ಪುಟ:Kanakadasa darshana Vol 1 Pages 561-1028.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ಡಾ. ಎಸ್. ಎಸ್. ಕೋತಿನ ಸಾಹಿತ್ಯಕ ಸಂದರ್ಭದಲ್ಲಿ ಸಾಮಾಜಿಕತೆಯ ಪರಿಕಲನೆಯೇ ಒಂದು ಜಟಿಲವಾದ ಹಾಗೂ ಅತ್ಯಂತ ಸಂಕೀರ್ಣವಾದ ವಿಚಿತ್ರ ಪರಿಕಲ್ಪನೆ. ಸಮಾಜ ಎನ್ನುವುದು ಅಸಂಖ್ಯಾತ ಅಣುಗಳಿಂದ ರೂಪಗೊಂಡ ದ್ರವ ಹಾಗೂ ಘನವಸ್ತುಗಳಿಂದಲೇ ಹಲವಾರು ಸೂಕ್ಷ್ಮ ಹಾಗೂ ಸ್ಕೂಲ ಘಟಕಗಳಿಂದ ವಿಭಿನ್ನ ಸ್ತರದಲ್ಲಿ, ವಿಭಿನ್ನ ರೀತಿಯಲ್ಲಿ ಆಕರಗೊಂಡದ್ದು ; ಅದರಂತೆ ಬಾಹ್ಯಪರಿಸರದಿಂದಾಗಿ ಕಾಲಕಾಲಕ್ಕೆ ವಿವಿಧ ಹಂತಗಳಲ್ಲಿ ರೂಪ ವ್ಯತ್ಯಾಸಗೊಳ್ಳುತ್ತ ಹೋಗುವಂತಹದು. ಒಂದು ಸಮಾಜದಲ್ಲಿಯ ಆ ಎಲ್ಲ ಘಟಕಗಳ ಪರಸ್ಪರ ಕ್ರಿಯೆ-ಪ್ರತಿಕ್ರಿಯೆಗಳ, ಅವುಗಳ ಆಂತರಿಕ ವ್ಯಾಪಾರಗಳ ಹಾಗೂ ಅವುಗಳ ಒಟ್ಟು ಪರಿಣಾಮಗಳ ಸ್ವರೂಪ, ಒಬ್ಬ ಪ್ರಜ್ಞಾವಂತ ವ್ಯಕ್ತಿಗೆ ಒಂದು ಅತ್ಯಂತ ಕುತೂಹಲಕಾರಿಯಾದ ಸ್ವಾರಸ್ಯದ ವಿಷಯವೂ ಹೌದು. ಸಮಷ್ಟಿಯ ಹಿನ್ನೆಲೆಯಲ್ಲಿ ಹೇಳುವದಾದರೆ, ಒಂದು ಸಂಸ್ಕೃತಿಯ ಚೌಕಟ್ಟಿಗೆ ಒಳಪಟ್ಟು ಒಂದು ನಿರ್ದಿಷ್ಟ ಪ್ರದೇಶದ ಕಕ್ಷೆಯಲ್ಲಿ ಬಾಳುವ ಜನಾಂಗ ಒಂದು ಅಖಂಡ ಸಮಾಜವಾಗಿ ಗುರುತಿಸಿಕೊಳ್ಳುತ್ತದೆ ; ಅದರಂತೆ ಜಾತಿ-ಮತಪಂಥ-ಧರ್ಮ ಮತ್ತು ಅವುಗಳ ವಿಶಿಷ್ಟವೆನ್ನಬಹುದಾದ ಸಂಸ್ಕೃತಿಪರಂಪರೆಗಳಿಂದಾಗಿ ಆ ಒಟ್ಟು ಸಮಾಜವೇ ಪ್ರತ್ಯೇಕ ಅಸ್ತಿತ್ವವುಳ್ಳ ವಿಭಿನ್ನ ಘಟಕಗಳಾಗಿಯೂ ಕಾಣಿಸಿಕೊಳ್ಳುತ್ತದೆ. ಹಲವು