ಪುಟ:Kanakadasa darshana Vol 1 Pages 561-1028.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೬೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೬೫ ಕುಸುಮನಾಭನಿಗೆ ಅರ್ಪಿಸರೇನಯ್ಯ || ಪಶುವಿನ ಮಾಂಸದೊಳುತ್ವಕ್ಷೀರವ ವಸುಧೆಯೊಳಗೆ ಭೂಸುರರುಣ್ಡರೇನಯ್ಯ 1111111111111111111111111111111111111111111111111111 ಆತ್ಮನಾವಕುಲ ಜೀವನಾವ ಕುಲ !” ೨. “ಕುಲ ಕುಲ ಕುಲವೆಂದು ಹೋರಾಡದಿರಿ ನಿಮ್ಮ | ಕುಲದ ನೆಲೆಯನೇನಾದರೂ ಬಲ್ಲಿರಾ ?” (ಭೂಮಿ, ವಸ್ತು, ನೀರು ಇವಕ್ಕೆ ಕುಲವಿಲ್ಲ ಆದರೆ ಅವು ಎಲ್ಲರಿಗೂ ಯೋಗ್ಯ-ಸಂಗ್ರಹ ನನ್ನದು) ಹರಿಯೇ ಸರ್ವೋತ್ತಮ ಹರಿಯೇ ಸರ್ವೆಶ್ವರ ಹರಿಮಯವೆಲ್ಲವೆನುತ ತಿಳಿದು | () ಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? (i) ಯೋಗತಪ್ಪಿದರೆಲ್ಲ ದೇವ ಬ್ರಾಹ್ಮಣರೆ ? (iii) ಕಳ್ಳರಿಗೆ ತಾ ವೀರ ಸ್ವರ್ಗ ದೊರಕುವುದೆ ? (iv) ಭಂಗಿಮುಕ್ಕುಗಳೆಲ್ಲ ಲಿಂಗವಂತರಹುದೆ ? (v) ವೇಷಧಾರಿಗಳು ಸಂನ್ಯಾಸಿಗಳು ಅಹುದೆ ? ಕ.ದಾ-ಹಾ. ಈ ಮೂರೂ ಪ್ರತ್ಯೇಕ ಸಂದರ್ಭಗಳಲ್ಲಿ ಕನಕದಾಸರು ಹೇಗೆ ವರ್ತಿಸಿದ್ದಾರೆ ಎಂಬುದನ್ನು ಪರೀಕ್ಷಿಸಿ. ಮೊದಲ ಸ್ಥಿತಿಯನ್ನು ನೋಡಿದಾಗ ಅವರು 'ಬ್ರಹ್ಮಲಿಖಿತ' 'ದೈವಬಲ' ಬಂಟತನ', 'ಕೇಶವನ ಒಲುಮೆ', 'ದಾಸತನ', “ವೈಷ್ಣವತ್ವ', ಪೂಜೆ ಮುಂತಾದವುಗಳನ್ನು ನಂಬಿ, ನಡೆದುಕೊಂಡು “ವಿಶೇಷನಾಗೊ” ಸ್ಥಿತಿಗೆ ಹೊರಟಿದ್ದಾರೆ. ಕಾರಣವಾಗಿ 'ಸಂಸಾರವನ್ನು ನೆಚ್ಚಿ', ಕಾಯವನ್ನು ನಂಬದೆ ಮುಂದೆ ಹೊರಟಿದ್ದಾರೆ. ಇವು ಅವರಿಗೆ “ಮೋಲೆ ಬಿದ್ದ ಹೆಣ್ಣು' ಬೆಲೆಬಿದ್ದ ಸರಕಿನ ಹಾಗೆ. ಅವಲಂಬಿಸುತ್ತಿರುವ ಮತ್ತು ಅದನ್ನು ತಲುಪಲು ಇರುವ ತೊಡಕುಗಳ ಜೊತೆಗೆ ಸ್ಪರ್ಧಿಸುತ್ತ ಆತಂಕ, ಕಳವಳದಲ್ಲಿ ಮುಳುಗಿದ್ದಾರೆ. ಅವರಿನ್ನೂ ಸಾಧನೆಯ ಒಂದು ಹಂತದಲ್ಲಿದ್ದಾರೆ. ಅದಕ್ಕೆ ಬೇಕಾಗುವ ಮೊದಲ ಅರ್ಹತೆ ಎಂದರೆ ತನ್ನ ಮೂಲವನ್ನು ನಿರಾಕರಿಸುವುದು ಅಥವಾ ನಿವಾರಿಸಿಕೊಳ್ಳುವುದು. ಇದು ಕೇವಲ ಆತ್ಮ-ದೇಹಗಳ ಸಮಸ್ಯೆಯಲ್ಲ 'ಜನಪದ ಬದಲಾವಣೆ. ಒಂದು ಜನಪದದಿಂದ ಮತ್ತೊಂದು ಜನಪದಕ್ಕೆ ಸ್ಥಿತ್ಯಂತರ ಹೊಂದುವುದು. ಅಂದರೆ ರೂಢಿ ಮೂಲ (orientation)ವನ್ನೇ ಬದಲಾಯಿಸಿಕೊಳ್ಳುವುದು. ಇದು