ಪುಟ:Kanakadasa darshana Vol 1 Pages 561-1028.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೭೮೭ ಬರುವ ನೆಲ್ಲು ಕನಕದಾಸರನ್ನು ನಡೆಸಿಕೊಳ್ಳುತ್ತಿದ್ದ ಪ್ರತಿಷ್ಠಿತವರ್ಗದ ಪ್ರತೀಕವಾಗಿ ಒಟ್ಟು ಕಥೆಯೇ ಅವರ ಜೀವನವನ್ನು ಸಂಕೇತಿಸುತ್ತ ಬೆಳವಣಿಗೆಯನ್ನು ಹೊಂದುತ್ತದೆ. ಮೇಲುವರ್ಗದ ನೆಲ್ಲಿನ ಅಮಾನವೀಯ ವರ್ತನೆಯನ್ನು ಎದುರಿಸುವಾಗಲೂ ರಾಗಿ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುವದಿಲ್ಲ. “ಬುಧರು ಜರೆದು ನಿರಾಕರಿಸಿ ಬಿಡಲಂತು ಶೂದ್ರಾನ್ನವಾದೆಯಲಾ” ಎನ್ನುವ ನೆಲ್ಲಿನ ಕುಲದ ಅಹಂಕಾರಕ್ಕೆ “ಸತ್ವಹೀನನು ಬಡವರನು ಕಣ್ಣೆತ್ತಿನೋಡೆ ಧನಾಢರನು ಬೆಂಬತ್ತಿ ನಡೆವ ಉಪೇಕ್ಷೆ ನಿನ್ನದು” (ಪ. ೪೫), “...ನಮ್ಮಲಿ ಸಲ್ಲದೀಪರಿ ಪಕ್ಷಪಾತವದಿಲ್ಲ ಭಾವಿಸಲು ಬಲ್ಲಿದರು ಬಡವರುಗಳೆನ್ನದೆ ಎಲ್ಲರನು ರಕ್ಷಿಸುವೆ ನಿರ್ದಯನಲ್ಲ ನಿನ್ನಂತೆ, ಎಲೆ ಕುಟಿಲಾತ್ಮ ಹೋಗೆಂದ” (ಪ. ೪೮), ಎನ್ನುವ ನರೆದಲೆಗಳ ಪ್ರತಿಕ್ರಿಯೆ ಅತ್ಯಂತ ಸತ್ವಪೂರ್ಣವೆನಿಸುತ್ತದೆ. ಕೊನೆಗೆ ನೆಲ್ಲಿನ ಅಬ್ಬರದ ಅನಾಗರಿಕ ವರ್ತನೆಗೆ ಜರ್ಜರಿತವಾದ ನರೆದಲೆಗ, “ನೋಡಿರೆ ಸಭೆಯವರು ದುರ್ಮತಿಗೇಡಿಯವನಾಡುವದ ನಾವಿನ್ನಾಡಿದರೆ ಹುರುಳಿಲ್ಲ” (೫೦) ಎನ್ನುವಲ್ಲಿ ಅಂದಿನ ಸಮಾಜದ ಕೆಳವರ್ಗದವರ ಅಸಹಾಯಕತೆಯನ್ನು ಮತ್ತು ಅಭಿವ್ಯಕ್ತಿಯ ಆತಂಕವನ್ನೂ ಸೂಚಿಸುವಂತಿದೆ. ಕೊನೆಗೆ ದಲಿತನಾದ ರಾಗಿ ತನ್ನ ಅಂತಃಸತ್ವದಿಂದ ಶ್ರೀರಾಮನ ಕೃಪೆಗೆ ಪಾತ್ರನಾಗಿ 'ರಾಮಧಾನ್ಯ' ಎಂಬ ಬಿರುದು ಪಡೆಯುವದು, ಸೋತು ಮುಖಹೀನವಾಗಿ ನಿಂತ ನೆಲ್ಲನ್ನು ಕುರಿತು ಸಾಂತ್ವನ ಹೇಳುವದು ಕನಕದಾಸರ ಇಂಗಿತವನ್ನು ವ್ಯಂಜಿಸುವಂತಿದೆ. ಕನಕದಾಸರ ಜೀವನಾನುಭವದ ಹಿನ್ನೆಲೆಯಲ್ಲಿ ನೋಡಿದರಂತೂ ಇಡಿ ಕಥಾನಕದ ನೆಯ್ದೆಯಲ್ಲಿ ಅವರ ಆತ್ಮಕಥೆಯ ಎಳೆಗಳೇ ಹಾಸು ಹೊಕ್ಕಾಗಿ ಕಂಡುಬರುತ್ತವೆ. ಹಾಗೆ ನೋಡಿದರೆ ರಾಮಧಾನ್ಯಚರಿತ್ರೆಯ ಕಥಾವಸ್ತು ಅತ್ಯಂತ ಸರಳ, ಜನಪದ ಸಾಹಿತ್ಯದ ಹಿನ್ನೆಲೆಯಲ್ಲಿ ನೋಡಿದರಂತೂ ಸಾಮಾನ್ಯ ; ಒಬ್ಬ ಕೀರ್ತನಕಾರ ತನ್ನ ಕೀರ್ತನೆಯ ಮಧ್ಯದಲ್ಲಿ ಹೇಳಬಹುದಾದ ಒಂದು ಸಾಧಾರಣ ಉಪಕಥೆಯ ಮಾದರಿಯದು. ಆದರೆ ಅದು ಗರ್ಭಿಕರಿಸಿಕೊಂಡ ಕವಿಯ ವೈಯಕ್ತಿಕ ನೆಲೆಯಲ್ಲಿಯ ಸಾಮಾಜಿಕ ಪ್ರಜ್ಞೆಯಿಂದಾಗಿ ಇಂದಿಗೂ ತನ್ನ ವೈಶಿಷ್ಟ್ಯವನ್ನೂ ಅಸ್ತಿತ್ವವನ್ನು ಉಳಿಸಿಕೊಂಡ ಒಂದು ಮೌಲಿಕ ಕೃತಿ. ೧.'ರಾಮಧಾನ್ಯ ಚರಿತ್ರೆ'-ಸಂ : ದೇ. ಜವರೇಗೌಡ (೧೯೬೫) ಪದ್ಯ ೩೭. ಮುಂದೆ ಕಂಸಿನಲ್ಲಿ ಸೂಚಿಸಿದ ಸಂಖ್ಯೆಗಳು ಇದೇ ಕೃತಿಗೆ ಸಂಬಂಧಿಸಿದ ಪದ್ಯಗಳನ್ನು ಸೂಚಿಸುತ್ತವೆ. ೨. ಹೆಚ್ಚಿನ ವಿವರಕ್ಕಾಗಿ ನೋಡಿರಿ : “ಕನಕದಾಸರ ಕಾವ್ಯಗಳಲ್ಲಿ ವರ್ಗಪುಜ್ಜೆ”-ಎಸ್.ಎಸ್. ಕೋತಿನ, ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ೭೩-೨. ನಳಚರಿತೆಯಲ್ಲಿ ಕಾಣಿಸಿಕೊಳ್ಳುವ ಕನಕದಾಸರ ಸಾಮಾಜಿಕ ಪ್ರಜ್ಞೆ ರಾಮಧಾನ್ಯ ಚರಿತ್ರೆಗಿಂತ ಇನ್ನೂ ಹೆಚ್ಚು ಪ್ರಚ್ಛನ್ನವಾದದ್ದು. ಕವಿಯ ವೈಯಕ್ತಿಕ ನೆಲೆಯ ಪರಿಧಿಯನ್ನು ಮೀರಿ ಸಮಾಜದ ಬದುಕಿನ ನೆಲೆಯಲ್ಲಿಯೇ ನಿಂತು ಆ ಸಮಾಜದ ಅನುಭವದ ಅನ್ವೇಷಣೆಗೆ ತೊಡಗುವಂತಹದು. ನಳಚರಿತ್ರೆ ಮೇಲುನೋಟಕ್ಕೆ ಒಂದು ಆದರ್ಶ ದಾಂಪತ್ಯವನ್ನು ಚಿತ್ರಿಸುವ, ಜೂಜಿನ ಕೇಡನ್ನು ಬೋಧಿಸುವ, ಮಾನವ ಬದುಕಿನಲ್ಲಿ ದೈವದ ಪಾತ್ರವನ್ನು ಬಿಂಬಿಸುವ ಮತ್ತು ಬದುಕಿನಲ್ಲಿ ಮಾನವನ ಇತಿ-ಮಿತಿಗಳನ್ನು ತಿಳಿಸಿಕೊಡುವ ಒಂದು ರಮ್ಯ ಕಥೆ, ಆದರೆ ಕನಕದಾಸರ ಬದುಕು ಮತ್ತು ಮಹತ್ವಾಕಾಂಕ್ಷೆಯ ಕಲ್ಪನೆ ಇರುವ ಪ್ರಜ್ಞಾವಂತರಿಗೆ ಸಾಮಾಜಿಕ ವಿಕ್ಷಿಪ್ತ ನೆಲೆಗಳನ್ನು, ವರ್ಗಪ್ರಜ್ಞೆಯ ಒಳನೋಟವನ್ನು ಗುಟ್ಟಾಗಿ ಕಟ್ಟಿಕೊಡುವಂತಿದೆ. ತನ್ನ ಸಮಕಾಲೀನ ಸಮಾಜದಲ್ಲಿಯ ಅಸಮಾನತೆಗೆ ಮತ್ತು ಮೇಲುವರ್ಗದವರಿಂದ ನಡೆಯುತ್ತಿರುವ ಶೀತಲ ಶೋಷಣೆಯ ಕ್ರೂರ ಪರಿಣಾಮಗಳಿಗೆ ಮಾನವೀಯ ಅಂತಃಕರಣದಿಂದ ಸ್ಪಂದಿಸಿದ ಕನಕದಾಸರ ಉದ್ದೇಶ ಆ ಕಥೆಯ ಬಾಸ್ಕೋದ್ದೇಶವನ್ನು ಮೀರಿ ನಿಲ್ಲುವಂತಹದು ಎನಿಸುತ್ತದೆ. ಆದ್ದರಿಂದ ಕನಕದಾಸರು ತಮ್ಮ ಸಾಮಾಜಿಕ ಕಾಳಜಿಗಳನ್ನು ಪ್ರಕಟಿಸುವ ಎಲ್ಲ ಸಾಧ್ಯತೆಗಳನ್ನು ವ್ಯಾಸಭಾರತದ ಈ ನಳೋಪಾಖ್ಯಾನದಲ್ಲಿ ಗುರುತಿಸಿದಂತೆ ಕಂಡುಬರುತ್ತದೆ. ಅದರ ಕಥಾವಸ್ತುವನ್ನೂ ರೂಪಕಗೊಳಿಸಿ ಅದರ ಘಟನೆಸನ್ನಿವೇಶ, ಪಾತ್ರ-ಸಂಭಾಷಣೆ ಇತ್ಯಾದಿಗಳನ್ನು ಅತ್ಯಂತ ಸಾಂಕೇತಿಕವಾಗಿ ಬಳಸಿಕೊಂಡಿದ್ದಾರೆ. ಆ ಮೂಲಕ ಆ ಉಪಾಖ್ಯಾನಕ್ಕೆ ಹೊಸ ಸಾಮಾಜಿಕ ಆಯಾಮವನ್ನು ಒದಗಿಸಿದ್ದಾರೆ. ಈ ಕಾರಣಕ್ಕಾಗಿಯೇ ಮೂಲದ ಎಲ್ಲ ಅಂಶಗಳನ್ನು ಒಂದು ವಿಶಿಷ್ಟ ರೀತಿಯಲ್ಲಿ ಗ್ರಹಿಸಿದಂತೆ, ಒಂದು ವಿಶೇಷ ಅನುಭವದ ಹಿನ್ನೆಲೆಯಲ್ಲಿ ಪರಿಭಾವಿಸಿದಂತೆ ಕಂಡುಬರುತ್ತದೆ. ಕಾವ್ಯದ ಎಲ್ಲ ಪದರುಗಳನ್ನು ಒಂದೊಂದಾಗಿ ಬಿಚ್ಚಿನೋಡಿದಾಗ ಇಂದ್ರಾದಿ ದೇವತೆಗಳು ಯಜವಾನ ವರ್ಗದ ಪ್ರತೀಕವಾಗಿ, ನಳದಮಯಂತಿಯರು ಕೆಳವರ್ಗದ ಪ್ರತೀಕವಾಗಿ ಕಾಣಿಸಿಕೊಳ್ಳುತ್ತಾರೆ, ಸ್ವರ್ಗಲೋಕದ ಇಂದ್ರ ತನ್ನ ಬೆಂಬಲಿಗರನ್ನು ಕಟ್ಟಿಕೊಂಡು ಭೂಲೋಕದ ದಮಯಂತಿಯನ್ನು ಕೂಡಿಕೊಳ್ಳಲು ಹಾಕುವ ಹೊಂಚು, ಹೂಡುವ ತಂತ್ರ ನಡೆಸುವ ಪಿತೂರಿಗಳೆಲ್ಲ ಮೇಲುವರ್ಗದವರು ವಿಷಯಾಸಕ್ತಿಗಾಗಿ ಕೆಳವರ್ಗದವರನ್ನು ನಯವಾಗಿ ಶೋಷಿಸುವ ವಿಭಿನ್ನ ಶೈಲಿಗಳನ್ನೇ