ಪುಟ:Kanakadasa darshana Vol 1 Pages 561-1028.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

eo ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೦೭ ಕೆಸರೊಳು ತಾವರೆ ಪುಟ್ಟಲು ಅದ ತಂದು | ಬಿಸಜನಾಭನಿಗರ್ಪಿಸಲಿಲ್ಲವೆ ? ಹಸುವಿನ ಮಾಂಸದೊಳುತ್ತತ್ತಿಕೀರವು || ವಸುಧೆಯೊಳಗೆ ಭೂಸುರರುಣಲಿಲ್ಲವೆ ? ಮೃಗಗಳ ಮೈಯಲ್ಲಿ ಪುಟ್ಟಲು ಕಸ್ತೂರಿ | ತೆಗೆದು ಪೂಸುವರು ದ್ವಿಜರೆಲ್ಲರೂ || -ಇದನ್ನು ಯಾರು ಅಲ್ಲಗಳೆಯಲು ಸಾಧ್ಯ ? ಒಂದು ಅಭಿಪ್ರಾಯದ ಸ್ಪಷ್ಟಿಕರಣಕ್ಕಾಗಿ, ಕನಕ ಪುಂಖಾನುಪುಂಖವಾಗಿ ನಿದರ್ಶನಗಳನ್ನು ಕೊಡಬಲ್ಲ. ಜಾತೀಯತೆಯ ಮೌಡ್ಯದ ಮುಸುಕು ಕಳೆಯಲು ಅವನ ಪ್ರಶ್ನೆ ಹೀಗಿದೆ : ತಾನು ಕೀಳಾದವ ಸರಿ. ಆದರೆ ಮೇಲಾದವರಾರು ? ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ? ನೀತಿ ತಪ್ಪಿದವರೆಲ್ಲ ದೇವ ಬ್ರಾಹ್ಮಣರೆ ಕೃಷ್ಣಾ ? ಭಂಗಿ ಮುಕ್ಕುಗಳೆಲ್ಲ ಲಿಂಗವಂತರಹರೆ ಕೃಷ್ಣಾ ? ವೇಷಧಾರಿಗಳೆಲ್ಲ ಸನ್ಯಾಸಿಗಳಾಗುವರೆ ಕೃಷ್ಣಾ ? ಹೊಟ್ಟೆಗುಡ ಮೃಗಗಳೆಲ್ಲ ಶ್ರೀವೈಷ್ಣವರೆ ಕೃಷ್ಣಾ ? ಶೀಲಕೆಟ್ಟು ಬಾಳುವ ದೈವದ್ರೋಹಿಗಳ ಸಹವಾಸಕ್ಕಿಂತ ಕನಕನಿಗೆ ತ್ರಿಕರಣ ಶುದ್ದಿಯ ಭಕ್ತ ಜನದ ಸೇವೆಯೇ ಲೇಸು : ಶೀಲವರಿತು ಭಕುತಿ ಮಾಳ ಚಂ | ಡಾಲರ ಮನೆಯ ಬಾಗಿಲ ಕಾಯಿಸೆನ್ನ || ವಾಸುದೇವ ಆದಿಕೇಶವರಾಯನ ದಾಸ ದಾಸ ದಾಸದಾಸರ ಮನೆಯ | ಮೀಸಲು ಊಳಿಗವನ್ನು ಮಾಡುವೆನು | ಕನಕನ ವಿಡಂಬನೆಗಳು ಹುಟ್ಟಿಕೊಂಡುದು ಮುಖ್ಯವಾಗಿ ಕುಲದ ಮೇಲುಕೀಳು ಅಳಿಸುವುದಕ್ಕಾಗಿಯೇ ಆಗಿದೆ. ಊರೂರುಗಳಲ್ಲಿ ಸಂಚರಿಸುವಾಗ ಜಾತೀಯತೆ ದೋಷಗಳೇ ಕಣ್ಣಿಗೆ ಬೀಳುತ್ತಿದ್ದವು ಎಂದು ತೋರುತ್ತದೆ. “ಒಂದೆ ಗಗನವನ್ನು ಕಾಣುವ, ಒಂದೆ ನೆಲವನ್ನು ತುಳಿಯುವ, ಒಂದೆ ಧಾನ್ಯವನ್ನು ಉಣ್ಣುವ, ಒಂದೆ ನೀರು ಕುಡಿಯುವ, ಒಂದೆ ಗಾಳಿಯನ್ನುಸಿರಾಡುವ ನರಜಾತಿಯಲ್ಲಿ ವೈಷಮ್ಯ ಬಂದುದು ಹೇಗೆ?? ಎಂಬುದು ಕನಕನನ್ನು ಕಾಡುತ್ತಿದ್ದ ಸಮಸ್ಯೆ, ಕುಲದ ಮೇಲುಕೀಳು ವಿಚಾರ ಬಂದಾಗ ಕೆಣಕಿದಂತಾಗಿ, ಅರಳುಬಡಿದಂತೆ ಪಟಪಟನೆ ಹೇಳಿಬಿಡುವನು : ೧. ಮಂಕುತಿಮ್ಮನ ಕಗ್ಗ - ಡಿ. ವಿ. ಜಿ. ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ ? ಹುಟ್ಟದಾ ಯೋನಿಗಳಿಲ್ಲ | ಮೆಟ್ಟದಾ ಭೂಮಿಗಳಿಲ್ಲ ಅಟ್ಟು ಉಣ್ಣದಾ ವಸ್ತುಗಳಿಲ್ಲವೊ || ಅದಕ್ಕಾಗಿಯೇ 'ಕನಕನನ್ನು ಕೆಣಕಬೇಡ' ಎಂಬ ಮಾತು ರೂಢಿಗೆ ಬಂದಿದೆ. ತಿರುಪತಿಗೆ ಕನಕನು ಬರುವನೆಂದು ಸುದ್ದಿಯಿದ್ದು ಕನಕನು ಬಂದಾಗ ಗುರುತು ಸಿಗದೆ ಅಲ್ಲಿಯ ಮಹಂತನು ಕನಕನೊಡನೆಯೇ “ಕನಕದಾಸರೆಲ್ಲಿ?” ಎಂದು ಪ್ರಶ್ನಿಸಲು, “ಮುಂದೆ ಬರುವವರಿಗೆ ಹಿಂದೆ, ಹಿಂದೆ ಬರುವವರಿಗೆ ಮುಂದೆ” ಇದ್ದಾರೆ ಎಂದಾಗ, “ಇವನಾರೊ ಹುಚ್ಚ !” ಎಂದು “ಯಾತರವನು?” ಎಂದು ಪ್ರಶ್ನಿಸಿದಾಗ, 'ದೇವರ ಎದುರಲ್ಲಿಯೂ-ಭಕ್ತರಲ್ಲಿಯೂ ಭೇದ ಭಾವವೆ !' ಎಂದು ಸಿಡಿದೆದ್ದ ಕನಕ ವ್ಯಂಗ್ಯವಾಗಿಯೇ ಉತ್ತರಿಸಿದ: ಯಾತರವನೆಂದುಸಿರಲಿ | ಜಗ ಸ್ನಾಥ ಮಾಡಿದನೊಂದು ನರರೂಪವಯ್ಯಾ || ಪ || ಇಂದ್ರಿಯ ಸೂತಕ ದುರ್ಗಂಧ ಮಲಮೂತ್ರ | ಬಂದ ಠಾವಿನ ನಿಜಗುರುತನರಿಯೆ | ಬಂದದ್ದು ಬಚ್ಚಲಗುಣಿ | ತಿಂದದ್ದು ಮೊಲೆಮಾಂಸ | ಅಂಧಕ ತನಗಿನ್ಯಾತರ ಕುಲವಯ್ಯಾ || ಒಂಭತ್ತು ರಂಧ್ರದೊಳೊಸರುವ ಹೋಲಸಿನ | ತುಂಬಿ ಹೊರಡುವ ಮಲ ತುಳುಕುತಲಿ | ಇಂಬಿಲ್ಲದ್ದೋಲೆಗೊಂಡ | ಎಂಬೊಠಾವಿಲಿ ಬಂದ | ಡಂಬಕ ತನಗಿನ್ಯಾತರ ಕುಲವಯ್ಯಾ ? | ಕರುಳು ಖಂಡ ನರನಾರುವ ಚರ್ಮರೋ | ಹಿತ ಪಂಜರ ಹುರುಳಿಲ್ಲವೋ | ವರರುಹ ಹೊತ್ತು ತಿರುಗುವಂಥ | ತಿರುಕತನಗಿನ್ಯಾತರ ಕುಲವಯ್ಯಾ ? || ಉಚ್ಚವರ್ಣದವರು ಈ ಎಲ್ಲ ಹೊಲಸಿನಿಂದ ಹೊರತಾಗಿರುವರೆ? ಎಂಬ ಭಾವ.