆನೆನುತ ಚಾಪಕೆ | ತಿರುವನೇರಿಸಿ ಸರಳಿನಲಿ ಬೊ ಬಿರಿಯೆ ಧರೆ ತಲ್ಲಣಿಸಿತವನೀಪಾಲ ಕೇಳೆಂದ ಗಾಳಿ ಮುರಿದೌಕಿದಡೆ ಘನಮೇ ಘಾಳಿ ನಿಲುವುದೆ ನಿಷಧಪತಿಶರ ಜಾಳದಲಿ ಕಡಿವಡೆದು ಬಿದ್ದರು ರಾಯರಾವುತರು ಆಳು ಮುರಿದುದು ಕಂಡ ಮುಖದಲಿ ಹೇಳಲೇನಾನವರ ವಿಧಿಯನು ಸೋಲದಲಿ ಮನಗುಂದಿ ಹಾಯ್ದರು ಬಿಟ್ಟ ಮಂಡೆಯಲಿ [೨೮] ೩೨। ಮುರಿದ ಬಲ ಸಂವರಿಸಿಕೊಂಡುದು ಮೊರೆವ ಕಹಳಾರವದ ಸನ್ನೆಯೋ ಳುರುಬಿತಾ ಬಲದೊಳಗೆ ಬೆರಸಿತು ನಳನ ಪರಿವಾರ ಅರಸನಾ ಸಮಯದಲಿ ಹೂಡಿದ | ಸರಳ ಕೆನ್ನೆಗೆ ಸೇದಿ ಬಿಡೆ ಕ ತರಿಸಿ ಬಿಸುಟುದು ರಿಪುನೃಪರ ಶಿರಗಳನು ಖಂಡಿಸುತ ಆರು ಸಾಸಿರ ತೇರುಗಳು ಹದಿ ನಾರು ಸಾಸಿರ ಕರಿಗಳಿಪ್ಪ ತಾರು ಸಾವಿರ ತುರಗ ಕಾಲಾಳೊಂದು ಲಕ್ಷದಲಿ ಸೇರಿತಂತಕಪುರಿಗೆ ಸರಳಿನ ಸಾರದಲಿ ರಿಪುಸೇನೆ ಮುರಿದುದು ಆರು ಬಲ್ಲರು ಮಿಕ್ಕ ಸೇನೆಯನರಸ ಕೇಳೆಂದ ೨೯. |೩೩ ಇಳೆ ಸರಳಮಯವಾಯ್ತು ಕೆಂಡದ ಮಳೆ ಕರೆದುದೆನೆ ಪುಷ್ಕರನ ಬಲ ದೊಳಗೆ ಬಿದ್ದುದನೇಕರಿಪುನೃಪ ಸೈನ್ಯಸಾಗರವು ಮಲೆತವರ ಶಿರಗಳನು ಖಂಡಿಸಿ ತಲೆಯ ಚೆಂಡಾಡಿದರು ರಥಿಕರು ಬಲುಗುದುರೆ ಕಾಲಾಳು ನೆಗ್ಗಿತು ನಳನ ಶರಹತಿಗೆ ಮರನ ಹುತ್ತವನೇರಿದರು ಸಂ ಗರದಿ ಕೈದುವ ಬಿಸುಟು ಸಲೆ ಮೈ ಮರೆದು ತೇಜಿಯನಿಳಿದು ರಾಪ್ತರು ಕೊರಳ ಸಲಹೆನುತ ಕರವ ಮುಗಿದರು ಜೋದರರು ಮೈ ಮರೆದು ಕದನದ ಗಾಯದಲಿ ನೊಂ ದೊರಲಿ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ |೩OI |೩೪|| ತೆರಹುಗೊಟ್ಟೋಳಹೊಗಿಸಿ ಸದೆದನು ಬರಸಿಡಿಲು ಬಡಿವಂತೆ ರಿಪುಬಲ ಮುರಿದು ನಿಂದುದು ಗಾಯವಡೆದರು ವೀರಪಟುಭಟರು ಹುರಿಯೊಡೆದು ಮೈದೆಗೆದು ಸಲೆ ಕೈ ಮುರಿಯೆ ಕೈದುವ ಬಿಸುಟು ಪಡೆ ಮೊಗ ದಿರಹುಚ್ಚನು ಕೊಚ್ಚಿದನು ಪುಷ್ಕರ ಚತುರ್ಬಲವ ಮುರಿದು ಬರುತಿದೆ ಜೀಯ ಬಲ ನಿಲ ಲರಿದು ನಮ್ಮದು ನಳನೃಪಾಲನ ಶರಹತಿಗೆ ನೆರೆ ಮುಗ್ಗಿ ಕೆಡೆದುದು ತಾರುತಟ್ಟಿನಲಿ ತರಹರವ ನಾ ಕಾಣೆನೀ ಮೋ ಹರಕೆ ಗತಿಯೇನೆನಲು ಪುಷ್ಕರ ಭರದಿ ಕೋಪದೊಳಂದು ಕೆರಸಿದನಾಗ ನಿಜಬಲವ |೩೧| [೩೫]