ಪುಟ:Kanakadasa darshana Vol 1 Pages 561-1028.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೬೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೬೧ ಶುಭಕ್ಕೆ ಬೇಕಾದವನು ಎಂದು ಹೇಳುತ್ತಾನೆ. ಈ ಮೂಲಕ ರಾಗಿಯಾಗಿ ಕನಕದಾಸರು ರಾಘವತ್ವವನ್ನು ಪಡೆದು ಸಮಾನ, ಮಾನ್ಯ ಆಗುತ್ತಿದ್ದಾರೆ. ಈ ಅರ್ಥದಲ್ಲಿ ರಾಮಧಾನ್ಯ ಚರಿತ್ರೆ ಮಾನ್ಯತೆ, ಸಮಾನತೆಗಾಗಿ ಸೃಷ್ಟಿಗೊಂಡ ಬಂಡಾಯ ಕೃತಿ ಎಂದೂ ಇದು ಕನಕದಾಸರ ಬಂಡಾಯದ ರೀತಿ ಎಂದೂ ಹೇಳಬಹುದಾಗಿದೆ. ೪. ೧. ಕೀರ್ತನೆಯಲ್ಲಿ ಬಂಡಾಯ : ಸ್ಥಿತಿ ನಮಗೆ ಕನಕದಾಸರ ಸಾಹಿತ್ಯದಲ್ಲಿಯ ಬಂಡಾಯದ ಇತಿಮಿತಿಗಳು ಗೊತ್ತಾಗುವುದು ಅವರ ಕೀರ್ತನೆಗಳಲ್ಲಿ, ಕಾವ್ಯಗಳಲ್ಲಿಯ ಬಂಡಾಯ ಧ್ವನಿಯನ್ನು ಗುರುತಿಸುವಾಗ ರಾಮಧಾನ್ಯಚರಿತ್ರೆಯೊಂದನ್ನು ಇಟ್ಟುಕೊಂಡು ಉಳಿದ ಅವರ ಕಾವ್ಯಗಳನ್ನು ಬಿಟ್ಟು ಬಿಡುತ್ತೇವೆ. ಇಲ್ಲಿ ಲೇಖಕನ ಪರಿಮಿತಿ ಎದ್ದು ಕಾಣುತ್ತದೆ. ಆಗ ನಮಗೆ ನರೆದಲೆಗ ಮತ್ತು ಹಿಯ ಸಿಟ್ಟಿನ ಸಂವಾದವೇ ಬಂಡಾಯವೆನಿಸಿಬಿಡುತ್ತದೆ. ಇದು ಬಂಡಾಯದ ಬಗ್ಗೆ ನಮಗಿರುವ ಪರಿಮಿತ ಪರಿಕಲ್ಪನೆಯನ್ನೂ ಸೂಚಿಸುತ್ತದೆ. ನಮ್ಮ ಬರವಣಿಗೆಯನ್ನು ಓದುವವರಿಗೆ ಕನಕದಾಸರು ಹೀಗೇಕೆ ತಮ್ಮನ್ನು ಭಾಗಮಾಡಿಕೊಂಡರು ಎನಿಸುತ್ತದೆ. ನಾವು ಕನಕದಾಸರು ಕಾವ್ಯ, ಕೀರ್ತನೆ ಮತ್ತು ದೈವತ್ವದ ಕಡೆಗೆ ಹೊರಟಾಗಲೆ ಬಂಡಾಯಗಾರರಾದರು ಹೇಗೆ ಎಂಬುದನ್ನು ಗುರುತಿಸಬೇಕು. ಶೂದ್ರ ಕಾವ್ಯ ಬರೆದರೆ, ತಪಸ್ಸು ಮಾಡಿದರೆ ತಲೆಕೆಟ್ಟು ಹೋಗುತ್ತದೆ ಎಂದು ನಾನು ಹುಡುಗನಾಗಿದ್ದಾಗ ನಮ್ಮ ಕಡೆಯ ಜನ ಹೇಳುತ್ತಿದ್ದುದನ್ನು ಈಗಲೂ ಜ್ಞಾಪಿಸಿಕೊಳ್ಳುತ್ತೇನೆ. ನಾವು 'ಜನಪದ' ಸಂಬಂಧಿಯಾಗಿ ಆಲೋಚಿಸದಿದ್ದಾಗ ಕವಿಯ, ಹೋರಾಟಗಾರನ ನಿಜವಾದ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುತ್ತೇವೆ. ಕನಕದಾಸರ ಬಂಡಾಯ ಧ್ವನಿಯನ್ನು ಗುರುತಿಸುವಾಗ ಅವರನ್ನು ಒಂಟಿಯಾಗಿ ಅವರ ಪರಿಸರ-ಪರಿಸ್ಥಿತಿಯ ಹೊರಗೆ ತೆಗೆದುಕೊಳ್ಳುವುದರಿಂದ ನಾವು ಈ ಬಗೆಯ ಪರಿಮಿತಿಗೆ ಒಳಗಾಗುತ್ತೇವೆ. ಕೀರ್ತನೆಗಳಲ್ಲಿ ಕನಕದಾಸರ ಕ್ರಮಗತಿಯ ಸಾಧನೆ-ಸಿದ್ದಿಗಳ ಸ್ತರಗಳಿವೆ. ಅವು