ಪುಟ:Kanakadasa darshana Vol 1 Pages 561-1028.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೮೪ ಕನಕ ಸಾಹಿತ್ಯ ದರ್ಶನ-೧ ಕಿಂಡಿಯಲ್ಲಿ ನೋಡಿದ ಕವಿತೆಗಳೂ ೫೮೫ 13. “ಭೂತಳೇಂದ್ರರೊಳಧಿಕ ಬಲ ವಿ ಖ್ಯಾತನರೂ ನಳ ಚಕ್ರವತಿಯು ಭೂತಳವ ಪಾಲಿಸಿದ ತನ್ನ ವಿಮಲ ಚರಿತೆಯನು (೧-೧೮) “ನಳ ಚರಿತ್ರೆಯಲ್ಲಿ ನಿಜಕತೆಯು ಹೀಗೆ ಮುಕ್ತಾಯವಾಗುತ್ತದೆ: “ಅರಸು ಕುಲ ಪಾವನನು ನಳ ಭೂ ವರನು ಸಿಂಹಾಸನದಿ ರಂಜಿಸಿ ಧರೆಯನಾಳಿದ ವರಪುರದ ಚೆನ್ನಿಗನ ಕರುಣದಲಿ” (೯-೬೪) 14. ದಮಯಂತಿಯೂ ಮುನಿಗಳಲ್ಲಿ ಹೇಳುವ ಸನ್ನಿವೇಶದಲ್ಲಿ (೫-೩೬) ವೈಶ್ಯರಲ್ಲಿ ಹೇಳುವ ಸನ್ನಿವೇಶದಲ್ಲಿ (೫-೪೧) (೫-೪೯), ಚೇದಿದೇಶದ ರಾಣಿಯರಲ್ಲಿ ಹೇಳುವ ಸನ್ನಿವೇಶ (೫-೫೬) ಇತ್ಯಾದಿ. 15. ಕೆ. ಜಿ. ನಾಗರಾಜಪ್ಪ ಅವರು ಇದನ್ನು ಭಿನ್ನರೀತಿಯಲ್ಲಿ ಅರ್ಥೈಸುತ್ತಾರೆ. ಅವರ ಪ್ರಕಾರ, ಕನಕದಾಸರು ಮೇಲುವರ್ಗದ ಒಟ್ಟು ಚಿಂತನೆಗಳನ್ನು ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿದ್ದಾರೆ. (ನಾಗರಾಜಪ್ಪ ಕೆ. ಜಿ. 1985, ಮರು ಚಿಂತನೆ, ಪ್ರಣತಿ ಪ್ರಕಾಶನ, ತುಮಕೂರು, ಪು. 114) ಆದರೆ, ಕೆ. ಜಿ. ನಾಗರಾಜಪ್ಪ ಅವರು ಕನಕದಾಸರ ಕೃತಿಗಳನ್ನು ಅರ್ಥಮಾಡಿಕೊಳ್ಳುವಾಗ ಬಳಸಿಕೊಂಡಿರುವ ಒಟ್ಟು ಮಾನದಂಡವು ಶ್ರೀ ಎಂ. ಎಸ್. ಶ್ರೀನಿವಾಸರ 'ಸಂಸ್ಕೃತೀಕರಣ' (Sanskritization)ತತ್ವವನ್ನು ಹೊಂದಿಕೊಂಡಿದ್ದು ; ಈ ಗ್ರಹಿಕೆಯನ್ನೇ ಮತ್ತೆ ಪರಿಶೀಲಿಸಬೇಕಾಗಿದೆ. ಯಾಕೆಂದರೆ ಎಂ. ಎಸ್. ಶ್ರೀನಿವಾಸರು ನಂಬುವ 'ಸಂಸ್ಕೃತೀಕರಣ' ಎಷ್ಟರ ಮಟ್ಟಿಗೆ ಸಮಂಜಸ? ಇನ್ನೊಂದು, ಸಂಸ್ಕೃತಿಕರಣದ ಚರ್ಚೆಯು ಸಮ್ಯಕ್ ಸ್ವರೂಪದ ಮೇಲ್ ಪದರವನ್ನು ಚರ್ಚಿಸುತ್ತದೆ. ಆದರೆ ಅದಕ್ಕೆ ಮೂಲವಾದ ಒಳಸ್ವರೂಪ (interstructure) ಭಿನ್ನವಾಗುತ್ತಾ ಹೋಗುತ್ತದೆ. 16, ವೈಷ್ಣವ ಧರ್ಮವು ನಾಲ್ಕು ಹಂತಗಳಿಂದ ಭಕ್ತಿಯ ತೊಡಗುವಿಕೆಯನ್ನು ನಂಬುತ್ತದೆ.: 1, ಸಾಲೋಕ್ಯ-ದೇವರಿಗೂ ಭಕ್ತರಿಗೂ ಒಂದೇ ಲೋಕದಲ್ಲಿ ಸ್ಥಾನ 2. ಸಾಮೀಪ್ಯ-ದೇವರ ಸಮೀಪ ಇರುವುದು 3. ಸಾಯುಜ್ಯ-ದೇವರನ್ನು ಸೇರುವುದು. 