ಪುಟ:Kanakadasa darshana Vol 1 Pages 561-1028.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸನ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ೭೬೯ ಕನಕದಾಸನ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ಸ್ಪಂದಿಸುವ ಸಾಹಿತ್ಯ ರೂಪುಗೊಂಡರೆ ಅದೊಂದು ಸಾಂಸ್ಕೃತಿಕ ದಾಖಲೆ ಯಾಗುತ್ತದೆ ಎಂಬ ಮಾತು. ಅಂದರೆ ಒಬ್ಬ ಲೇಖಕನ ಅನುಭವ ಮತ್ತು ಅಭಿವ್ಯಕ್ತಿ ಎರಡೂ ಹರಳುಗಟ್ಟಿದ್ದರೆ ಅವನ ರಚನೆ ಹೇಗೆ ಸಾರ್ವತ್ರಿಕವೂ ಸಾರ್ವಕಾಲಿಕವೂ ಆಗಬಹುದು ಎನ್ನುವುದಕ್ಕೆ ಕನಕದಾಸನ ರಚನೆಗಳು ನಮ್ಮ ಮುಂದಿದೆ. ನನ್ನ ಪ್ರಕಾರ ಕನಕದಾಸ ಕೇವಲ ಕೀರ್ತನೆಕಾರ ಆಗಿದ್ದರೆ ಅಥವಾ ಕೇವಲ ಭಕ್ತ ಮಾತ್ರ ಆಗಿದ್ದರೆ ಸಾಮಾಜಿಕವಾಗಿ ಈ ಮಾತನ್ನು ಹೇಳಲು ಬರುತ್ತಿರಲಿಲ್ಲ. ಅವನು ಕವಿಯೂ ಆಗಿದ್ದಾನೆ ಎಂಬುದರಲ್ಲೇ ಅವನ ಈ ಅನುಭವ ಮತ್ತು ಅಭಿವ್ಯಕ್ತಿಯ ನೆಲೆಗಳು ಗಟ್ಟಿಕೊಳ್ಳುತ್ತವೆ. ಕಾ. ತ. ಚಿಕ್ಕಣ್ಣ ಕನಕದಾಸನ ಸಾಮಾಜಿಕ ಕಾಳಜಿಗಳನ್ನು ವಿಚಾರಮಾಡುವ ಸಂದರ್ಭದಲ್ಲಿ ಪೂರಕವಾಗಿ ಎರಡು ಅಂಶಗಳನ್ನು ಗಮನಿಸುವುದು ಅವಶ್ಯಕವೆನಿಸುತ್ತದೆ. ಒಂದು ಅವನ ಕಾಲ ಅಥವಾ ಪರಿಸರ, ಎರಡು ಅವನ ದಾಸತ್ವ, ಹದಿನೈದನೆಯ ಶತಮಾನದ ಅಂಚಿನಲ್ಲಿ ಬಾಳಿದ ಸಂತನೊಬ್ಬನ ಸಾಮಾಜಿಕ ಪ್ರಜ್ಞೆಯನ್ನು ಇಪ್ಪತ್ತನೆಯ ಶತಮಾನದ ಅಂಚಿನಲ್ಲಿ ನಿಂತು ವಿಶ್ಲೇಷಿಸುವಾಗ, ಈ ಎರಡು ಅಂಶಗಳನ್ನು ನೆನಪಿಸಿಕೊಂಡೇ ಚರ್ಚೆ ಮಾಡಬೇಕೆಂಬುದು ಮಾತು. ಅಂದರೆ ಹದಿನೈದನೆಯ ಶತಮಾನಕ್ಕಿಂತ ಇಪತ್ತನೆಯ ಶತಮಾನದ ನಮ್ಮ ನಡುವಿನ ಸಮಾಜ ಹೆಚ್ಚು ಸಂಕೀರ್ಣವೂ ಹೆಚ್ಚು ಸಿನಿಕವೂ ಆಗಿರುವುದರಿಂದ ನಾವು ನೋಡಬಯಸುವ ಸಾಮಾಜಿಕ ಸಂಗತಿಗಳನ್ನು ಅಷ್ಟೇ ಸೂಕ್ಷ್ಮವಾಗಿ, ಹೆಚ್ಚು ಹರಿತವಾಗಿ, ತೀವ್ರವಾಗಿ ಕಾಣಬಯಸುತ್ತೇವೇನೋ ಎಂಬ ಅನುಮಾನ ನನಗಿದೆ. “ಏನೇ ಇರಲಿ, ಐದು ಶತಮಾನಗಳ ಹಿಂದೆ ಬಾಳಿಹೋದ ಸಂತ ಕವಿಯೊಬ್ಬನ ಸಾಮಾಜಿಕ ಚಿಂತನೆಯನ್ನು ಇಂದು ಪರಿಗಣಿಸುತ್ತಿದ್ದೇವೆ-ಎಂಬುವ ಮಾತೇ ಆ ಕವಿಯ, ಅವನ ಸಾಹಿತ್ಯದ ಹಿರಿಮೆಯನ್ನು ತಿಳಿಸುತ್ತದೆ. ಇದು ನಮ್ಮ ಸಾಮಾಜಿಕ ಪರಿಸರದ ಸಾಹಿತ್ಯವನ್ನು ಜೀವಂತವಾಗಿರಿಸಿಕೊಳ್ಳುವ ವಿಶ್ವಾಸವನ್ನು ತೋರಿಸುವ ಬಗೆಯೂ ಆಗಿರಬಹುದು. ಕನ್ನಡ ಸಾಹಿತ್ಯ ಚರಿತೆಕಾರರು ಹೇಳುತ್ತಾರೆ : “ಕನಕದಾಸನ ಜೀವನವೇ ಒಂದು ಮಹಾಕೃತಿಯಾಗಿತ್ತು. ಅವನ ಕೃತಿಗಳಲ್ಲಿ ಮಹೋನ್ನತಿ ಬೆಳಗಿದೆ. ಪುರಂದರದಾಸನಂತೆ ಆದರೂ ಅವನಿಗಿಂತ ಕೆಲಮಟ್ಟಿಗೆ ಬೇರೆಯಾಗಿ ಕನಕದಾಸ ತನ್ನ ಜೀವನ ಸಾಹಿತ್ಯಗಳ ಸಿದ್ದಿಯಿಂದ ಕನ್ನಡಿಗರ ಚಿರಂತನವಾದ ಸಂಸ್ಕೃತಿ ದೀಪಗಳಲ್ಲಿ ಒಂದಾಗಿದ್ದಾನೆ.” ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು, ಜೀವನ ಮತ್ತು ಸಾಹಿತ್ಯಗಳ ಸಿದ್ದಿಯಿಂದ ಕನಕದಾಸ ಚಿರಂತನವಾಗಿದ್ದಾನೆ ಎಂಬ ಮಾತು. ಬದುಕನ್ನು ಕನಕದಾಸನ ಸಾಹಿತ್ಯವನ್ನು ಗಮನಿಸಿ ಅವನ ಒಟ್ಟು ನಿಲುವನ್ನು ಪರಿಭಾವಿಸುವಾಗ ಮೂಲಗಾಮಿಯಾಗಿ ಸುತ್ತುವ ಭಕನ ಕರ್ಮಸಿದ್ಧಾಂತದಿಂದ ಕವಿಯು ಆಚೆ ಬರಲು ಆಗದಿರುವುದನ್ನು ಕಾಣುತ್ತೇವೆ. ಮಣ್ಣಿನಲಿ ಬಂಧಿಸಿದ ದೇಹವ ಮಣ್ಣು ಕೂಡಿಸಬೇಡ ಎಂಬ ಕನಕದಾಸ ಇಹದ ಅರಿವಿದ್ದೂ ಪರದ ಕಡೆ ದಾಟಿ ಬಿಡುವಾಗ ಇದರ ಅನುಭವವಾಗುತ್ತದೆ. ಇಂಥ ತತ್ವವನ್ನು ಅವನು ಒಪ್ಪಿಯೂ ಸಾಮಾಜಿಕ ಬದುಕಿನ ಬಗ್ಗೆ ತೋರಿದ ಕಾಳಜಿ ಮಾತ್ರ ಅಪೂರ್ವವಾಗಿದೆ. ಇದು ಕನ್ನಡ ಭಕ್ತಿಪಂಥದ ಸಂದರ್ಭದಲ್ಲಿ ನಾವು ಕಾಣಬಹುದಾದ ವಿಶೇಷವಾದ ಮತ್ತು ವಿಭಿನ್ನವಾದ ಅಭಿವ್ಯಕ್ತಿ ಎನ್ನಬಹುದು. ಈ ಮಾತನ್ನು ಇನ್ನಷ್ಟು ಸ್ಪಷ್ಟಗೊಳಿಸುವುದಕ್ಕಾಗಿ ಸ್ವಲ್ಪ ಹಿಂದೆ ಸರಿದು ವಚನಕಾರರ ಕಾಲವನ್ನು ಉಲ್ಲೇಖಿಸಬಹುದು. ನಾವು ಸಾಮಾನ್ಯವಾಗಿ ವಚನ ಸಾಹಿತ್ಯ ಮತ್ತು ದಾಸಸಾಹಿತ್ಯಗಳೆರಡನ್ನು ಪರಸ್ಪರ ಹೋಲಿಸುತ್ತೇವೆ. ಈ ಎರಡರ ಮಧ್ಯೆ ಸಾಮ್ಯವನ್ನು ಕಾಣಬಯಸುತ್ತೇವೆ. ಇದೇ ಇಲ್ಲಿ ಪ್ರಶ್ನಾರ್ಹವಾಗುವುದು. ಸಾಮಾಜಿಕ ಮಹತ್ವದ ದೃಷ್ಟಿಯಿಂದ ನೋಡಿದಾಗ ಈ ಎರಡು ಪಂಥಗಳು ಪರಸ್ಪರ ಭಿನ್ನ. ಇವುಗಳ ಧಾರ್ಮಿಕ ಆಂದೋಳನ-ಆಂದೋಳನದ ಪರಿಭಾಷೆಯಲ್ಲಿಯೇ ಹೇಳಬೇಕಾದರೆ-ವಚನ ಕಾಯಕದ ಮಹತ್ವವನ್ನು ಮುಂದಿಟ್ಟುಕೊಂಡು ಪಡೆದ ವಿಶಾಲತೆ, ವೈವಿಧ್ಯಪೂರ್ಣತೆ, ಸಾಂಘಿಕ ಶಕ್ತಿ, ನಿಜನೆಲದ ವಾಸನೆ ದಾಸಸಾಹಿತ್ಯದಲ್ಲಿ ಇಲ್ಲ, ವಚನಕಾರರಲ್ಲಿ ಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ಸಿದ್ದರಾಮ, ಮೊದಲಾದ ಪ್ರಸಿದ್ದರ ಜೊತೆ ಜೊತೆಯಲ್ಲಿಯೇ ಸಮಸಮವಾಗಿ ವ್ಯಕ್ತಗೊಳ್ಳುವ ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಮಾರಯ್ಯ