ಕನಕದಾಸರನ್ನು ಮೊದಲಿಂದ ಕೊನೆಯವರೆಗೆ ನಮಗೆ ಪರಿಚಯಿಸುತ್ತ ಹೋಗುತ್ತವೆ. ರಾಮಧಾನ್ಯಚರಿತ್ರೆಯಲ್ಲಿ ಕನಕದಾಸರ ಬಂಡಾಯ ಸಾಂಕೇತಿಕವಾಗಿ ನಿರೂಪಿಸಲ್ಪಟ್ಟಿದ್ದರೆ ಕೀರ್ತನೆಗಳಲ್ಲಿ ಸ್ಪಷ್ಟವಾಗಿ ಹಾಗೂ ನೇರವಾಗಿ ವ್ಯಕ್ತವಾಗಿದೆ. ತಮ್ಮ ಮೂಲ, ಮೊದಲ ಧರ್ಮ-ವೃತ್ತಿ-ನಡತೆಯಲ್ಲಿ ಕನಕದಾಸರು ಕೊರತೆಯನ್ನು ಕಾಣುವ ಮೂಲಕ ಅವರ ಬಂಡಾಯ ಆರಂಭವಾಗುತ್ತದೆ. ತಮ್ಮ ಅಧರ್ಮಿಯತೆಗೆ ತಾವೇ ಪರೀಕ್ಷೆಯಾಗುವ ಮೂಲಕ ಉದ್ದೇಶಿತ ಧರ್ಮದ ಕಡೆಗೆ ಕನಕದಾಸರು ತುಡಿಯುತ್ತಾರೆ ಮತ್ತು ಬೆಳೆಯುತ್ತಾರೆ. ಅವರ ಹೋರಾಟದ ಸ್ವಭಾವಕ್ಕೆ ಅವರದೆ ಆದ ಕೆಳಗಿನ ಪದ್ಯ ಸಾಂಕೇತಿಕವಾಗಿದೆ ಎಂಬುದು ನನ್ನ ಗ್ರಹಿಕೆ. ಲದಲಿ ಜನಿಸಿತು ಕೂಸು | ರಾಧಾಕೃಷ್ಣರ ಭಜಿಸಿತು ಕೂಸು ರಾಗ ದ್ವೇಷಗಳ ಬಿಟ್ಟಿತು ಕೂಸು ರಾಮ ಪದವ ನೆನೆಯುವ ಕೂಸು ” ಕ. ದಾ. ಕೀ, ಪು. ೨ ಅವರ ಬಂಡಾಯದ ನೆಲೆ ಇನ್ನೂ ಸ್ಪಷ್ಟವಾಗುವುದು ಹೀಗೆ : “ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ ಕುಲವಿಲ್ಲದ ದಾಸ ಕುನ್ನಿದಾಸ | ಮಲಹರ ರಂಗ ನಿನ್ನ ಮನೆಯ ಮಾದಿಗದಾಸ | ಸಲೆ ಮುಕ್ತಿಪಾಲಿಸೋ ಆದಿಕೇಶವರಾಯ” || ಕ. ರಾ. ಹಾ. ಪು. ೨.೭ ಕನಕದಾಸರ ಹೆಚ್ಚಿನ ಕೀರ್ತನೆಗಳು ಭಕ್ತಿಪ್ರಧಾನವಾದವು. ಆದರೆ ಭಕ್ತಿ ಬಂಡಾಯ ಎನಿಸಿಕೊಳ್ಳುವುದಿಲ್ಲ, ಅದೊಂದು ಬಗೆಯ ಸಮರ್ಪಣೆ. ದೈವವಿರುದ್ದ, ಕರ್ಮ ವಿರುದ್ಧ, ತಾಟಸ್ಥ್ಯದ ವಿರುದ್ಧ, ಜಾತಿವಿರುದ್ಧ, ವರ್ಗವಿರುದ್ದ, ಹಿಂಸೆ ಅಥವಾ ನೋವು ವಿರುದ್ಧವಾದ ಚಟುವಟಿಕೆಯನ್ನು ನಾವಿಂದು ಬಂಡಾಯದ ದ್ರವ್ಯ ಎಂದು ಗುರುತಿಸಿಕೊಂಡಿದ್ದೇವೆ. ಇದು ಇವತ್ತಿನ ಸ್ಥಿತಿಗೆ ಪ್ರತಿಭಟನೆ. ಕನಕದಾಸರ ಸ್ಥಿತಿಯಲ್ಲಿ ನಿರೀಶ್ವರವಾದಕ್ಕೆ ಪ್ರತಿಭಟನೆಯಾಗಿ ಬಂದದ್ದು ಈಶ್ವರವಾದ. ಇದು ಭಾರತದ ಸ್ಥಿತಿಯಲ್ಲಿ ಹೊಸದಲ್ಲವಾದರೂ ದಾಸರ ಪಂಥದ ಅದರಲ್ಲೂ ಕನಕದಾಸರ ಸಂದರ್ಭದಲ್ಲಿ ಹೊಸದೆನಿಸಿದಂತೆ ತೋರುತ್ತವೆ. ಅದಕ್ಕಾಗಿಯೆ ಕನಕದಾಸರು ತಮ್ಮನ್ನು ಅದರಲ್ಲಿ ತೊಡಗಿಸಿಕೊಂಡರು. ಅವರು ತೊಡಗಿಸಿಕೊಂಡದ್ದು ಹೀಗೆ : I ಸ್ಥಿತಿ : ೧. ಬ್ರಹ್ಮ ಲಿಖಿತ ಮೀರಿ ಬಾಳರುಂಟೆ ನಿರ್ಮಲ ವೈಷ್ಣವರ ವಿಧಿಸೋಂಕಲಿಹುದೆ.

  • ಒತ್ತು ನನ್ನದು