ಪುಟ:Kanakadasa darshana Vol 1 Pages 561-1028.pdf/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೮೮ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಸಾಮಾಜಿಕ ನೆಲೆ ೭ರ್೮ ಧ್ವನಿಪೂರ್ಣವಾಗಿ ಪ್ರದರ್ಶಿಸುವಂತಿವೆ. ಇಂಥ ಉದ್ದೇಶದ ಅಗತ್ಯಕ್ಕಾಗಿಯೇ ಕನಕದಾಸರು, ಮೂಲ ಕಥೆಯಲ್ಲಿ ಅಂಥ ಎದ್ದು ಕಾಣುವ ಯಾವ ವಿಶೇಷ ಬದಲಾವಣೆಗಳನ್ನು ಮಾಡಿಕೊಂಡಿಲ್ಲವಾದರೂ, ಪ್ರಜ್ಞಾಪೂರ್ವಕವಾಗಿಯೇ ಮೂಲದಲ್ಲಿಲ್ಲದ ಕೆಲವು ಅಂಶಗಳನ್ನು ನೈಷಧೀಯ, ನಳ ಚಂಪುಗಳಿಂದ ಬಳಸಿಕೊಂಡಂತಿದೆ. ಇಂದ್ರ ದಮಯಂತಿಯನ್ನು ತನಗೆ ಒಲಿಯುವಂತೆ ಪ್ರೇರೇಪಿಸಲು ಅಪ್ಸರೆಯರನ್ನು ಕಳಿಸುವ ಸನ್ನಿವೇಶ ಇದಕ್ಕೆ ಒಂದು ಉತ್ತಮ ಉದಾಹರಣೆ. ದಮಯಂತಿಯ ಹತ್ತಿರ ಬಂದ ಆ ಸುರಸತಿಯರು “ಸುರರಾಯರಿಗೆ ಸತಿಯಾಗು ಮರ್ತ್ಯದ ರಾಯಸ್ಥಿರ ನರರ ನಚ್ಚದಿರು” ಎಂಬುದನ್ನು ವರ್ಗಭೇದವನ್ನು ಸೂಚಿಸಲೆಂದೇ ಬಳಸಿಕೊಂಡಿರುವದು ಸಷ “ಅನಿಮಿಷಾಧಿಪ ತನಗೆ ದೇವಾಂಗನೆಯರಿರುತಿರೆ ಮನುಜಸತಿ ಪಾವನವೆ ಬರಿದೆ ದುರಾಸೆ ತನಗೇಕೆಂದಳಿಂದುಮುಖಿ” (III-೩) ಎಂಬುದು, ಇಂದ್ರನ ದೂತನಾಗಿ ಬಂದ ನಳ ತನ್ನ ನಿಜರೂಪವನ್ನು ತೋರಿದಾಗಲೂ ಅದನ್ನು ನಂಬಲಾಗದ ದಮಯಂತಿ “ನಾಕನಿಳಯರು ಕುಟಿಲವಿದ್ಯರನೇಕಮಾಯಾವಿದರು, ಧರೆಯೊಳು ಪ್ರಾಕೃತರು ನಾವ್ ನಿಮ್ಮ ನಂಬುವಪರಿಯದೆಂತೆಮಗೆ” ಎಂಬ ಪ್ರತಿಕ್ರಿಯೆ ಕೇವಲ ಕಾವ್ಯದ ರಮ್ಯತೆಗಾಗಿ ಬಂದವುಗಳಾಗಿ ಕಾಣುವದಿಲ್ಲ. ಇಂಥ ವರ್ಗವ್ಯತಾಸ ಮುಂದೆ ಕಲಿಯ ಮಾತುಗಳಿಂದ ಮತ್ತೂ ಖಚಿತಗೊಳ್ಳುವದು. ಹೀಗೆ ಅಪ್ಪರೆಯರು