ಪುಟ:Kanakadasa darshana Vol 1 Pages 561-1028.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೭೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ೭೭೯ ಆದರೆ ಕನಕದಾಸ ಯಾವ ಧರ್ಮವನ್ನಾದರೂ ವಸ್ತುನಿಷ್ಠ ದೂರದಲ್ಲಿ ನಿಂತು ನೋಡಬಲ್ಲ. ಸಮಾನವಾಗಿ ಕಾಣಬಲ್ಲ ಹರಿಹರನನ್ನು ಒಂದೇ ರೀತಿಯಲ್ಲಿ ಗೌರವಿಸಬಲ್ಲ. ಇಂಥ ಅಪರೂಪದ ಮುಕ್ತ ವಿಚಾರಮಂಥನ ಆ ಕಾಲದ ಸಾಮಾಜಿಕ ಚಿಂತನೆಯ ಇತಿಹಾಸಕ್ಕೆ ನೆರವಾಗುತ್ತದೆ. ಬದುಕಿನ ಮೂಲನೆಲೆಯನ್ನು ಗುರುತಿಸಲು ಮತ್ತು ಬಲವುಳ್ಳವರ ಕುಟಿಲತೆಯನ್ನು ಹೊರಹಾಕಲು ಕನಕದಾಸ ಮಾಡಿದ ಈ ಬಗೆಯ ಪ್ರಯತ್ನ ಅವನಲ್ಲಿದ್ದ ನಿಷ್ಠುರ ಸಾಮಾಜಿಕ ಪ್ರಜ್ಞೆಯ ನೈಜ ಅಭಿವ್ಯಕ್ತಿ ಹೌದು. ಆದರೂ ತಾನುಂಡ ನೋವು ವಿಷಾದಗಳನ್ನು ಕೇವಲ ಆಕೋಶದ ಮಾತಾಡಿ ತೀರಿಸಿಕೊಳ್ಳದೆ ಅದನ್ನು ಸಾಹಿತ್ಯ ವಾಗಿಸಿ ಆ ಸಾಹಿತ್ಯದ ಮೂಲಕ ಈ ಸಾಮಾಜಿಕ ಜೀವನವನ್ನು ದರ್ಶಿಸಿದ ರೀತಿ ಗಮನಾರ್ಹವಾಗುತ್ತದೆ. ಇವತ್ತಿನ ಎಲ್ಲ ಆಧುನಿಕ ಸವಲತ್ತುಗಳನ್ನು ಬೆಂಬಲವಾಗಿಸಿಕೊಂಡು ಮಾತಾಡುವ ಕೆಳವರ್ಗದವನೊಬ್ಬನಿಗೂ ಇಂಥಾದ್ದೇನೂ ಇಲ್ಲದೆ ಅಂದು ಮಾತಾಡಿದ ಕನಕದಾಸನ ದನಿಗೂ ಇರುವ ಅಂತರವನ್ನು ಆಶಯವನ್ನು ಗಮನಿಸಬೇಕು. ಕೇಶವನೊಲಿದ ಭಕ್ತರಿಗೆ ಕುಲವ್ಯಾವುದು-ಎಂಬಲ್ಲಿನ ಇದರ ಸೋಲನ್ನು ಕಾಣಬಹುದು. ಸಮಾಜದ ಆರೋಗ್ಯವನ್ನು ಬಯಸುವ ಕವಿ, ಭಕ್ತನಾದಾಗ ಆತ್ಮ ನಿರೀಕ್ಷಣೆಯಲ್ಲಿ ಸೀಮಿತವಾಗಿ ಬಿಡುತ್ತಾನೆ. ಪ್ರಾಯಶಃ ಕನಕದಾಸನ ಸಾಮಾಜಿಕ ಸಂದರ್ಭದಲ್ಲಿ ಅವನಲ್ಲಿದ್ದ ಕವಿ ಮತ್ತು ಭಕ್ತ ಇಬ್ಬರನ್ನೂ ಭಿನ್ನ ಮಾಡಿ ನೋಡಲಾಗದಿರುವುದೇ ನಮ್ಮ ಮುಂದಿನ ಮಾನದಂಡಕ್ಕೆ ಸಮಸ್ಯೆ ಆಗಲೂಬಹುದು. ಈ ಕವಿ ಮತ್ತು ಭಕ್ತ ಇಬ್ಬರನ್ನು ಭಿನ್ನ ಮಾಡಿ ನೋಡಿದರೂ ಯಾವುದೊಂದಾದರೂ ಏಕಪಕ್ಷೀಯವಾಗಿ ಬಿಡುವುದುಂಟು. ಇದೇ ಕನಕದಾಸನ ವೈಶಿಷ್ಟ್ಯಪೂರ್ಣವಾದ ಸಾಮರ್ಥ್ಯವಿರಬಹುದು. ಏನೇ ಇರಲಿ, ಕನಕದಾಸ ಬದುಕಿದ ಪರಿಸರ ಮತ್ತು ಆ ಕಾಲದ ಧಾರ್ಮಿಕ ಸೆಳೆತಗಳನ್ನು ಈ ನೆಲಗುಣದ ಇತಿಹಾಸಕ್ಕೆ ಸಮೀಕರಿಸಿ ನೋಡಿದರೆ ಅಂದಿನ ಕನಕದಾಸನಿಂದ ಇಂದು ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲವೇನೋ, ದರಿದ್ರ ಮೌಲ್ಯ ವ್ಯವಸ್ಥೆಯ ಈ ನಾಡಿನಲ್ಲಿ ಹುಟ್ಟು ಪ್ರತಿಭೆಯನ್ನು ರೂಢಿಸಿಕೊಂಡು, ತನ್ನ ಜೀವನದ ಅರ್ಥ ಹುಡುಕಬಯಸಿದ, ತಾನು ನಿಂತ ನೆಲದ ವಿಪನ್ಯಾಸಗಳು ಇಲ್ಲವಾಗಬೇಕೆಂದು ಬಯಸಿದ ಕನಕದಾಸನ ನಿಜ ಬದುಕು, ಜೀವನ ಸಂದೇಶ ಈ ನಾಡಿನ ಕೆಳವರ್ಗದ ಸಾಮಾನ್ಯನೊಬ್ಬನ ಅಸಹಾಯಕತೆ, ತೊಳಲಾಟ, ದುರಂತಗಳೊಳಗೇ ಉಳಿದುಹೋದದ್ದು ನಾವು ಕಾಯ್ದಿಟ್ಟುಕೊಂಡ ಈ ಸಮಾಜ ವ್ಯವಸ್ಥೆಯೇ ಕಾರಣವಿರಬಹುದೆ ? ಹೀಗೆ ವಿಚಾರಗಳನ್ನು ಶೋಧಿಸುತ್ತ ಜೀವನದ ಅರ್ಥ ಹುಡುಕತೊಡಗಿದ ಕನಕದಾಸನ ಜಾನಪದ ಮನಸ್ಸು ಕೊನೆಗೂ ವಾಸ್ತವಕ್ಕೆ ಒತ್ತು ಕೊಡಲಾಗದೆ, ಆಧ್ಯಾತ್ಮಿಕ ಗುಹ್ಯ ರಹಸ್ಯದಿಂದ ಬಿಡಿಸಿಕೊಳ್ಳದಾಯಿತು. “ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು. ಆಸೆ ತರವಲ್ಲ ದಾಸನಾಗೋ | ಭವಪಾಶ ನೀಗೊ ಶರೀರ ತಾನಲ್ಲ ತನ್ನದಲ್ಲ || ಆವಬಲವಿದ್ದರೇನು ದೈವ ಬಲವಿಲ್ಲದವರಿಗೆ -ಹೀಗೆ ವಿರಕ್ತಿಯ ತೊರೆ ಸ್ಥಾಯಿಯಾಗಿ ಹರಿಯುವುದನ್ನು ಕಾಣುತ್ತೇವೆ. ಕಣ್ಣು ಮುಚ್ಚಿಕೊಂಡು ಪರಂಪರೆಗೆ, ಬಂದ ಕರ್ಮಕ್ಕೆ ತಲೆಯೊಡ್ಡುವುದೊಂದೇ ಕಡೆಯ ದಾರಿ ಎಂಬ ಆತ್ಯಂತಿಕ ನಿಲುವಿಗೆ ಬರುವುದನ್ನು ಕಾಣುತ್ತೇವೆ. ಕನಕದಾಸನ ಜಾನಪದ ಮನಸ್ಸಿನ ಈ ಆರ್ತತೆ, ಶೋಧನೆ, ಹಂಬಲಿಕೆಗಳೆಲ್ಲ ಕೊನೆಗೊಮ್ಮೆ ವ್ಯಕ್ತಿನಿಷ್ಠವಾಗಿಬಿಡುತ್ತವೆ. 'ಆತ್ಮನಾವ ಕುಲ ಜೀವನಾವ ಕುಲ' ಎಂದು ಸಾರ್ವತ್ರಿಕವಾದ ಸವಾಲು ಹಾಕಿದವನು ಮುಂದೆ ಕಾಗಿನೆಲೆಯಾದಿ