ಪುಟ:Kanakadasa Haribhakthisara.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೪ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಒಂಬತ್ತನೆಯ ಸಂಧಿ ೧೯೫ ಅರಸ ಕೇಳರಮನೆಗೆ ಬಂದನು ಉರುತರದ ಕೈದುಗಳ ತರಿಸಿಯೆ ಧುರವಿಜಯರಿಗೆ ಕರೆಸಿಕೊಟ್ಟನು ಚಾಪಮಾರ್ಗಣವ ಕರಿತುರಗ ಕಾಲಾಳು ನೆರೆದುದು ಮೊರೆವ ವಾದ್ಯದ ರಭಸದಲಿ ಸಂ ಗರಕೆ ಪಯಣವ ಮಾಡುತಿರ್ದನು ನೃಪತಿ ಕೇಳೆಂದ ಎನಲು ಕೇಳ್ತಾ ಮಾತಿನಲಿ ಬಂ ದನು ನಳನ ಕಂಡನು ಮಹೀಪತಿ ಎನಗೆ ನಿಮ್ಮಲಿ ಕದನವೇತಕೆ ಸಾಕದಂತಿರಲಿ ಜನಪತಿಗಳೀಕ್ಷಿಸಲಿ ಮರು ಜೂ ಜಿನಲಿ ನಿಪುಣರು ನಾವು ನಿಮ್ಮಲಿ ಮನಕೆ ಹರುಷಿತವಾಗಲಾಡುವೆನೆಂದ ನಸುನಗುತ |೩೬ ೪OI ತೆಗೆದು ಹಿಂದಕೆ ನಿಷಧಪತಿ ಕಾ ಳಗದಿ ಹಿಡಿಸಿದ ಧರ್ಮಗಹಳೆಯ ವಿಗಡ ಪುಷ್ಕರನಿತ್ತ ಕೋಪಾಗ್ನಿಯಲಿ ಖತಿಮಸಗಿ ಹಗೆಗೆ ಜಯವಾಯ್ತಿಂದಿನಲಿ ತಾ ಹೊಗುವೆನಹಿತರ ಮುರಿವೆನೆನೆ ಕೈ ಮುಗಿದು ಬಿನ್ನೈಸಿದನು ವರಮಂತ್ರೀಶ ಪುಷ್ಕರಗೆ ಎಲವೋ ಕೇಳಿನ್ನಾದುದಾಗಲಿ ಕಲಹಕಂಜುವೆ ನೀನು ಜೂಜಿನ ಬಳಕೆಯಲಿ ಬಲ್ಲಿದನು ನಮ್ಮನು ಕರೆದ ತಪ್ಪೇನು ಕಲಹವಾಗಲಿ ಜೂಜದಾಗಲಿ ಗೆಲುವೆ ನಿನ್ನನು ಕುಟಿಲಹೃದಯದ ನೆಲೆಯ ಬಲ್ಲೆನು ನಿನಗೆ ಮನವೊಲಿದುದನು ಮಾಡೆಂದ |೩೭| ೪೧. ಅರಿಭಯಂಕರ ನೈಷಧನ ಸಂ ಗರದಿ ಗೆಲುವವರಾರು ದೇವಾ ಸುರರು ನಿಲಲರಿದರಸ ಮಿಕ್ಕಿನ ನರರ ಪಾಡೇನು ಮರುಳುತನ ಬೇಡಿನ್ನು ನೃಪನನು ಕರೆಸಿ ಸಂಧಿಯ ಮಾಡಿ ಜೂಜಿನ ಮರುವಲಗೆಯಲಿ ಗೆಲುವುದುಚಿತವಿದೆಂದನಾ ಮಂತ್ರಿ ಅರಸ ಕೇಳಾ ಪುಷ್ಕರನು ತ ನ್ನರಮನೆಗೆ ಕರೆತಂದನಾ ಕಲಿ ಪುರುಷನಿಂದಲಿ ಮುನ್ನ ಗೆಲಿದಗ್ಗಳಿಕೆಯಲಿ ನೃಪನ ಪಿರಿದು ತಾ ಗೆಲಬಲ್ಲೆನೆಂದಾ ಪರನು ಕರೆಸಿದನೋಲಗದಿ ಕು ಳ್ಳಿರಲು ತಂದರು ಸಾರಿಗಳನಿರಿಸಿದರು ಸಮ್ಮುಖದಿ [೩೮] ವೀರಸೇನನ ತನಯ ನಿಷಧನ ಸೇರಿಹಳು ಜಯಲಕ್ಷ್ಮೀ ಸೇನಾ ಭಾರದಲಿ ಋತುಪರ್ಣ ಚೈದ್ಯ ವಿದರ್ಭ ಮೊದಲಾದ ಭೂರಿನೃಪರೋಲೈಸುತಿದೆ ಸರಿ ಯಾರು ಸಂಗ್ರಾಮದಲಿ ನಳನಲಿ ಮೀರಿ ಕೈಮಾಡಿದರೆ ತಪ್ಪದು ಮರಣ ನಿನಗೆಂದ ನಳನೃಪತಿ ನೀ ಗೆಲಿದೊಡೀ ಭೂ ಲಲನೆಯನು ತಾ ಬಿಡುವೆ ಸೋತರೆ ಬಳಿಕ ದಮಯಂತಿಯನು ನನಗೊಪ್ಪಿಸುವುದೆಂದೆನಲು ಇಳೆಯೊಳಿಹ ಭೂರುಹದ ಹೃದಯದ ನೆಲೆಯ ಬಲ್ಲಗ್ಗಳಿಕೆಯಲಿ ತಾ ಗೆಲುವೆನೆಂದೊಪ್ಪಿದನು ಮನದಲಿ ಧೈರ್ಯಪರನಾಗಿ [೩೯] ೪೩।