ನರರನ್ನು ಹಗುರಾಗಿ ಕಾಣುವುದು, ದಮಯಂತಿ ದೇವತೆಗಳ ಅಪಮೌಲ್ಯಗಳನ್ನು, ಅನೈತಿಕತೆಯನ್ನು ಎತ್ತಿಹೇಳುವುದು-ಇವೆಲ್ಲ ಸುರರ ಹಾಗೂ ನರರ ಅಂದರೆ ಸಮಾಜದ ವಿಭಿನ್ನ ವರ್ಗಗಳಲ್ಲಿ ನಡೆದ ತಿಕ್ಕಾಟ, ಯಜಮಾನ ವರ್ಗದ ಉಪಟಳವನ್ನು ಕುರಿತ ಸಾಮಾನ್ಯರ ಸಾತ್ವಿಕ ಪ್ರತಿಭಟನೆಯನ್ನು ಕಲ್ಪನೆಗೆ ತರುತ್ತವೆ. ಹಾಗೆಂದೇ ಮೂಲದಲ್ಲಿ ವಿಸ್ತ್ರತವಾಗಿ ಬರುವ ಇಂದ್ರಾದಿಗಳ ವರ್ಣನೆಯನ್ನು ಕನಕದಾಸರು ಉದ್ದೇಶಪೂರ್ವಕವಾಗಿಯೇ ಉಪೇಕ್ಷಿಸಿದ್ದಾರೆ. ಅನಿಮಿತ್ತ ದ್ವೇಷವನ್ನು ಸಾಧಿಸುವ ಕಲಿಯನ್ನು ತಡೆಯಲು ಇಂದ್ರಾದಿಗಳು ಮಾಡುವ ನಳನ ವರ್ಣನೆ ಮೂಲದಲ್ಲಿ ಹೆಚ್ಚು ಪ್ರಾಮಾಣಿಕವೆನಿಸಿದರೆ ಇಲ್ಲಿ ನಯವಂಚಕತೆ, ನುಸುಳಿ ಕೊಳ್ಳುವಿಕೆಯೇ ಮುಂದಾಗಿ ಕಾಣಿಸಿಕೊಳ್ಳುತ್ತದೆ. ಮೂಲದಲ್ಲಿ-'ಸಕಲಗುಣ ಸಂಪನ್ನನಾದ, ಮಹಾಧರ್ಮಿಷ್ಟನಾದ-ಶಾಪ ಕೊಡಲು ಇಚ್ಛಿಸಿದ ಮಾತ್ರದಿಂದಲೇ-ಅಂತಹವನು ಅಗಾಧವಾದ, ಬಹಳ ವಿಶಾಲವಾದ, ಕಠಿಣತಮವಾದ ನರಕದಲ್ಲಿ ಬೀಳುತ್ತಾನೆ” ಎಂದು ಎನ್ನುವಷ್ಟರ ಮಟ್ಟಿಗೆ ಇಂದ್ರಾದಿಗಳ ಪ್ರಾಮಾಣಿಕತೆ ವ್ಯಕ್ತವಾಗುತ್ತದೆ, ಇಲ್ಲಿ “ಲೇಸನಾಡಿದೆ ಕಲಿಪುರುಷ ನಿನಗೀಸು ಪೌರುಷವುಂಟೆ, ನಮಗಿನ್ನಾ ಸರೋರುಹ ಗಂಧಿಯಲಿ ಮನವಿಲ್ಲ, ನಳನೃಪತಿ ಈ ಸಮಸ್ತ ಭೂಪಾಲರಲಿ ಸದ್ದೂಷಣನು, ಶೌರ್ಯೋನ್ನತನು, ಕಮಲಾಸನನಿಗಳವಲ್ಲ ನಿನ್ನಲಿ ಹರಿವುದೇನು” (IV-೭), ಎಂದು ನಗುತ್ತ ಹೇಳುವ ಇಂದ್ರನ ಮಾತುಗಳಲ್ಲಿ ಪ್ರತಿಭಟನೆಗಿಂತ ಪ್ರಚೋದನೆಯೇ ಎದ್ದು ಕಾಣುತ್ತದೆ. ಇನ್ನು ಇಂದ್ರಾದಿಗಳನ್ನು ಕುರಿತು ಕಲಿಪುರುಷ ಆಡುವ “ಅನಿಮಿಷರು ನೀವಧಿಕ ಬಲರಾವನಿತೆಯನು ಕೈಕೊಳ್ಳಲಾರದೆ ಜನಪ ನಳನೃಪಗಿತ್ತು ಬಂದಿರೆ ಹರ ಮಹಾದೇವ” (IV-೭) ಎಂಬ ಮಾತು ಮೂಲದಲ್ಲಿಯ “ದೇವಾನಾಂ ಮಾನುಷಂ ಮಧೈಯತ್ತಾ ಪತಿಮವಿನ್ಗತ | ತತಸಸ್ಯಾಭವೇನ್ಯಾಯಂ ವಿಪುಲಂ ದಣಧಾರಣಂ”- ಎಂಬ ಮೂಲಶ್ಲೋಕದ ಭಾವಾನುವಾದವಾಗಿಯೇ ಬಂದಿದೆ. ಅಂದರೆ ಮೂಲದಲ್ಲಿಯ ಇಂಥ ಸನ್ನಿವೇಶ-ಸಂಭಾಷಣೆಗಳಲ್ಲಿಯೇ ಕನಕದಾಸರು ತಮ್ಮ ಸಾಮಾಜಿಕ ಧೋರಣೆಯನ್ನು ಈಡೇರಿಸಿಕೊಡುವ ಸಾಧ್ಯತೆಯನ್ನು ಗುರುತಿಸಿರಬಹುದು ; ಇಲ್ಲವೆ ತಮ್ಮ ಧೋರಣೆಗೆ ಪ್ರೇರಣೆ ಪಡೆದಿರಬಹುದು. ಅಂತೆಯೇ ಇಡಿ ಕಥೆಯನ್ನೇ ತಮ್ಮ ಸಾಮಾಜಿಕ ವಿಶಿಷ್ಟ ನೆಲೆಯ ಅಭಿವ್ಯಕ್ತಿಗೆ ಅನ್ವಯಿಸಿಕೊಂಡಿದ್ದಾರೆ.

  • ಹೀಗೆ ತಮ್ಮ ಧೋರಣೆಗೆ ಪೋಷಕವಾಗದ ಮೂಲದ ಕೆಲವು ಸನ್ನಿವೇಶಗಳನ್ನು ಮೊಟಕುಗೊಳಿಸುವ ಇಲ್ಲವೆ ನಿರಾಕರಿಸುವ ಕನಕದಾಸರು ತಮ್ಮ ಆಶಯಕ್ಕೆ ಅನುಕೂಲವಾದಾಗಲೆಲ್ಲ ಮೂಲಕ್ಕೆ ಹೆಚ್ಚಿನ ನಿಷ್ಠೆಯನ್ನು ತೋರುತ್ತಾರೆ. ಬೇಕಾದರೆ ಬೇರೆ ಮೂಲಗಳಿಂದ ಉಪಯುಕ್ತ ಅಂಶಗಳನ್ನು

೩. ಹೆಚ್ಚಿನ ವಿವರಣೆಗಾಗಿ ನೋಡಿ : ಅಲ್ಲೇ. ೪. ನಳಚರಿತ್ರೆ : ಸಂ-ದೇ, ಜವರೇಗೌಡ (೧೯೬೫), II-೩೦ ಮುಂದೆ ಕಂಸಿನಲ್ಲಿ ಸೂಚಿಸಿದ ಸಂಖ್ಯೆಗಳು ಇದೇ ಕೃತಿಗೆ ಸಂಬಂಧಿಸಿದ ಪದ್ಯಗಳ ಸಂಖ್ಯೆಯನ್ನೂ ಸೂಚಿಸುತ್ತವೆ. ೫. “ಏವಂ ಗುಣಂ ನಲಂ ಯೋವೈ ಕಾಮಯೇಚ್ಛಪಿತುಂ ಕಲೇ | ಕೃಚ್ಛೇಸ ನರಕೇ ಮಚ್ಚೇದಗಾಧೇ ವಿಮಲೇಹುದೇ ||” * -ಶ್ರೀ ಮನ್ಮಹಾಭಾರತ, ಭಾಗ ೪, ಭಾರತದರ್ಶನ ಪ್ರಕಾಶನ ದ್ವಿ, ಮು ೧೯೭೭, ಅಧ್ಯಾಯ ೫೮, ಪದ್ಯ ೧೨ ; ಪು ೨೨೧೯ ೬. ಅಲ್ಲೆ : ಅಧ್ಯಾ-೫೮, ಪದ್ಯ-೬ ಪುಟ : ೨೨೧೮