ಮೂಲ ಕಲಿತ ಬದುಕು, ಧರ್ಮ, ಸಂಸ್ಕೃತಿಯನ್ನೇ ಬದಲಿಸಿಕೊಳ್ಳುವ ವಿಷಯ, ಈ ಕೆಲಸವೆಂದರೆ ಅವುಗಳನ್ನು ನಂಬಿಕೆಯಿಂದ ಅಪನಂಬಿಕೆಗಳನ್ನಾಗಿ ಪರಿವರ್ತಿಸುವುದು ಮೊದಲನೆಯ ಹಂತದ ಕ್ರಿಯೆ, ತ್ಯಜಿಸುವುದು ಅಥವಾ ನಿರಾಕರಿಸುವುದು ಎರಡನೆಯ ಹಂತದ ಕ್ರಿಯೆ. ಮೂರನೆಯ ಹಂತದ ಕ್ರಿಯೆ ಅವುಗಳನ್ನು ಅಪಮೌಲ್ಯಗಳೆಂದು ಸಾಧಿಸಿ ಬೇರು ಮೂಲ ತೊಡೆದು ಹಾಕುವುದು. ನಾಲ್ಕನೆಯ ಹಂತದಲ್ಲಿ ತಾನು ಅಪಮೌಲೀಕರಿಸಿದ ವಿಷಯಗಳಿಗೆ ಸಮಸಮವಾಗಿ ತಾನು ನಂಬಿ ಬಳಸುತ್ತಿರುವ ನಂಬಿಕೆ ಮೌಲ್ಯ-ಧರ್ಮವನ್ನು ಒತ್ತಿ ಒತ್ತಿ ಎತ್ತಿ ಎತ್ತಿ ಹೇಳಿ ಸಮರ್ಥಿಸುತ್ತಾ ಹೋಗುವುದು. ಹೀಗಾದಾಗ ಮಾತ್ರ ಸಮರ್ಥ ಪಠ್ಯಾಯ ಮತ್ತು ಅದರ ಸ್ವೀಕಾರ ಸಾಧ್ಯವಾಗುತ್ತದೆ. ತತ್ಸಂಬಂಧವಾಗಿಯೆ ಕನಕದಾಸರು ತಾವು ಬದುಕಿನ ಹಿಂದಿನ ಧರ್ಮಕೇಂದ್ರದೈವಗಳನ್ನು “ಡೊಂಬದೈವ', 'ಹೀನದೈವ', 'ಸೊಂಟಮುರುಕ', 'ಉರಿಮೋರೆ', “ಎಕನಾತಿ' 'ಠಕ್ಕುದೇವ', 'ಛೀ ಥ ಎಂಬುವ' ದೈವ, ನಷ್ಟದ ಬಾಬತ್ತಿನ ದೈವಗಳೆಂದು ನಿರಾಕರಿಸುತ್ತಾರೆ. ಜೊತೆ ಜೊತೆಯಲ್ಲಿ ಕೇಶವನನ್ನು 'ದೊಡ್ಡ ದೇವರು' ಎಂದೂ ಆ ದೈವಸಂಬಂಧಿಗಳನ್ನು `ದೇವ ಬ್ರಾಹ್ಮಣ' 'ಸಾರಸತ್ವದ ಮತ' `ವೇದ ವಿಪ್ರರು' 'ಪರಮ ವೈಷ್ಣವ' 'ಸದಮಲ ವೈಷ್ಣವ' ಎಂದೂ ಹೇಳುತ್ತ “ತಿರುಮಂತ್ರವನು ಭಜಿಸು ತಿರುಲಾಂಛನವಧರಿಸು” ಎಂದೂ ನಿರ್ದೇಶಿಸುತ್ತಾರೆ. ದೇವ ಬ್ರಾಹ್ಮಣರನ್ನು ಜರಿಯುವುದು ಸರಿಯಲ್ಲವೆನ್ನುತ್ತಾರೆ. ಸದಮಲ ವೈಷ್ಣವರು ಬಂದರೆ ಎದ್ದು ನಮಸ್ಕರಿಸಬೇಕು ಎನ್ನುತ್ತಾರೆ, ಬೀರನ, ಮೈಲಾರನ, ಯಲ್ಲಮ್ಮನ ಪೂಜೆಯನ್ನು ಹಿಂದೆ ತಳ್ಳಿ 'ಹರಿಹರ ಪೂಜೆಗಳು ಹರಣಗೊಳ್ಳುತ್ತಿವೆ' ಎಂದು ಆತಂಕಗೊಳ್ಳುತ್ತಾರೆ. ಇದು ಅವರು ಅವರಿಗೇ ಪ್ರತಿಭಟನೆಯಾಗಿ, ಭಾರತದ ನಿರಂತರ ಪ್ರತಿಭಟನೆಯ ಒಂದು ಧ್ರುವವಾಗಿ ತಮ್ಮ ಉದ್ದೇಶಿತ ಕೇಂದ್ರವನ್ನು ಎಟುಕಿಸಿಕೊಳ್ಳುವ ಹೋರಾಟದಲ್ಲಿ ತೊಡಗಿದ್ದಾರೆ. ೪.೨ 'ಜನಪದ'ದಿಂದ 'ಜನಪದಕ್ಕೆ ಕನಕದಾಸರು ಇದ್ದ ಮೂಲಸ್ಥಿತಿಯಲ್ಲಿ ಭವ, ದಾಸತ್ವ, ಬಂಟತನ-ಈ ಮುಂತಾದವು ನಂಬಿಕೆಗಳೂ ಅಲ್ಲ, ಮೌಲ್ಯಗಳೂ ಅಲ್ಲ. ತಮ್ಮ ಮೂಲ ನಂಬಿಕೆ, ಹಾಗೂ ಧರ್ಮಕ್ಕೆ ಪ್ರತಿಯಾಗಿ, ಪ್ರತಿಭಟನೆಯಾಗಿ ಬಂದುವು. ಈ ಪ್ರತಿರೋಧವೆ ಕನಕದಾಸರ ಇಲ್ಲಿಯ ವ್ಯಕ್ತಿತ್ವ ತನ್ನ ಮೂಲವನ್ನು ಬಿಡುತ್ತಿರುವ ಅನ್ಯ ಮೂಲವನ್ನು