ಪುಟ:Kanakadasa darshana Vol 1 Pages 561-1028.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೮೨ ಕನಕ ಸಾಹಿತ್ಯ ದರ್ಶನ-೧ ಕಿಂಡಿಯಲ್ಲಿ ನೋಡಿದ ಕವಿತೆಗಳು ೫೮೩ ಗ್ರಂಥಋಣ ಮತ್ತು ಅಡಿಟಿಪ್ಪಣಿಗಳು ಕನಕದಾಸರು ಭಾಷೆಯನ್ನು ಕಲೆಯಾಗಿ ಬಳಸಿದಾಗ ಸಹಜವಾಗಿಯೇ ಇದಕ್ಕೊಂದು ಕ್ರಿಯಾತ್ಮಕ ಅಂಶವು ರೂಪಿತವಾಗಿದೆ. ಕೇಳುವುದಕ್ಕೆ ಅನುಕೂಲವಾಗುವ ಕನಕದಾಸರ ಕವಿತೆಗಳು ಜನತೆಯ ಹೃದಯದಾಳದಲ್ಲಿ ಬೇರುಬಿಟ್ಟಿವೆ. ಇಂದಿಗೂ ಮೌಖಿಕ ಪರಂಪರೆಯಲ್ಲಿ ಅಂಶಸ್ಥವಾಗಿರುವ ಕನಕದಾಸರ ಕವಿತೆಗಳಲ್ಲಿ ಧಾಟಿಯೂ ಪ್ರಧಾನವಾಗಿ ವಿಜೃಂಭಿಸಿದೆ. ಅಂತಿಮವಾಗಿ, ಕನಕದಾಸರು ಕಿಂಡಿಯ ಮೂಲಕವೇ ಜಗತ್ತನ್ನು ನೋಡಿದ್ದಾರೆ. ಹಾಗಾಗಿ, ಕನಕದಾಸರ ಕವಿತೆಗಳಲ್ಲಿ ಜಗತ್ತಿಗೆ ಕೂಡಾ ಕನಕದಾಸರ ದೃಷ್ಟಿಯಿದೆ. ಇದು ಲೌಕಿಕದಿಂದ ಅಲೌಕಿಕದ ಕಡೆಗೆ ಹೋಗುವಂತಹುದು. 1. ರೋಲಾಂಡ್ ಬಾರ್ತನ ವಿಚಾರಗಳ ಮುಖ್ಯ ಕೇಂದ್ರ ಈ ರೀತಿಯಲ್ಲಿದೆ. ವಿವರಗಳಿಗೆ ನೋಡಿ : Terence Hawkes 1985 Structuralism And Semiotics, Methuen & Co. Ltd. p. 106-122. ಇದು ವಸಾಹತುಶಾಹಿ ಅನುಭವದ ಸ್ಥಿತಿಯಲ್ಲಿ ತೀರಾ ಸಹಜವಾಗಿ ಬಂದಿರುವಂಥದ್ದು. ಇಂಗ್ಲೀಷ್ ವಿದ್ಯಾಭ್ಯಾಸದ ಕ್ರಮ ನಮ್ಮ ಒಟ್ಟು ವೈಚಾರಿಕ ಚೌಕಟ್ಟನ್ನು ನಿರ್ದೇಶಿಸಿದೆ. ಆದರೆ, ಅಲ್ಲಲ್ಲಿ ಇದರಿಂದ ಬಿಡುಗಡೆಗೊಳ್ಳುವ ಪ್ರಯತ್ನವೂ ಆಗಿದೆ. ವಸ್ತುನಿಷ್ಠತೆಯೆನ್ನುವುದು ಕೂಡಾ ಓದುಗನ ಓದಿನ ಕ್ರಮವನ್ನು ಅವಲಂಬಿಸಿದೆ. ವಸ್ತುನಿಷ್ಠೆಯ ಬಗೆಗಿನ ನಿಲುವು ಕೂಡಾ ಓದುಗನ ಅಭ್ಯಾಸ, ಆತನ ಅಭಿರುಚಿ ಇತ್ಯಾದಿ ಸಂಗತಿಗಳಿಂದ ರೂಪುಗೊಂಡಿರುತ್ತದೆ. 'ವಸ್ತುನಿಷ್ಠತೆ' ಎನ್ನುವುದು ಈ ಕಾರಣದಿಂದ ಕೃತಿಯಲ್ಲಿಯೇ ಇರುವುದಿಲ್ಲ. ಸೀತಾರಾಮಯ್ಯ, ವಿ. (ಸಂ) 1987 ದಾಸ ಸಾಹಿತ್ಯ (ಕವಿಕಾವ್ಯ ಪರಂಪರೆ : 20) ಐ. ಬಿ. ಎಚ್ ಪ್ರಕಾಶನ, ಗಾಂಧಿನಗರ, ಬೆಂಗಳೂರು-9. ವಿಜಯನಗರದ ಈಚಿನ ಸಾಹಿತ್ಯ-ರಾಮಚಂದ್ರರಾವ್ ಎಸ್ ಕೆ (ಲೇಖನ) ಪು. 86 5. ಅದೇ ಕೆ. ಸಂಪದ್ಧಿರಿರಾವ್ ಅವರ-ದಾಸ ಸಾಹಿತ್ಯದ ಕೊಡುಗೆ (ಲೇಖನ) ಪು. 134, ನಾಗರಾಜಪ್ಪ ಕೆ. ಜಿ. 1985 ಮರುಚಿಂತನೆ ಪ್ರಣತಿ ಪ್ರಕಾಶನ, ತುಮಕೂರು ಪು. 134, ವೆಂಕಟೇಶಮೂರ್ತಿ ಎಚ್. ಎಸ್. 1975, ಕೀರ್ತನಕಾರರು ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು, ಪು. 134, 8. ಕೆ. ಜಿ. ನಾಗರಾಜಪ್ಪ : 1985, ಪು. 98, ಹೆಚ್ಚಿನ ವಿಮರ್ಶಕರು ಈ ಅಂಶವನ್ನು ಗುರುತಿಸಿದ್ದಾರೆ. 10. ಕೆ. ಶ್ರೀಕಂಠಯ್ಯ ಅವರು ಈ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ನೋಡಿ : ಶ್ರೀಕಂಠಯ್ಯ - ಕೆ., 1983, ವಿಜಯನಗರದ ಕಾಲದ ಕನ್ನಡ ಸಾಹಿತ್ಯದಲ್ಲಿ ಜನಜೀವನ ಚಿತ್ರಣ, ಗೀತಾ ಬುಕ್ ಹೌಸ್, ಮೈಸೂರು, ಪು. 199-326. 11. ಚಿಕ್ಕಣ್ಣ ಕಾ. ತಾ (ಸಂ) 1982, ಕನಕ ಕಿರಣ, ಕಾಳಿದಾಸ ಸಾಂಸ್ಕೃತಿಕ ಸಂಘ, ವಿಜಯನಗರ, ಬೆಂಗಳೂರು-40. ಮೋಹನತರಂಗಿಣಿಯ ನೆಲೆಬೆಲೆ (ಲೇ) ಎಂ ಜೈಕುಮಾರ್ ಮತ್ತು ಹರಿದಾಸ ಹೃದಯ-ಡಾ. ಜಿ. ವರದರಾಜರಾವ್ ಅವರ ಕೃತಿಯಿಂದ. 12, 'ನಳಚರಿತ್ರೆಯಲ್ಲಿ ನಿಜಕತೆಯು ಪ್ರಾರಂಭವಾಗುವುದು ಹೀಗೆ :