ಪುಟ:Kanakadasa darshana Vol 1 Pages 561-1028.pdf/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೭೮೫ ಲೋಲುಪತೆಯನ್ನು ತುಂಬುವದರಲ್ಲಿಯೇ ತನ್ನ ಶಕ್ತಿಯ ಸಾರ್ಥಕತೆಯನ್ನು ಅನುಭವಿಸಿತು. ಸಾಮಾಜಿಕವಾಗಿ ಅದರ ಪರ್ಯಾಯ ಪ್ರಯೋಜನ ಏನೇ ಇದ್ದರೂ ಅವರ ಮೂಲ ಪ್ರೇರಣೆ ಸಾಮಾಜಿಕತೆಯಲ್ಲ. ಅವರೆಲ್ಲ ಒಂದು ಸ್ಥಗಿತ ವ್ಯವಸ್ಥೆಗೆ ಸಮರ್ಪಿಸಿಕೊಂಡದ್ದರಿಂದ ಹರಿದಾಸರಿಗೆ ಸಾಮಾಜಿಕ ಪರಿವರ್ತನೆ ಅಗತ್ಯವೆನಿಸಿರಲಿಲ್ಲ. ಆದ್ದರಿಂದ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಅವರು ಮಾಡಿದ್ದು -ಪಿಸಿದು ಹೋದಲ್ಲೆಲ್ಲ ಹೊಲಿಗೆ ಹಾಕುವ, ಹರಿದು ಹೋದಲ್ಲೆಲ್ಲ ತೇಪೆ ಹಾಕುವ ಕೆಲಸವನ್ನು. ಆದ್ದರಿಂದ ಅವರ ಸಾಮಾಜಿಕ ಪ್ರಜ್ಞೆ ಮುಗ್ಧ ಅಜ್ಞಾನಿಗಳಿಗೆ ಮಾಡುವ ಉಪದೇಶದ ಮಟ್ಟಕ್ಕೊ, ಕಿಡಿಗೇಡಿಗಳಿಗೆ ಬೈದು ಬುದ್ಧಿಹೇಳುವ ಮಟ್ಟಕ್ಕೊ, ಇಲ್ಲವೆ ಸಾಮಾಜಿಕವಾಗಿ ಸೌಲಭ್ಯಗಳಿಂದ ವಂಚಿತರಾದ ದೀನರಿಗೆ ಕರ್ಮವಾದವನ್ನು ಮುಂದೆ ಮಾಡಿ ಸಾಂತ್ವನ ಸೂಚಿಸುವ ಮಟ್ಟಕ್ಕೊ ನಿಂತುಬಿಡುತ್ತದೆ. ಒಟ್ಟಿನಲ್ಲಿ ಇಡೀ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಹನ್ನೆರಡನೆಯ ಶತಮಾನದ ವೀರಶೈವ ಶರಣರನ್ನು ಮತ್ತು ಅವರ ಜೀವನ-ಸಿದ್ದಾಂತಹೋರಾಟಗಳಿಂದಲೇ ಪ್ರಚೋದಿತನಾದ ಹರಿಹರನನ್ನುಳಿದರೆ ಬೇರಾವ ಕವಿಗಳಲ್ಲಿಯೂ ವ್ಯಾಪಕವಾದ ಅರ್ಥದಲ್ಲಿ ಸಾಮಾಜಿಕ ನೆಲೆಗಳು ಸ್ಪುರಿಸುವುದಾಗಲಿ, ಸ್ಫೋಟಗೊಳ್ಳುವುದಾಗಲಿ ಕಾಣುವುದು ಕಷ್ಟ. ಮುಖ್ಯವಾಗಿ ಆಗಿನ ಕಾವ್ಯಪರಂಪರೆಯಲ್ಲಿ ಸಾಮಾಜಿಕ ಎನ್ನುವದೇ ಒಂದು ಕಾವ್ಯದ ಪ್ರಮುಖ ಲಕ್ಷಣವೆಂದಾಗಲಿ, ಮುಖ್ಯ ಮೌಲ್ಯಮಾಪನವೆಂದಾಗಲಿ ಆಗಿರಲಿಲ್ಲ. ಆದರೆ ಕನಕದಾಸರ ಕೃತಿಗಳಲ್ಲಿ, ವಿಶೇಷವಾಗಿ ಕಾವ್ಯಗಳಲ್ಲಿ ಸಾಮಾಜಿಕ ಪ್ರಜ್ಞೆಯೆ ಮೂಲಭೂತ ಆಶಯವಾಗುತ್ತದೆ. ಶರಣರನ್ನು ಬಿಟ್ಟರೆ ಬಹುಶಃ ನಮ್ಮ ಯಾವ ಕವಿಗಳೂ ಸಾಮಾಜಿಕವಾಗಿ ಅನುಭವಿಸಿರದ ಪರಿತಾಪವನ್ನು ಅನುಭವಿಸಿಯೂ ಅದರ ಅಭಿವ್ಯಕ್ತಿಯಲ್ಲಿ ಪ್ರಕಟಿಸಿದ ಸಂಯಮತೆಯೇ ಒಂದು ದೊಡ್ಡ ಆಶ್ಚರ್ಯ. ಬಹುಶಃ ಅವರ ಬದುಕಿನ ವಿನ್ಯಾಸ ಹಾಗೂ ಧೋರಣೆಯಲ್ಲಿಯೇ ಅದರ ಕಾರಣವನ್ನು ಗುರುತಿಸಬಹುದು. ಕನಕದಾಸರದು ವೈಭವದಿಂದ ವೈರಾಗ್ಯಕ್ಕೆ ತಿರುಗಿದ ಜೀವನವಾದರೂ ಅದು ಪುರಂದರ ದಾಸರ ಜೀವನದ ಮಾದರಿಯದಲ್ಲ. ಪುರಂದರದಾಸರು ತಮ್ಮ ಬದುಕಿನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ದೈವಲೀಲೆಯ ವಿಚಿತ್ರವ್ಯಾಪಾರಕ್ಕೆ ಪಕ್ಕಾಗಿ ದಾಸರಾದ ಕುಲಜರು; ಕನಕದಾಸರು ಅಧಿಕಾರ-ಐಸಿರಿಗಳ ಮಧ್ಯದಲ್ಲಿಯೇ ಪ್ರಾಪಂಚಿಕ ಪೆಟ್ಟುಗಳನ್ನು ತಿಂದು ದೈವೀಕೃಪೆಯ ಆಹ್ವಾನವನ್ನೂ ಸ್ವೀಕರಿಸಿ ಹರಿದಾಸರಾದ ಕೆಳಜಾತಿಯವರು. ಆದ್ದರಿಂದ ದಾಸಕೂಟವನ್ನು ಅಪ್ಪಿಯೂ ಆ ಸಮಾಜದಲ್ಲಿ ಶೂದ್ರನಾಗಿ ಬದುಕುವುದು ತಪ್ಪಲಿಲ್ಲ. ವ್ಯಾಸರಾಯರಿಂದ ದೀಕ್ಷೆ ದೊರೆಯಲಿ ಬಿಡಲಿ ಮಾನಸಿಕವಾಗಿ ವೈಷ್ಣವ ಮತವನ್ನು ಒಪ್ಪಿಕೊಂಡರೂ ವೈಷ್ಣವ ಸಮಾಜ ಕನಕದಾಸರನ್ನು ಒಪ್ಪಿಕೊಳ್ಳಲಿಲ್ಲ. ಮೂಲತಃ ಪಾಳೆಯಗಾರನಾಗಿ ಸಾಮಾಜಿಕವಾಗಿ ಮೇಲು ವರ್ಗದವರಾಗಿದ್ದ ಕನಕದಾಸರು ಜಾತಿಯಿಂದ ಕೆಳವರ್ಗದವರಾಗಿದ್ದರು. ಪಾಳೆಯಗಾರರಾಗಿದ್ದ ಕನಕದಾಸರಿಗೆ ದೈಹಿಕ ನೋವನ್ನು ಸಹಿಸಿ ಗೊತ್ತಿತ್ತೆ ಹೊರತು, ಕೆಳಜಾತಿಯವರಾಗಿಯೂ, ಅದುವರೆಗೂ ಇಂಥ ಮಾನಸಿಕ ಹಿಂಸೆಯನ್ನು, ಅವಮಾನವನ್ನು ಸಹಿಸಿ ಗೊತ್ತಿರಲಿಲ್ಲ. ಆದರೆ ಈಗ ಹಿಂಸೆ. ಅವಮಾನಗಳ ಒಳನೋವನ್ನು ಇತ್ತ ಮುಚ್ಚಿಕೊಳ್ಳಲೂ ಆಗದ ಅತ್ತ ಬಿಚ್ಚಿಕೊಳ್ಳಲೂ ಆಗದ ಒಂದು ವಿಕ್ಷಿಪ್ತ ಸ್ಥಿತಿಯಲ್ಲಿ ಹೊರಳಾಡಬೇಕಿತ್ತು. ಹನ್ನೆರಡನೆಯ ಶತಮಾನದ ದಲಿತ ಶರಣರಿಗಿದ್ದ ಅಭಿವ್ಯಕ್ತಿಯ ಸ್ವಾತಂತ್ರವೂ, ಸ್ಥಗಿತ ವ್ಯವಸ್ಥೆಗೆ ತಾವಾಗಿಯೇ ಬದ್ದರಾಗಿದ್ದ, ಕನಕದಾಸರಿಗೆ ಸಾಧ್ಯವಿರಲಿಲ್ಲ. ಯಾವದೇ ದಲಿತ ಶರಣರಿಗೆ ತಾವು ಒಪ್ಪಿಕೊಂಡ ಮತದ ಸಮಾಜದಲ್ಲಿಯೇ ತಾವು ಪರಕೀಯ ಪ್ರಜ್ಞೆಯನ್ನು, ಅವಮಾನವನ್ನು ಅನುಭವಿಸಬೇಕಾದ ಇಂಥ ಕೆಟ್ಟ ಪರಿಸ್ಥಿತಿ ಇರಲಿಲ್ಲ. ಶರಣರಂತೆ ಕನಕದಾಸರಿಗೆ ಸುಸಂಘಟಿತ ಸಾಮಾಜಿಕ ಆಂದೋಲನದ ಸಂದರ್ಭದ ಅವಕಾಶವೂ ಇರಲಿಲ್ಲ; ಭಕ್ತಿಚಳುವಳಿಯ ಅಂದಿನ ಸಂದರ್ಭದಲ್ಲಿ ಸಾಮಾಜಿಕ ಆಂದೋಲನಕ್ಕೆ ನಿಲ್ಲುವ ಹೋರಾಟದ ಪ್ರವೃತ್ತಿಯ ಕನಕದಾಸರ ದಾಗಿರಲಿಲ್ಲ. ಆದ್ದರಿಂದ ಪರಿಸರದೊಂದಿಗಿನ ಒಪ್ಪಂದದ ಮೂಲಕ ಸಮಸ್ಯೆಗಳನ್ನು ವೈಯಕ್ತಿಕವಾಗಿ ಎದುರಿಸಬೇಕಾಗಿತ್ತು. ಅವರು ಹರಿದಾಸರಾದದ್ದೂ ಆತ್ರೋದ್ದಾರಕ್ಕಾಗಿಯೇ ಹೊರತು ಹೋರಾಟಕ್ಕಾಗಿರಲಿಲ್ಲ. ಈ ಎಲ್ಲ ಇಕ್ಕಟ್ಟು ಬಿಕ್ಕಟ್ಟುಗಳ ಮಧ್ಯದಲ್ಲಿ ಬದುಕಬೇಕಿದ್ದ ಕನಕದಾಸರು ತಮ್ಮ ಸಾಮಾಜಿಕ ಅನುಭವಗಳ ಅಭಿವ್ಯಕ್ತಿಯಲ್ಲಿ ಒಬ್ಬ ಕವಿಯಾಗಿಯೂ ತುಂಬ ಎಚ್ಚರಿಕೆಯನ್ನು ವಹಿಸಬೇಕಾಗಿತ್ತು. ಇದೇ ಕಾರಣಕ್ಕಾಗಿ ತಮ್ಮ ಅನುಭವಗಳನ್ನು ಪೌರಾಣಿಕ ಕಥೆಗಳ ಅಥವಾ ಆವರಣದ ಮರೆಯಲ್ಲಿ ಮುಚ್ಚಿಕೊಟ್ಟಂತೆ ಕಂಡುಬರುತ್ತದೆ ಅವರ ಕಾವ್ಯಗಳಲ್ಲಿಯ ಸಾಂಕೇತಿಕತೆ ಅರ್ಥಪೂರ್ಣವಾಗಿ ಈ ಜವಾಬ್ದಾರಿಯನ್ನು ನಿರ್ವಹಿಸಿದಂತೆ ಕಂಡುಬರುತ್ತದೆ. 'ರಾಮಧಾನ್ಯಚರಿತೆ'ಯಲ್ಲಿಯ ನರೆದಲೆಗ ದಲಿತವರ್ಗದ, ಶೋಷಿತ ವರ್ಗದ ಪ್ರತೀಕ ಮಾತ್ರವಲ್ಲ, ಮೇಲುವರ್ಗದವರ ಶೂದ್ರನಾಗಿ ಬದುಕಬೇಕಾದ ಸ್ವತಃ ಕನಕದಾಸರ ವ್ಯಕ್ತಿತ್ವದ ಪ್ರತೀಕವೂ ಹೌದು. ಅದರಂತೆ ಆ ಕಾವ್ಯದಲ್ಲಿ