ಪುಟ:Kanakadasa darshana Vol 1 Pages 561-1028.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೧೪ ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೧೫ ಮತ್ತೊಂದು ದೃಷ್ಟಿಯಿಂದ ರಾಮಧಾನ್ಯಚರಿತ್ರೆ ಕನಕನ ಜೀವನವನ್ನೇ ಪ್ರತಿಬಿಂಬಿಸುತ್ತದೆ. ದೈವಕೃಪೆಗೆ ಪಾತ್ರನಾಗಿ ಅಂತಸ್ಸತ್ವ ಧೈರ್ಯ ಮೇಧಾವಿತನವುಳ್ಳ ಹೊಗಳಿಕೆ ತೆಗಳಿಕೆಗಳಿಗೆ ಮಾರುಹೋಗದ, ಸರಳಜೀವನ, ಉದಾತ್ತ ಧೈಯದ ಛಲವುಳ್ಳ ಕನಕ, ಮೇಲುವರ್ಣ ಎಂಬ ಪ್ರತಿಷ್ಠೆಯ ಜನದಿಂದ ಕಿರುಕುಳ, ಪೂರ್ವಾಗ್ರಹ ಪೀಡೆ ಒದಗಿದರೂ, ಸೈರ್ಯದಿಂದ ತನ್ನ ಧೈಯ ಸಾಧನೆಯಲ್ಲಿ ಕೃತಾರ್ಥನಾಗಿದ್ದಾನೆ. ರಾಗಿಗೆ ಶ್ರೇಷ್ಠರ ಬೆಂಬಲವಿದ್ದಂತೆ, ಕನಕನಿಗೂ ಅರಮನೆ, ಗುರುಮನೆ, ಸಜ್ಜನ ಪಕ್ಷಪಾತಿಗಳ ಬೆಂಬಲವಿತ್ತು, ಸದಾಚಾರದ ಗತಿ, ಧೃತಿ, ಮತಿಗಳಿಂದ ಸಾಧಿಸಿದಲ್ಲಿ ಪ್ರತಿಯೊಬ್ಬರೂ ಗಣ್ಯರಾಗುವರು ಎಂಬಿತ್ಯಾದಿ ಧ್ವನಿಗಳು ರಾಮಧಾನ್ಯಚರಿತ್ರೆಯಿಂದ ಹೊರಹೊಮ್ಮುತ್ತವೆ. ನರೆದಲೆಗ ವೀಹಿಯರ ವಿಡಂಬನೆಯಿಂದ ಕೂಡಿದ ವಾದವೈಖರಿ ಗಮನಿಸಿ, ನಾವು ಬೇಕಾದಂತೆ ಅರ್ಥಮಾಡಿಕೊಳ್ಳಬಹುದು, ಹಿ, ನರೆದಲೆಗನನ್ನು ದೂಷಿಸುತ್ತಾ “ಕೃತಿಯಮರರನ್ನು ಉಪನಯನದಲ್ಲಿ, ಸುವ್ರತ ಸುಭೋಜನದಲ್ಲಿ, ಮಂತ್ರಾಕ್ಷತೆಗಳಲ್ಲಿ, ಶುಭಶೋಭನದಲ್ಲಿ, ಅರಮನೆಯಲ್ಲಿ, ಪ್ರತಿದಿನವೂ ರಂಜಿಸುವ ದೇವರಿಗತಿಶಯದ ನೈವೇದ್ಯದಲ್ಲಿ, ಭಾಗಿ ನಾನು | ಜನಪರಿಗೆ, ಶಿಶುಗಳೀಗೆ, ಬಂಧುಬಾಂಧವರಿಗೆ, ಬ್ರಹ್ಮಸಮಾರಾಧನೆಗೆ, ಭೂಸುರರ ಮನೆಯಲ್ಲಿ ನಡೆಯುವ ಹರಿದಿವಸ ಉಪಾಸನೆಗಳಲ್ಲಿ ಯೋಗ್ಯ ನಾನು !, ಹೊಸ ಮನೆಯ ಪುಣ್ಯಾರ್ಚನೆಗೆ, ಹಸುಮಕ್ಕಳಿಗೆ, ಸೇಸೆಗೆ, ಗರುಡಿಯಲ್ಲಿ ಶಸ್ತ್ರಾಸ್ತ್ರ ಅರ್ಚನೆಗೆ, ಬ್ರಾಹ್ಮಣರ ಹಣೆಯ ಗಂಧಾಕ್ಷತೆಗೆ ಅತ್ಯವಶ್ಯ ನಾನು ! ಲೋಕದಲ್ಲಿ ನನಗಾರು ಸರಿ ! ನೀನೋ... ಬುಧರು ಜರೆದು ನಿರಾಕರಿಸಿದ ಶೂದ್ರಾನ್ನ ! ...ನೀನಾವ ಮಾನ್ಯ !” ಎಂದು ಉಬ್ಬಿ ಅವಹೇಳ ಮಾಡುತ್ತಾನೆ. ಪರಿಮಳದ ಚಂದನದ ತರುವಿಗೆ | ಸರಿಯೆ ಒಣಗಿದ ಕಾಷ್ಠ, ಗೋವದು || ಕರೆದ ಹಾಲಿಗೆ ಕುರಿಯ ಹಾಲಂತರವೆ ಭಾವಿಸಲು || ಪರಮ ಸಾಹಸಿ ವೀರಹನುಮಗೆ || ಮರದ ಮೇಲಣ ಕಪಿಯು ತಾನು ತರವೆ ಫಡ ನೀನೆನಗೆ ಸರಿಯೆ ಭ್ರಷ್ಟತೊಲಗೆಂದ || ಮರಿಗೆ ಹದ್ದಂತರವೆ ಹಂಸೆಗೆ ಬಕನು ಹೋಲುವುದೆ || ಸರಸ ಮರಿ ಕೋಗಿಲೆಗೆ ವಾಯಸ | ನಣಕಿಸುವ ತೆರನಾಯ್ತು ಸಾಕಿ | ಸ್ನರೆದಲೆಗೆ ! ನೀನಾವ ಮಾನ್ಯನು ಕಡೆಗೆ ತೊಲಗೆಂದ || “ಮಾತಿನ ಸಮರ್ಥನೆಗೆ ಉದ್ದುದ್ದ ಸಾದೃಶಗಳ ಮಾಲಿಕೆ ! ವೀಹಿಯ ಆತ್ಮಪ್ರೌಢಿಮೆಯ ಆಡಂಬರ ಎದ್ದು ತೋರುವುದು ಭೋಗಜೀವಿಗಳ ಆಡಂಬರ ಅಹಂಕಾರವನ್ನು” ಕವಿ ಎತ್ತಿ ತೋರಿದ್ದಾನೆ. ನರೆ ದ ಲೆ ಗ ಕನಲಿ ಕ೦ಗಳು ಕಿಡಿಮಸಗಿ, ಖತಿಗೊಂಡು ಸಿಡಿಲಗರ್ಜನೆಯಿಂದ ಮಾರುತ್ತರ ನೀಡುತ್ತಾನೆ : “ಬಡವರನ್ನು ಕಣ್ಣೆತ್ತಿ ನೋಡದ, ಧನಾಡ್ಯರನ್ನು ಬೆಂಬತ್ತುವ, ಬಾಣಂತಿಯರಿಗೆ ಪಥ್ಯಾವಹ, ಹೆಣದ ಬಾಯಿಗೆ ತುತ್ತಾದವ ನೀನು ! ಬಡವಬಲ್ಲಿದರಲ್ಲಿ ಪಕ್ಷಪಾತ ಮಾಡುವ ನಿರ್ದಯಿ ನೀನು ! ಮಳೆಯಿಲ್ಲದೆ ಕ್ಷಾಮಬಂದಾಗ ಪ್ರಾಣಿಗಳನ್ನು ಆದರಿಸಿ ಸಲಹುವವನು ನಾನು ! ಬಡವ ಬಲ್ಲಿದರೆನ್ನದೆ ಎಲ್ಲರನ್ನು ಸಮಾನರನ್ನಾಗಿ ರಕ್ಷಿಸುವವ ನಾನು ! ನಿನ್ನಿಂದಾಗಲಿ ನಿನ್ನ ಬಳಗದಿಂದಾಗಲಿ ಇದು ಸಾಧ್ಯವೆ ?” ಎಂದು ಮಿತ ಭಾಷಿ ನರೆದಲೆಗ. ಮೌನವಾಗುತ್ತಾನೆ. ಬಡವರ ಸರಳತೆ, ಸೌಜನ್ಯ ಸಮತೆಗಳನ್ನು ಕವಿ ತೋರಿಸಿರುತ್ತಾನೆ. ಆಡಬಹುದತಿಶಯವ ನೀ ಕೊಂ | ಡಾಡಿ ಕೊಂಬರೆ ಸಾಕು ಸಜ್ಜನ | ರಾಡಿದರೆ ಪತಿಕರಿಸಿ ಲಜ್ಜೆಗೆ ಸಿರವ ಬಾಗುವರು || ನೋಡಿರೈ ಸಭೆಯವರು ದುರ್ಮತಿ || ಗೇಡಿಯಿವನಾಡುವುದ ನಾವಿ || ೩ಾಡಿದರೆ ಹುರುಳಿಲ್ಲ ಶಿವಶಿವ ಎಂದ ನರೆದಲೆಗೆ || ಅವಿಚಾರಿಗಳ ವರ್ತನೆಗೆ ಪ್ರಾಜ್ಞರನ್ನೆ ಸಾಕ್ಷಿಕೊಟ್ಟು ಕನಕ ಉತ್ತರಿಸುತ್ತಾನೆ. “ಕನಕನ ವಿಡಂಬನೆಯಲ್ಲಿ ಕಹಿಯಿದೆ-ವಿಷವಿಲ್ಲ ; ಮೊನಚಿದೆ-ನೋವಿಲ್ಲ; ಹಟವಿದೆ-ದ್ವೇಷವಿಲ್ಲ ; ಕಾವಿದೆ-ತಾಪವಿಲ್ಲ ; ಕೋಪವಿದೆ-ವೈರವಿಲ್ಲ ; ಚುರುಕಿದೆ-ಉರಿಯಿಲ್ಲ ; ಎಲ್ಲಿಯೂ ಬ್ರಹ್ಮಶಿವ ವೃತ್ತವಿಲಾಸರ, ಮತಾಂಧತೆಯ ದೋಷಲೇಪವಿಲ್ಲ. ಕರ್ತವ್ಯಪ್ರಜ್ಞೆ ಸತ್ಯನಿಷ್ಠೆ ಲೋಕಕಾರುಣ್ಯ ನೈತಿಕ ಶ್ರದ್ಧೆ ಮೇಲಾಗಿ ಸುರನದಿಗೆ ಸರಿಯೆ ಕಾಡೋಳು | ಹರಿವ ಹಳ್ಳದ ನೀರು ಗರುಡನ |