4 ಸಾರೂಪ್ಯ-ದೇವರ ರೂಪವನ್ನೆ ಹೊಂದುವುದು. 17. ವಿವರಗಳಿಗೆ ನೋಡಿ : 1. ಕೆ. ಶ್ರೀಕಂಠಯ್ಯ ಅವರ ವಿಜಯನಗರ ಕಾಲದ ಕನ್ನಡ ಸಾಹಿತ್ಯದಲ್ಲಿ ಜನಜೀವನ ಚಿತ್ರಣ (1983), ಗೀತಾ ಬುಕ್, ಮೈಸೂರು. 2, ಕಪಟರಾಳ ಕೃಷ್ಣರಾವ್ ಅವರ ಕರ್ನಾಟಕ ಸಂಸ್ಕೃತಿಯ ಸಂಶೋಧನೆ 1970 (ಉಷಾಸಾಹಿತ್ಯ ಮಾಲೆ, ಮೈಸೂರು, ಪು. 279) 18. ಈ ಕಾಲಘಟ್ಟದ ಮುಖ್ಯ ಕವಿಯಾದ ಕುಮಾರವ್ಯಾಸನೂ ಕಾವ್ಯವನ್ನೋದಿದರೆ ಪುಣ್ಯಸಿಗುತ್ತದೆಂದು ನಂಬುತ್ತಾನೆ. 19. ಉದಾಹರಣೆಗೆ 'ನಳ ಚರಿತ್ರೆ'ಯಲ್ಲಿ 'ನಳಿನಿಗೆ ಅವನದೇ ಕ್ರಿಯಾ ಬಿಂದುವಿದೆ. ಆದರೆ, ಈ ರೀತಿಯ ತಾತ್ವಿಕತೆಯನ್ನು ಕಾಲದ ಹಿನ್ನೆಲೆಯಲ್ಲಿ ಗ್ರಹಿಸಿದರೆ 'ಕಾಲ'ದ ಒಟ್ಟು ಪರಿಣಾಮವನ್ನು ಇದರಲ್ಲಿ ಕಾಣಬಹುದುದಾಗಿದೆ. 20. Lukacs : Gearge 1971. The Theory of the novel Mit press, Cambridge. 21. ಹನ್ನೆರಡನೆಯ ಶತಮಾನದ ಅನಂತರದ ಮತ್ತು ಹದಿನಾರನೆಯ ಶತಮಾನದ ಮೊದಲಿನ ಕನ್ನಡ ಕಾವ್ಯ 'ಶ್ರಾವ್ಯ' ಮಾಧ್ಯಮವಾಗಿ ರೂಪುಗೊಂಡಿರುವಂಥದ್ದು. ಈವೊತ್ತಿಗೂ ಈ ಕಾಲ ಘಟ್ಟದ ಕಾವ್ಯಗಳಲ್ಲಿ ಹಳ್ಳಿಯಲ್ಲಿ ಹಾಡುವ ಪರಿಕ್ರಮವಿದೆ. ಪೂರ್ವೋಕ್ತ, ಪು. 281, 23. ಕೃಷ್ಣಶರ್ಮ ಬೆಟಗೇರಿ ಮತ್ತು ಹುಚ್ಚುರಾವ ಬೆಂಗೇರಿ (ಸಂ.), 1972, ಕನಕದಾಸರ ಹಾಡುಗಳು, ಸಮಾಜ ಪುಸ್ತಕಾಲಯ, ಧಾರವಾಡ-I, ಪದ್ಯ ಸಂಖ್ಯೆ ೪೪. ಕಿಟ್ಟೆಲ್ ಅವರು ನಿಘಂಟಿನಲ್ಲಿ ಈ ಅರ್ಥಗಳನ್ನು ಕೊಡುತ್ತಾರೆ. (ಮರಿಯಪ್ಪ ಭಟ್ ಎಂ. (1977-ಕಿಟ್ಟೆಲ್ ಕೋಶ (ಸಂ : II), ಮದರಾಸು ವಿವಿ, ಮದರಾಸು, ಪು. 455. 25, ಡೆರಡಾನ ಚರ್ಚೆಯು ಈ ರೀತಿಯಲ್ಲಿ ಸಾಗುತ್ತದೆ. ವಿವರಗಳಿಗೆ ನೋಡಿ : Antony Eastope 1983 Poetry As Discourse. Methuen, London. 26. ಈಚೆಗೆ ಕನ್ನಡ ಜಾನಪದ ಕ್ಷೇತ್ರದಲ್ಲಿ ಸಿದ್ದಾಂತದ ಬಗೆಗೆ ಚರ್ಚೆಯಾಗುತ್ತಿದೆ. ತಾತ್ವಿಕವಾಗಿ ಈ ಸಿದ್ಧಾಂತವು ಅಭಿವ್ಯಕ್ತಿ ಸ್ವರೂಪ ಮತ್ತು ಪ್ರೇಕ್ಷಕರ ಕುರಿತು ಯೋಚಿಸುತ್ತದೆ. 27. ಜವರೇಗೌಡ ದೇ. (ಸಂ) 1988, ಜನಪ್ರಿಯ ಕನಕ ಸಂಪುಟ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳುರು.