ಪುಟ:Kanakadasa darshana Vol 1 Pages 561-1028.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೭೮೩ ಪ್ರಜ್ಞೆ ಜಾತಿ-ಮತ-ಧರ್ಮ-ಪರಂಪರೆ ಸಂಸ್ಕೃತಿ, ಭಾಷೆ, ಜನಜೀವನದ ಸ್ಥಿತಿಗತಿ ಇತ್ಯಾದಿಗಳ ನೆಲೆಯಲ್ಲಿ, ವೈಯಕ್ತಿಕ ಅನುಭವ-ಸಂವೇದನೆಗಳ ನಿರೂಪಣೆಯಾಗಿ ಅಭಿಮಾನದ ಉತ್ಕಟ ವರ್ಣನೆಯಾಗಿ, ವಿಡಂಬನೆಯಾಗಿ, ವಿಮರ್ಶೆಯಾಗಿ, ಉಪದೇಶವಾಗಿ ಹಲವು ಬಗೆಯಲ್ಲಿ ಪ್ರಕಟಗೊಳ್ಳಬಲ್ಲದು. ಹೀಗೆ ಕಾವ್ಯದಲ್ಲಿ ಬಿಚ್ಚಿಕೊಳ್ಳುವ ಕವಿಯ ಸಾಮಾಜಿಕ ಪ್ರಜ್ಞೆಯ ಪದರುಗಳು ಸರೋವರದ ಅಲೆಗಳಂತೆ ಸಂಕೀರ್ಣ ಮತ್ತು ವಿಪುಲ. ಆದ್ದರಿಂದ ಕಾವ್ಯದಲ್ಲಿಯ ಸಾಮಾಜಿಕ ನೆಲೆಗಳ ಅನ್ವೇಷಣೆ ಮತ್ತು ವಿಮರ್ಶೆ ಆ ಕಾವ್ಯದ ಹಿಂದಿರುವ ಸಾಮಾಜಿಕ ಪ್ರೇರಣೆ-ಪ್ರಚೋದನೆಗಳ ಮೂಲಕವಾಗಿ, ಅಂದಿನ ಸಾಮಾಜಿಕ ಪರಿಸರಪರಂಪರೆ ಅವುಗಳಿಗೆ ಸ್ಪಂದಿಸುವ ಕವಿಯ ಮನೋಧರ್ಮ ಇತ್ಯಾದಿಗಳ ಮೂಲಕವಾಗಿ ಮತ್ತು ಕವಿಯ ಅಭಿವ್ಯಕ್ತಿಯ ಹಿಂದಿರುವ ಒತ್ತಡ ಹಾಗೂ ಆತಂಕ ಇತ್ಯಾದಿಗಳ ಮೂಲಕ ನಡೆಯಬೇಕಾಗುತ್ತದೆ. ಈ ಎಲ್ಲ ಹಿನ್ನೆಲೆಗಳಲ್ಲಿ ಕನಕದಾಸರ ಕೃತಿಗಳ, ವಿಶೇಷವಾಗಿ ಕಾವ್ಯಗಳಲ್ಲಿಯ ಸಾಮಾಜಿಕ ನೆಲೆಗಳ ಶೋಧನೆಗೆ ತೊಡಗಿದಾಗ ಅವರೊಬ್ಬರು, ದಾಸ ಸಾಹಿತ್ಯದ ಮಟ್ಟಗಳಂತೂ ಸರಿಯೆ, ಒಟ್ಟು ನಮ್ಮ ಕಾವ್ಯ ಪರಂಪರೆಯಲ್ಲಿಯೇ ವೈಯಕ್ತಿಕ ವೈಶಿಷ್ಟ್ಯಗಳನ್ನು ಉಳಿಸಿಕೊಂಡ ಒಬ್ಬ ಗಮನಾರ್ಹ ಕವಿಯಾಗಿ ನಿಲ್ಲುತ್ತಾರೆ. ಅದುವರೆಗಿನ ಹರಿದಾಸರ ಸೃಜನಶೀಲತೆ ಕೇವಲ ಕೀರ್ತನೆಗಳ ರಚನೆಗೆ ಮಾತ್ರ ಸೀಮಿತವಾಗಿದ್ದ ಸಂದರ್ಭದಲ್ಲಿ ಮತ್ತು ಆ ಎಲ್ಲ ಕೀರ್ತನೆಗಳು ತಮ್ಮ ಏಕತಾನತೆಯಿಂದ ಕಲಾತ್ಮಕತೆ ಮತ್ತು ಲವಲವಿಕೆಯನ್ನು ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ಕೀರ್ತನೆಗಳ ಜೊತೆಗೆ ಕಾವ್ಯಗಳನ್ನೂ ರಚಿಸುವ ಮೂಲಕ ಒಟ್ಟು ದಾಸಸಾಹಿತ್ಯ ಪರಂಪರೆಗೆ ಒಂದು ಮಿಗಿಲಾದ ಘನತೆಯನ್ನು ತಂದುಕೊಟ್ಟ ಅಪೂರ್ವ ಶ್ರೇಯಸ್ಸು ಕನಕದಾಸರದು. ಅಷ್ಟೇ ಏಕೆ, ಬೇರೆ ಬೇರೆ ನೆಲೆಗಳಲ್ಲಿ ಬೇರುಚಾಚಿದ ತಮ್ಮ ಸಾಮಾಜಿಕ ಪ್ರಜ್ಞೆಯ ಮೂಲಕ ನಮ್ಮ ಕನ್ನಡ ಕಾವ್ಯ ಪರಂಪರೆಗೆ ಒಂದು ಘನವಾದ ವೈಶಿಷ್ಟ್ಯವನ್ನು ತಂದು ಕೊಟ್ಟ ಶ್ರೇಯಸ್ಸು ಕೂಡ ಕನಕದಾಸರದು. ಅದರಲ್ಲೂ ಇಡಿ ಕಾವ್ಯದ ವಸ್ತುವನ್ನೇ ಒಂದು ರೂಪಕವನ್ನಾಗಿಸಿ ತಮ್ಮ ಸಾಮಾಜಿಕ ಎಲ್ಲ ಪ್ರಜ್ಞಾವಲಯಗಳನ್ನೂ ಪ್ರಚ್ಛನ್ನಗೊಳಿಸಿಕೊಡುವ ಅವರ ರೀತಿಯಂತೂ ನಮ್ಮ ಕಾವ್ಯ ಪರಂಪರೆಯಲ್ಲಿಯೇ ಅತ್ಯಂತ ಅಪೂರ್ವವಾದ ವೈಶಿಷ್ಟ್ಯ. ಹಾಗೆ ನೋಡಿದರೆ ಯಾವ ಕಾವ್ಯಕ್ಕೂ ಸಾಮಾಜಿಕತೆಯನ್ನು ಸಂಪೂರ್ಣವಾಗಿ ನಿರಾಕರಿಸುವುದು ಸಾಧ್ಯವಿಲ್ಲವೆಂದು ಒಪ್ಪಿಕೊಂಡರೂ, ಸಾಮಾಜಿಕ ಸಂವೇದನೆಗಳನ್ನು ಹೀಗೆ ಕಾವ್ಯದಲ್ಲಿ ಕಲಾತ್ಮಕವಾಗಿ ಗೌಪ್ಯಗೊಳಿಸಿಕೊಡುವ ಕನಕದಾಸರ ಪ್ರತಿಭಾ ತಂತ್ರದಿಂದಾಗಿ ಅವರ ಕಾವ್ಯಗಳು ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳುತ್ತವೆ ಎನ್ನುವದನ್ನು ಅಲ್ಲಗಳೆಯಲಾಗದು. ಪಂಪನಂಥ ಮಾರ್ಗ ಕವಿಗಳ ಲೌಕಿಕ ಕಾವ್ಯಗಳಲ್ಲಿ ಆಶ್ರಯದಾತರನ್ನು ಕಥಾನಾಯಕನಿಗೆ ಸಮೀಕರಿಸಿ ಹೇಳುವಲ್ಲಿ ಒಟ್ಟು ವಸ್ತುವೇ ಒಂದು ರೂಪಕವಾಗಿ ಕೆಲಸಮಾಡುತ್ತದೆಯೆಂದು ಹೇಳಿದರೆ ಈ ಸಂದರ್ಭದಲ್ಲಿ ಅದು ಕೇವಲ ಭ್ರಮೆಯಾಗಿ ಕಾಣಿಸಿಕೊಂಡಿತು. ಮೇಲಾಗಿ ಕನಕದಾಸರ ಕೃತಿಗಳಲ್ಲಿಯಂತೆ ಸಾಮಾಜಿಕತೆಯೇ ಅವುಗಳ ಕೇಂದ್ರಪ್ರಜ್ಜೆಯಾಗಿ ಕೊನೆಯವರೆಗೂ ಉಳಿಯುವದಿಲ್ಲ. ಪಂಪಾದಿ ಕವಿಗಳ ಕಾವ್ಯಗಳಲ್ಲಿ ಈ ಸಾಮಾಜಿಕತೆ ಆಕಸ್ಮಿಕ ; ಆನುಷಂಗಿಕ ; ಅಲ್ಲಿಷ್ಟು-ಇಲ್ಲಿಷ್ಟು ಮಿಂಚಿ ಮರೆಯಾಗುವಂತಹದು. ಜೈನ ಕವಿಗಳ ಪುರಾಣ ಕಾವ್ಯಗಳಲ್ಲಿ ಸಾರ್ವಕಾಲಿಕವೆನ್ನಬಹುದಾದ ಮಾನವನ ಮೂಲಭೂತ ಗುಣ-ಸ್ವಭಾವ, ರಾಗದ್ವೇಷಾದಿಗಳ ನಿರೂಪಣೆ ಮಾತ್ರ ಕಂಡುಬರುತ್ತದೆ ; ಅವೆಲ್ಲ ತಮ್ಮ ಧರ್ಮಪ್ರಚಾರವನ್ನೇ ಮುಖ್ಯ ಗುರಿಯನ್ನಾಗಿ ಮಾಡಿಕೊಂಡವುಗಳು. ಜಿನಸೇನಬ್ರಹ್ಮಶಿವರ ಕೃತಿಗಳಲ್ಲಿಯ ದಟ್ಟವೆನ್ನಬಹುದಾದ ಸಾಮಾಜಿಕತೆ ಕೇವಲ ಪರಮತ ವಿಡಂಬನೆಗೆ ಮಾತ್ರ ಸೀಮಿತ. ತಮ್ಮ ಧರ್ಮದ ಸ್ವರೂಪವನ್ನು ವಿವರಿಸುವ ಪ್ರಮುಖ ಉದ್ದೇಶ ಹೊಂದಿದ ಮುಂದಿನ ವೀರಶೈವ ಮತ್ತು ಬ್ರಾಹ್ಮಣ ಕವಿಗಳ ದೇಸಿಕಾವ್ಯಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ ಪರಿಸರ ಮತ್ತು ಪರಂಪರೆಯೊಂದಿಗೆ ಅಂದಿನ ಜೀವನದ ಸೊಗಸಾದ ಚಿತ್ರಗಳನ್ನು ತಮ್ಮ ಮತಸಂಬಂಧಿಯಾಗಿ ಕೊಡುವಲ್ಲಿಯೇ ತೃಪ್ತಿಪಟ್ಟುಕೊಂಡವುಗಳು ; ಅದರ ಆಚಿನದನ್ನು ಕುರಿತು ವೈಚಾರಿಕ ತಳಹದಿಯ ಮೇಲೆ ಸಾಮಾಜಿಕವಾಗಿ ಹೆಚ್ಚಿನದನ್ನು ಸಾಧಿಸಿಕೊಡುವ ಮಹತ್ವಾಕಾಂಕ್ಷೆ ಅವುಗಳದಲ್ಲ. ಹರಿಹರನಲ್ಲಿ ಮಾತ್ರ ಅಂದಿನ ಸಾಮಾಜಿಕ ವ್ಯವಸ್ಥೆಯದುಷ್ಪರಿಣಾಮಗಳ ವಿರುದ್ದ ನಿಷ್ಠುರ ಪ್ರತಿಕ್ರಿಯೆ, ಒಬ್ಬ ಬೆಂಗುಡಿಗನ ವ್ಯವಸ್ಥೆಯದುಷ್ಪರಿಣಾಮಗಳ ವಿರುದ್ದ ನಿಷ್ಠುರ ಪ್ರತಿಕ್ರಿಯೆ, ಒಬ್ಬ ಬೆಂಗುಡಿಗನ ಆವೇಶವಾಗಿ, ಆಕ್ರೋಶವಾಗಿ ಕೇಳಿಬರುತ್ತದೆ. ಆದರೆ ಅದೆಲ್ಲ ಮತೀಯ ಪರಿಧಿಯಲ್ಲಿಯೇ ರಿಂಗಣಗೈಯುತ್ತದೆ ; ಮೇಲಾಗಿ ಪರಮತೀಯರ ಬಗೆಗಿನ ಆತನ ರೋಷ ನಿಯಂತ್ರಣಗಳನ್ನು ಕಳೆದುಕೊಳ್ಳುತ್ತದೆ. ಅಂದರೆ ಆತನ ಸಾಮಾಜಿಕ ಪ್ರಜ್ಞೆ ಮುಖ್ಯವಾಗಿ ಮತೀಯ ಮೂಲದ್ದು. ಹರಿದಾಸರ ಸಾಮಾಜಿಕ ಪ್ರಜ್ಞೆಯಂತೂ ಜನತೆಯಲ್ಲಿ ಭಕ್ತಿಯ