ಜಾತಿ-ಮತ-ಧರ್ಮ ಇತ್ಯಾದಿಗಳಿಂದ ಕೂಡಿದ ಭಾರತೀಯ ಸಂಸ್ಕೃತಿಯ ಚಾರಿತ್ರಿಕ ಸಂದರ್ಭದಲ್ಲಿಯಂತೂ ಇದು ಇನ್ನೂ ಸ್ಪಷ್ಟವಾಗಿ ಗೋಚರಿಸುವಂತಹದು. ಇಂಥ ಅಖಂಡ ಸಮಾಜದ ಒಂದು ಘಟಕದ ಅಣುವೆನಿಸಿಕೊಳ್ಳುವ ವ್ಯಕ್ತಿ ಆ ಸಮಾಜದ ವಿವಿಧ ಘಟಕಗಳ ಜೊತೆಗೆ ಇಟ್ಟುಕೊಳ್ಳುವ ಭಾವನಾತ್ಮಕ, ವೈಚಾರಿಕ ಮತ್ತು ವ್ಯಾವಹಾರಿಕ ಸಂಬಂಧ, ಕ್ರಿಯೆ-ಪ್ರತಿಕ್ರಿಯೆಗಳ ಒಟ್ಟು ಪರಿಣಾಮ ಆ ವ್ಯಕ್ತಿಯ ಸಾಮಾಜಿಕ ಅನುಭವವಾಗಿ ಮತ್ತು ಆ ಪರಿಸರದಲ್ಲಿಯೇ ರೂಪಗೊಂಡ ಆತನ ವ್ಯಕ್ತಿತ್ವದ ಬಹು ಮುಖ್ಯ ದ್ರವ್ಯವಾಗಿ ಪರಿಣಮಿಸುತ್ತದೆ. ಇದನ್ನೇ ಇನ್ನೂ ಬಿಡಿಸಿ ಹೇಳುವದಾದರೆ, ಒಂದು ನಿರ್ದಿಷ್ಟ ಸಮಾಜದ ಅಂದರೆ ಯಾವುದೇ ಜಾತಿ-ಮತ-ಧರ್ಮಕ್ಕೆ ಸಂಬಂಧಿಸಿದ ವ್ಯಕ್ತಿ ಆ ತನ್ನ ಸಮಾಜದ ಮೂಲಕವೇ ಪಡೆಯುವ ತೀರ ವೈಯಕ್ತಿಕ ಸ್ತರದ ಅನುಭವಗಳು ಒಂದಾದರೆ, ಅದೇ ವ್ಯಕ್ತಿ ತನ್ನ ಮತೀಯ ಸಮಾಜದ ಪ್ರತಿನಿಧಿಯಾಗಿ ಬೇರೊಂದು ಮತದ ಸಮಾಜದೊಂದಿಗೆ ವ್ಯವಹರಿಸುವ ಮತ್ತು ಸ್ಪಂದಿಸುವ ರೀತಿ ; ಪಡೆಯಬಹುದಾದ ಅನುಭವದ ಸ್ವರೂಪ ಇನ್ನೊಂದು ಬಗೆಯದು ; ಇನ್ನು ಅದೇ ವ್ಯಕ್ತಿ ಹಲವು ಘಟಕಗಳ ಸಮುದಾಯವಾದ ತನ್ನ ನಾಡಿನ ಒಟ್ಟು ಸಮಾಜಕ್ಕೆ, ಆ ಸಮಾಜದ ಹಿತಾಸಕ್ತಿಯನ್ನೇ ಕೇಂದ್ರವಾಗಿಟ್ಟುಕೊಂಡು ಅದರ ಸಮಸ್ಯೆಗಳನ್ನು, ಅದರ ಸ್ವರೂಪದ ಆಂತರ್ಯವನ್ನು ಪ್ರಜ್ಞಾಪೂರ್ವಕವಾಗಿ ಶೋಧಿಸುವ ಮತ್ತು ಅದರ ವ್ಯವಸ್ಥೆಗೆ ತನ್ನೆಲ್ಲ ಸಾಧ್ಯತೆಗಳೊಂದಿಗೆ ಪ್ರತಿಕ್ರಿಯಿಸುವ ರೀತಿ ಮತ್ತೂ ಬೇರೆಯಾಗಿರುತ್ತದೆ. ಒಂದು ಸಮಾಜದ ಮೂಲ ಘಟಕವೆನಿಸುವ ಒಬ್ಬ ವ್ಯಕ್ತಿಯ ಸೃಜನಶೀಲಪ್ರತಿಭೆ ಇಂಥ ಹಲವು ಬಗೆಯ ಮೃದುವಾದ ಸ್ಪರ್ಶ ಅಥವಾ ವ್ಯರ ಆಘಾತಗಳಿಂದ ಚೇತರಿಸಿಕೊಂಡು ಕ್ರಿಯಾಶೀಲವಾದಾಗ ಈ ಎಲ್ಲ ನೆಲೆಯ ಸಾಮಾಜಿಕ ಅನುಭವಗಳು ವಿಭಿನ್ನ ರೀತಿಯಲ್ಲಿ ಆಕಾರಗೊಳ್ಳುತ್ತವೆ. ಇಂಥ ಸಾಮಾಜಿಕ ಅನುಭವದ ಅಭಿವ್ಯಕ್ತಿ ಸಾಮಾಜಿಕ ಸಂದರ್ಭ ಹಾಗೂ ಕವಿಯ ವೈಯಕ್ತಿಕ ಮನೋಧರ್ಮದಿಂದಾಗಿ ಭಾವನಾತ್ಮಕ ಇಲ್ಲವೆ ವೈಚಾರಿಕ ಮಟ್ಟದಲ್ಲಿ ಪ್ರತಿಫಲಿಸುತ್ತದೆ. ಆತನ ಅನುಭವ ವೈಯಕ್ತಿಕ ನೆಲೆಯದಾದಾಗ ಅಭಿವ್ಯಕ್ತಿಯಲ್ಲಿ ಭಾವನಾತ್ಮಕತೆ ಪ್ರಧಾನವಾಗುತ್ತದೆ ; ಸಾಮಾಜಿಕ ಹಿತಾಸಕ್ತಿಯ ನೆಲೆಯಲ್ಲಿಯದಾದರೆ ವೈಚಾರಿಕತೆ ಪ್ರಧಾನಗೊಳ್ಳುತ್ತದೆ ; ಆದ್ದರಿಂದ ಸಾಮಾಜಿಕ ಪ್ರಜ್ಞೆಯ ನೆಲೆಗಳನ್ನು ಒಳಗೊಂಡ ಯಾವುದೇ ಒಂದು ಕೃತಿ ಅಂದಿನ ಸಾಮಾಜಿಕ ಪರಿಸರದ ವ್ಯಕ್ತರೂಪವಾದಂತೆ ಆ ಕವಿಯ ವ್ಯಕ್ತಿತ್ವದ ಪ್ರಕಟರೂಪವೂ ಆಗಿರುತ್ತದೆ. ಹೀಗೆಂದ ಮಾತ್ರಕ್ಕೆ ಯಾವುದೇ ಕೃತಿಯ ಕೇಂದ್ರಪ್ರಜ್ಞೆ ಸಾಮಾಜಿಕವೇ ಎಂದಾಗಲಿ, ಆ ಕೃತಿಯಲ್ಲಿ ಪ್ರಕಟವಾದ ಸಾಮಾಜಿಕ ಪ್ರಜ್ಞೆಯೇ ಅದರ ಹೆಗ್ಗಳಿಕೆಯ ಲಕ್ಷಣವೆಂದಾಗಲಿ ಭ್ರಮಿಸಬೇಕಾಗಿಲ್ಲ. ಯಾವುದೇ ಕೃತಿ ಸಾಮಾಜಿಕ ಸಂದರ್ಭದಲ್ಲಿಯೇ ಮೂಡಿಬರುವದು ಅನಿವಾರ್ಯವಾದ್ದರಿಂದ ಸಾಮಾಜಿಕತೆಯ ಸೋಂಕಿಲ್ಲದೆ ಅದು ಹುಟ್ಟುವದೂ ಕಷ್ಟ, ಬದುಕುವದೂ ಕಷ್ಟ ಎಂಬುದು ಗಮನಿಸಬೇಕಾದ ವಿಷಯ. ಹೀಗೆ ಹಲವು ನೆಲೆಗಳಲ್ಲಿ ಚೇತರಿಸಿಕೊಳ್ಳುವ ಕವಿಯ ಸಾಮಾಜಿಕ