ಪುಟ:Kanakadasa darshana Vol 1 Pages 561-1028.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೬೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ععع ಯೋಚಿಸುವುದು ಮತ್ತು ವಿಮರ್ಶಿಸುವುದು ಅವರ ಬದುಕು-ಬರಹದ ಸಂದರ್ಭಕ್ಕೆ ಹೊರಗಡೆಯಿಂದ ನೋಡಿದಂತಾಗುತ್ತದೆ. ಇವತ್ತಿನ ಸಂದರ್ಭದಲ್ಲಿ ಶೂದ್ರ ಎಂದ ತಕ್ಷಣ ಅವನು ಅನೇಕ ತತ್ವಗಳಿಗೆ-ವಾದಗಳಿಗೆ ಗ್ರಾಸ ಅಥವಾ ಪ್ರತಿನಿಧಿ ಎಂದು ಭಾವಿಸುವಂತೆ ಕನಕದಾಸರನ್ನು ಭಾವಿಸಲಾಗದು. ಹಾಗೆ ಮಾಡಿದರೆ ಅವರ ಸಾಧನೆ ಮತ್ತು ವ್ಯಕ್ತಿತ್ವವನ್ನು ಅಪಮೌಲ್ವಿಕರಿಸಿ (devaluate)ದಂತೆ. ಕೃತಿ-ವ್ಯಕ್ತಿತ್ವ ನ್ಯಾಯದ ಮೇಲೆ ಮಾತನಾಡುವುದಾದರೆ ಕನಕದಾಸರನ್ನು ತೀರಾ ಭಾಷಿಕವಾಗಿ ನೋಡಿದಂತೆ ಆಗುತ್ತದೆ. 6) ೪.೩ ವಿರಾಮದಿಂದ ಪರಿಣಾಮಕ್ಕೆ ಕನಕದಾಸರ ಪ್ರತಿಭಟನೆಯ ಹಂತ ಅವರಿಗೆ ಅಡ್ಡಿ ಆತಂಕಗಳು ಎದುರಾದ ಪರಿಸ್ಥಿತಿ. ಅವರ ಕಠಿಣ ಪರಿಸ್ಥಿತಿ ಮತ್ತೆ ಮತ್ತೆ ಸಣ್ಣ ಪುಟ್ಟವರಿಂದ, ಮೂರ್ಖರಿಂದ ಪರೀಕ್ಷೆಗೆ ಒಳಗಾದ ಸ್ಥಿತಿ. ಇದು ಒಂದು ಬಗೆಯಲ್ಲಿ. ಭಾರತೀಯ ಶೂದ್ರ ಬ್ರಾಹ್ಮಣನಾಗುವಲ್ಲಿ, ಅರ್ಥಾತ್ ಗುರು ಪರಂಪರೆಗೆ ತಲುಪಬೇಕಾದಲ್ಲಿ ನಿರ್ವಹಿಸಲೇ ಬೇಕಾದ ಪವಾಡಸದೃಶ ಜೀವನನಿರ್ಮಿತಿ ಪ್ರಕ್ರಿಯೆ ; ಪರಿಣಾಮವೆಂಬಂತೆ ಕನಕದಾಸರು ತಮಗೆ ಎದುರಾದ ತಾತ್ವಿಕ ಅರ್ಹತೆ ಅಥವಾ ನೆಲೆ. ಆ ಅಮೂರ್ತ ಸ್ವರೂಪವನ್ನು ಒಡೆಯಲು “ಆತ್ಮ ಯಾವ ಕುಲ ಜೀವವಾವ ಕುಲ!” ಎಂಬ ಸಾಮಗ್ರಿಯೊಡನೆ ಎದ್ದುನಿಲ್ಲುತ್ತಾರೆ. ಕುಲ ಅಷ್ಟೊಂದು ಸರಳ ಗ್ರಾಹ್ಯ ವಿಷಯ ಅದೇ ಕುಲದವರಿಗೂ ಅಸಾಧ್ಯ. ಅದು ಏಕಕಾಲದಲ್ಲಿ ಅರ್ಥ, ಸಂಸ್ಕೃತಿ, ಸಂಸ್ಥೆ ಮತ್ತೆ ಬೇರೇನೋ ಆಗಿರುತ್ತದೆ. ಆದ್ದರಿಂದ ಅದರ ಕಾವ್ಯಗಳನ್ನು ಕೈಗೆತ್ತಿಕೊಂಡು ಜಯ ಸಾಧಿಸಲು ಹೊರಡುತ್ತಾರೆ ಕನಕದಾಸರು, ಕುಲದ ಕಾರಸ್ತಭಾವಗಳಾದ 'ಪೊಟ್ಟೆಗುಡುಮ' ತನ, 'ಅಯೋಗ್ಯ ತನ', ಕಳ್ಳಸ್ವಭಾವ, 'ಭಂಗಿಮುಕ್ಕುತನ ಮತ್ತು ವೇಷಧಾರಿತ್ವವನ್ನು ಹಿಡಿದೆತ್ತಿ ಜಾಲಾಡುತ್ತಾರೆ. ಹೀಗೆ ಮಾತನಾಡುವಾಗ ಕೂಡ ಅವರು ಕುಲವನ್ನು ಸಾರಾಸಗಟು ನಿರಾಕರಿಸುತ್ತಿಲ್ಲ : ಇದು ಬಂಡಾಯಗಾರನ ಸ್ಥಿತಿ ಕೂಡ. ಆಚೆಗೆ ಹೋಗದೆ, ಒಳಕ್ಕೆ ಬರದೆ ತಳಮಳಿಸುವ, ಸಂದಿಗ್ಧಗೊಳ್ಳುವ ಪರಿಸ್ಥಿತಿ, ಇದೇ ಪರಿಸ್ಥಿತಿಯಲ್ಲಿ ಬೆಳೆದರೆ ಬಂಡಾಯಗಾರನೇ ಒಬ್ಬ ಮಹಾಶೋಷಕ ಆಗಬಹುದು. ಆದರೆ ಕನಕದಾಸರು ತಮ್ಮ ಮೂಲಕುಲವನ್ನು ಖಂಡಿತವಾಗಿ ನಿರಾಕರಿಸಿದ್ದಾರೆ. ಅವರು ಸ್ವೀಕರಿಸಹೊರಟಿರುವ ಕುಲದ ಮೂಲವನ್ನು ಮಾತ್ರ ಪ್ರಶ್ನೆ ಮಾಡುವುದಿಲ್ಲ. ಕೆಸರಿನ ಕಮಲ ಕುಸುಮನಾಭನಿಗೆ ಅರ್ಪಿತವಾಗುವ ಮೂಲಕ ಅದು ತನ್ನ ಮೂಲಕಳಂಕವನ್ನು ಕಳೆದುಕೊಳ್ಳುತ್ತದೆ : ಹಸುವಿನ ಮಾಂಸಮೂಲದಿಂದ ಬರುವ ಹಾಲು ಭೂಸುರರ ಉಪಯೋಗದಿಂದ ತನ್ನ ಮೂಲದ ಅಶುದ್ಧತ್ವವನ್ನು ಕಳೆದುಕೊಳ್ಳುತ್ತದೆ. ಹಾಗೆ ತಾವು ಶ್ರೇಷ್ಠ ಪರಿಕಲ್ಪನೆಯ ಕೇಂದ್ರಸ್ಥಾನವಾದ ಆದಿಕೇಶವನ ಭಕ್ತ-ದಾಸ ಆಗುವ ಮೂಲಕ ತನ್ನ ಮೂಲ ಕಳಂಕವನ್ನು ಕಳೆದುಕೊಳ್ಳುತ್ತೇನೆ ಎಂದು ದೃಢವಾಗಿ ನಂಬಿದ್ದಾರೆ. ತಿಮ್ಮಪ್ಪ > ಕನಕ ; ಕನಕ > ಕನಕದಾಸ ; ಆಗುವ ಹಾಗೆ ಶ್ರೇಷ್ಠತೆ ಚಲನೆಯಲ್ಲಿ ಕನಿಷ್ಠತೆಗಳು ಕಳಚಿಕೊಳ್ಳುತ್ತವೆಂಬುದು ಕನಕದಾಸರ ಚಿಂತನೆಯಾಗಿದೆ. ಧರ್ಮಾಂತರ ಪರಿಸ್ಥಿತಿಯಲ್ಲಿ ಮಾತ್ರ ಕನಕದಾಸರು ಬಂಡಾಯಗಾರರು. ಇರುವ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ ಬಂಡಾಯಗಾರರಲ್ಲ. ಹಾಗೆ ದ ೧ ಸಹಾಯಕ ಗ್ರಂಥಗಳು ೧. ಕನಕದಾಸರ ಕೀರ್ತನೆಗಳು-ಸಂ. ಪಂಡಿತರತ್ನ ವಿದ್ಯಾವಾರಿಧಿ ಶ್ರೀ ಬಿ. ಶಿವಮೂರ್ತಿ ಶಾಸ್ತಿ, ಡಾ. ಕೆ. ಎಂ. ಕೃಷ್ಣರಾವ್, ಪ್ರ, ರಾಜ್ಯ ಸಮಿತಿ ಶ್ರೀ ಕನಕದಾಸರ ನಾಲ್ಕನೆಯ ಶತಮಾನೋತ್ಸವ, ಮೈಸೂರು ಸರ್ಕಾರ, ಮೈಸೂರು ೧೯೬೫ ಶ್ರೀ ಕನಕದಾಸರ ಹಾಡುಗಳು ಸಂ. ಶ್ರೀ ಕೃಷ್ಣಶರ್ಮ ಬೆಟಗೇರಿ, ಶ್ರೀ ಹುಚ್ಚರಾವ್ ಬೆಂಗೇರಿ, ಪ್ರ. ಸಮಾಜ ಪುಸ್ತಕಾಲಯ, ಧಾರವಾಡ, ೧೯೭೯ ಕನಕದರ್ಶನ - ಡಾ. ವೆಂಕಟ್ರಾಯ ಆನಂದ ಶೆಟ್ಟಿ, ಪ್ರ ಶ್ರೀ ದೈಪಾಯನ ಟ್ರಸ್ಟ್, ಮುಂಬಯಿ, ೧೯೭೪ - ಮಹಾತ್ತ ಕನಕದಾಸ ಪ್ರಶಸ್ತಿ-ಪ್ರ, ರಾಜ್ಯ ಸಮಿತಿ, ಶ್ರೀ ಕನಕದಾಸರ ನಾಲ್ಕನೆಯ ಶತಮಾನೋತ್ಸವ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು. ಕನಕದಾಸರ ಪದಗಳು - ಲೇ: ಶ್ರೀ ಕಲಮದಾನಿ ಗುರುರಾಯರು, ಪು, ಎ. ಎಂ. ಕರಡಿ, ಹುಬ್ಬಳ್ಳಿ, ೧೯೬೫ | ನಳಚರಿತ್ರೆ-ಸಂ. ದೇ. ಜವರೇಗೌಡ, ಪ್ರ : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ೧೯೮೫ ರಾಮಧಾನ್ಯ ಚರಿತ್ರೆ-ಸ೦. ದೇ. ಜವರೇಗೌಡ, ರಾಜ್ಯಸಮಿತಿ ಶ್ರೀ ಕನಕದಾಸ ನಾಲ್ಕನೆಯ ಶತಮಾನೋತ್ಸವ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು, ೧೯೬೫. ಕನಕ ಕಿರಣ, ಸಂ ಕಾ. ತ. ಚಿಕ್ಕಣ್ಣ ಪ್ರ ಕಾಳಿದಾಸ ಸಾಂಸ್ಕೃತಿಕ ಸಂಘ, ಬೆಂಗಳೂರು, ೧೯೮೨ ಕನಕದಾಸ ಜೀವನ ವಿಚಾರ-ಸಂ ಜ್ಯೋತಿ ಹೊಸೂರು. ಪ್ರ ಕಾಲಗತಿ ಪ್ರಕಾಶನ, ಬೆಳಗಾವಿ, ೧೯೮೩ ಪ ] 5