ಪುಟ:Kanakadasa darshana Vol 1 Pages 561-1028.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೭೦ ಕನಕ ಸಾಹಿತ್ಯ ದರ್ಶನ-೧ ಕನಕದಾಸನ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ೭೭೧ ಮುಂತಾದವರನ್ನು ಮರೆಯುವಂತಿಲ್ಲ. ಇಲ್ಲಿಗೆ ಬಡವರು, ಬಲ್ಲಿದರು, ಮೇಲ್ಜಾತಿಯವರು ಕೆಳಜಾತಿಯವರು, ಅಷ್ಟೇ ಯಾಕೆ, ಕನಿಷ್ಠ ವೃತ್ತಿಯ ಹೆಂಗಸರು ಕೂಡ ಬಂದು ಕೂಡುತ್ತಾರೆ. ಕೂಡಿ ಈ ಚಳವಳಿಯಲ್ಲಿ ಸಮಪಾಲು ಪಡೆಯುತ್ತಾರೆ. ಆದರೆ ದಾಸಸಾಹಿತ್ಯಕ್ಕೆ ಈ ಮಾತು ಅನ್ವಯಿಸುವುದಿಲ್ಲ. ವಾಸ್ತವ ಬದುಕಿಗೆ ಮುಖಿಯಾಗದ ಬಾಳಾಟಕ್ಕೊಂದು ಕ್ರಿಯೆಯೇ ಇಲ್ಲದ [ಅಲ್ಲಿ ಕಾಯಕ ಆದಂತೆ] ಒಂದು ಬಗೆಯ ಹೊಂದಾಣಿಯ ಐಹಿಕ ಸಂಬಂಧವನ್ನು ಕಡಿದುಬಿಡು ಎಂದು ದೇವರಲ್ಲಿ ಮೊರೆಯಿಡುತ್ತ ಭಕ್ತಿಯ ಪಾರಮ್ಯವನ್ನು ಸಾರುತ್ತ ತತ್ತ್ವ ಪ್ರಜೆಗಷ್ಟೇ ಮಿತಿಗೊಂಡ, ಸಮಾಜದ ಇತರೆ ಶೂದ್ರವರ್ಗದ ದನಿಯನ್ನು ಒಳಗುಮಾಡಿಕೊಳ್ಳದಾದ ದಾಸಸಾಹಿತ್ಯದ ಪರಂಪರೆಯನ್ನು ಸಾಮಾಜಿಕ ಒರೆಗಿಟ್ಟು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಹೀಗಾಗಿ ವಚನಸಾಹಿತ್ಯದ ಇದಿರಿಟ್ಟು ದಾಸಸಾಹಿತ್ಯವನ್ನು ನೋಡಿದರೆ ಇದೊಂದು ಪ್ರಬಲ ಚಳವಳಿಯಾಗುವುದಿರಲಿ ಆಶಯ ಆಯಾಮಗಳ ದೃಷ್ಟಿಯಿಂದಲೂ ಎಷ್ಟು ದುರ್ಬಲವಾದದ್ದು ಎಂದು ಗೊತ್ತಾಗುತ್ತದೆ. ಆದ್ದರಿಂದ ಸಮಾನ ಎಳೆ ಎಂದು ಗುರುತಿಸಬಹುದಾದ ಧಾರ್ಮಿಕ ಕಾರಣದಿಂದಲೂ ಇವೆರಡು ಪಂಥಗಳನ್ನು ಹೋಲಿಸುವುದು ಕೂಡ ಕಷ್ಟವಾಗುತ್ತದೆ. ಆದರೆ ಇದಕ್ಕೆ ಅಪವಾದವೆಂಬಂತೆ ಕನಕದಾಸ ದಾಸಪರಂಪರೆಯನ್ನು ಒಪ್ಪಿಕೊಂಡು ಮತ್ತೆ ಆ ಪರಂಪರೆಯ ಜನ ಒಡ್ಡಿದ ವಿರೋಧಗಳನ್ನೆಲ್ಲ ಇದಿರಿಸುತ್ತಲೆ ಬೆಳೆದದ್ದು ನಮ್ಮ ಕುತೂಹಲವನ್ನು ಕೆರಳಿಸುವ ವಿಚಾರವಾಗಿದೆ." ಈ ಹಿನ್ನೆಲೆಯಲ್ಲಿ ಕನಕ ದಾಸನ ಮಹತ್ವವನ್ನು ಅರಿಯಲು ಸಾಧ್ಯಮಾಡಿಕೊಳ್ಳಬಹುದು. ರೂಢಿಸಿಕೊಂಡಿದ್ದವನು. ಇದೆಲ್ಲ ಅವನ ವಾಸ್ತವ ಬದುಕಿನ ಸ್ಥಿತಿ. ಅವನು ಕಂಡುಕೊಂಡಿದ್ದ ರೀತಿ. ಆ ಮೇಲಿನ ಘಟನೆಗಳು ಕನಕದಾಸನ ವಾಸ್ತವ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ಪ್ರೀತಿಯ ಅಪ್ಪ, ಅಕ್ಕರೆಯ ಅವ್ವ, ನೆಚ್ಚಿನ ಹೆಂಡತಿ (ಕೊನೆಗೆ ಮಗ ಕೂಡ ಅನ್ನುತ್ತಾರೆ) ಹೀಗೆ ಒಬ್ಬರಾದ ಮೇಲೆ ಒಬ್ಬರನ್ನು ಕಳೆದುಕೊಳ್ಳುತ್ತಾನೆ. ಇವು ಕನಕದಾಸನಲ್ಲಿ ಬಹು ಘಾಸಿಯುಂಟು ಮಾಡಿದ ಘಟನೆಗಳು ಮುಂದೊಮ್ಮೆ ಯುದ್ದವೊಂದರಲ್ಲಿ ತಾನು ವಿಶ್ವಾಸವಿಟ್ಟಿದ್ದ ತೋಳ್ಳಲವೂ ನುಚ್ಚುನೂರಾಗುತ್ತದೆ. ಈ ಎಲ್ಲ ಆಘಾತಗಳ ಪರಿಣಾಮ ಕನಕದಾಸನಿಗೆ ಗೊಂದಲ ಹುಟ್ಟಿರಬೇಕು. ಹೀಗೆ ದಿಜೂಢನಾದ, ಅತಂತ್ರ ಸ್ಥಿತಿಯಲ್ಲಿ ಕನಲಿದ ಕನಕದಾಸನಿಗೆ ಆ ಹೊತ್ತಿಗೆ ಪ್ರಭಾವಶಾಲಿಯಾಗಿದ್ದ ವ್ಯಾಸರಾಯನ ಮುಖಂಡತ್ವದ ವೈಷ್ಣವ ಧರ್ಮ ಸಹಜವಾಗಿ ಆಕರ್ಷಿಸಿತು. ಬದುಕಿನ ತಲ್ಲಣಕ್ಕೆ ಪ್ರತಿಸ್ಪಂದಿಸಿದ ಕನಕದಾಸ ದೈವಬಲಕ್ಕೆ ಶರಣಾಗಿರುವುದನ್ನು ನಾವು ಸುಲಭವಾಗಿ ಊಹಿಸಬಹುದು. ಕನಕದಾಸನ ಬದುಕಿನಲ್ಲಿ ಆಗಿಹೋದ ಒಂದು ಆಕಸ್ಮಿಕ ತಿರುವು ಇದಾದರೂ ಅವನು ಸಂಘರ್ಷ ಮುಖಿಯಾದದ್ದು ಹೀಗೆ ಎಂಬುದು ಮುಖ್ಯವಿಚಾರ. ಅಪ್ಪ ತೋರಿಸಿದ್ದ ಭಕ್ತಿ, ನಿಷ್ಠೆ, ನಿಯಮಗಳನ್ನು ಮೊದಲಿನಿಂದಲೂ ರೂಢಿಸಿಕೊಂಡಿದ್ದ ಕನಕದಾಸ ಮನಸೋತು ಹರಿದಾಸತ್ವಕ್ಕೆ ಬದ್ದನಾದರೂ ಅವನು ಇದಿರಿಸಬೇಕಾಗಿದ್ದ ಸಂಗತಿಗಳು ಬೇರೆಯೇ ಆಗಿದ್ದವು. ಅವನು ಹರಿದಾಸ ಪರಂಪರೆಗೆ ತನ್ನನ್ನು ಅರ್ಪಿಸಿಕೊಂಡರೂ ಆ ಪರಂಪರೆಯ ಜನ ಇವನನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಾಗಲಿಲ್ಲ. ವೇದಶಾಸ್ತ್ರಗಳನ್ನು ಬೋಧಿಸಹೊರಟಿದ್ದ ದಾಸಪರಂಪರೆಗೆ ಶೂದ್ರ ವರ್ಗದಿಂದ ಬಂದ ಕನಕದಾಸ ಒಂದು ಆಶ್ಚರ್ಯವಾದ ಗೇಲಿಗೆ ವಸ್ತುವಾದ. ಅವನೊಳಗಿದ್ದ ಕವಿ ಒಳಗೊಳಗೇ ಗುನುಗುವುದನ್ನು ಬಿಟ್ಟು ಹೊರಬರುವುದು ಅಷ್ಟೇ ಅನಿವಾರ್ಯವಾಯಿತು. ಹೀಗೆ ಒಂದು ಬಗೆಯ ಬದುಕಿನ ಹುಡುಕಾಟದಲ್ಲಿ, ಅದರ ಅನಿಶ್ಚಿತತೆಯ ತೀವ್ರ ತಳಮಳದಲ್ಲಿ ಕನಕದಾಸನ ಪಾರಮಾರ್ಥಿಕವಾದ ಹಂಬಲ ಶುರುವಾದರೂ ಅಷ್ಟೇ ಸಹಜವಾಗಿ ಈ ಮನುಷ್ಯ ಕುಲದ ಅನಿಷ್ಟ ಅಸಮಾನತೆಗೆ ಸ್ಪಂದಿಸದಿರುವುದು ಅವನಿಗೆ ಆಗಲಿಲ್ಲ. ಇಲ್ಲಿ ಎಂಥ ವಿಪರ್ಯಾಸವನ್ನು ಕಾಣುತ್ತೇವೆಂದರೆ ವಾಸ್ತವ ಬದುಕಿನಿಂದ ಭ್ರಮಾಲೋಕಕ್ಕೆ ಅರಸಿ ಹೋದ ಕನಕದಾಸ ಆ ಲೋಕದಲ್ಲೇ ನಿಂತು ಮತ್ತೆ ವಾಸ್ತವ ಬದುಕನ್ನು, ಅದನ್ನು ಕಿತ್ತು ತಿನ್ನುತ್ತಿರುವ ಪೈಶಾಚಿಕ ಚಾಳಿಯನ್ನು ಹೀಗಳೆಯುವುದು. ಒಂದು ಕಡೆ ಕನಕದಾಸ ವಿಜಯನಗರ ಸಾಮ್ರಾಜ್ಯದ ಅಪಾರ ವೈಭವದ ಅದ್ಭುತ ಶಕ್ತಿ-ಸಂಚಯನದ ಕಾಲದಲ್ಲಿ ಒಬ್ಬ ಪಾಳೇಗಾರನಾಗಿದ್ದನು. ಆ ಬದುಕಿನ ಎಲ್ಲ ಸವಲತ್ತುಗಳನ್ನು ಉಂಡವನು. ಆತ ರಸಿಕ, ಸಾಹಸಿ, ತನ್ನ ಕೆಲಸದಲ್ಲಿ ಶ್ರದ್ದೆ ೧.ಸಾಮಾಜಿಕವಾಗಿ ಕೆಲವು ಕೀರ್ತನೆಗಳ ಕಾರಣಕ್ಕೆ ಪುರಂದರದಾಸನನ್ನು ನೆನಸಿಕೊಳ್ಳಬೇಕು. ಆದರೂ ಅನುಭವ ಮತ್ತು ಅಭಿವ್ಯಕ್ತಿಗಳೆರಡರ ಬೆಳಕಿನಲ್ಲಿ ಇದು ವಿಚಾರಾರ್ಹ ಸಂಗತಿಯೇ | ೨. ಈ ಸವಲತ್ತಿನ ಫಲವಾಗೇ ಮುಂದೆ ಸಾಮಾನ್ಯ ಕೆಳವರ್ಗದವನೊಬ್ಬ ಈ ಮಾನಸಿಕ ಪ್ರಕ್ರಿಯೆಯಿಂದಲೇ ಇವನ ರಚನೆಗಳಿಗೆ ಶಕ್ತಿಬರಲು ಸಾಧ್ಯವಾಗಿರುವುದುಂಟು.