ಪುಟ:Kanakadasa darshana Vol 1 Pages 561-1028.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೧೮ ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ OSOS ಮಕ್ಕಳು ಹಿಂದುಳಿದವರ ಏಳಿಗೆಗಾಗಿ ಶ್ರಮವಹಿಸುವುದಾದರೆ, ಅಂಥವರಲ್ಲಿ ಹೆಚ್ಚಿನ ವಾತ್ಸಲ್ಯವನ್ನಿಡುವಂತೆ, ಸಮಾಜದಲ್ಲಿ ಹಿಂದುಳಿದವರ ಏಳಿಗೆಗಾಗಿ ಶ್ರಮಿಸಿದ ಕನಕನೂ ದೈವಾನುಗ್ರಹಕ್ಕೆ ಪಾತ್ರನಾದವನು. ಸರ್ವಾದರಣೀಯವಾದ ತನ್ನ ಅಮರ ಕೃತಿಗಳಿಂದ ಅವನೂ ಅಮರನು. ಅವನ ನಳಚರಿತ್ರೆಯು ವಿಡಂಬನೆಯಿಂದ ಸಮಾಜವನ್ನು ತಿದ್ದದಿದ್ದರೂ, ಪುಣ್ಯಪ್ರದವಾದ ನೀತಿಯಿಂದ ಕೂಡಿದ್ದು, ಆಪತ್ತಿನಲ್ಲಿ ಧೈರ್ಯ, ನೆಮ್ಮದಿಗಳನ್ನು ಕೊಡುವಂಥದ್ದು. ಮಮ್ಮಟನು ಹೇಳುವ. ಕಾವ್ಯಂ ಯಶಸೇರರ್ಥಕೃತೇ ವ್ಯವಹಾರವಿದೇ ಶಿವೇತರ ಕೃತಯೇ | ಸದ್ಯಃ ಪರನಿರ್ವೃತಯೇ ಕಾಂತಾಸಮ್ಮಿತತಯೋಪದೇಶಯುಜೇ || ಎಂಬ ಮಾತಿನಂತೆ, ಕನಕನ ಕೃತಿಗಳು ಎಂದೆಂದೂ ಅಮರಫಲವನ್ನು ಸಮಾಜಕ್ಕೆ ಕೊಡುವವುಗಳು, ಅವನ ಕೃತಿಗಳು ಜಾತೀಯತೆಯ ಕೆಸರಿಂದ ಉದಿಸಿದ ಕಮಲಗಳು ! ಕನಕನು ಕನ್ನಡ ನುಡಿಯ ಕೀರ್ತಿಧ್ವಜ ! ಸ ] ಸಹಾಯಕ ಗ್ರಂಥಗಳು ೧. ಕನಕನ ಕೃತಿಗಳು- (i) ಮೋಹನ ತರಂಗಿಣಿ, (ii) ನಳಚರಿತ್ರೆ, (iii) ರಾಮಧಾನ್ಯ ಚರಿತ್ರೆ (iv) ಹರಿಭಕ್ತಿಸಾರ, (v) ಕೀರ್ತನೆಗಳು (vi) ಮುಂಡಿಗೆಗಳು. ೨. ಕನ್ನಡ ಸಾಹಿತ್ಯ ಚರಿತ್ರೆ-ರಂ. ಶ್ರೀ. ಮುಗುಳಿ. ಕನ್ನಡ ಸಾಹಿತ್ಯ ಚರಿತ್ರೆಯ ಸಮೀಕ್ಷೆ-ತ. ಸು. ಶಾಮರಾಯರು. ಜನಪ್ರಿಯ ಕನ್ನಡಸಾಹಿತ್ಯಚರಿತ್ರೆ- ತ. ಸು. ಶಾಮರಾಯ,-ಮೇ. ರಾಜೇಶ್ವರಯ್ಯ. ಕಾವ್ಯಾನುಶೀಲನ-ರಾ, ಗೌ. ೬ ಹರಿದಾಸ ಹೃದಯ-ಡಾ: ಜಿ. ವರದರಾಜರಾವ್. ೭. ಕನ್ನಡ ಸಂತರ ಪರಮಾರ್ಥಪಥ-ಅನುವಾದಕ-ಎಂ. ಎಸ್. ದೇಶಪಾಂಡೆ. ೮. ಕನಕದಾಸರ ಭಕ್ತಿಗೀತೆಗಳು-ಬೆಟಗೇರಿ ಕೃಷ್ಣಶರ್ಮ-ಹುಚೂರಾವ್ ಬೆಂಗೇರಿ. ೯. ಕರ್ನಾಟಕದ ಹರಿದಾಸರು-ಎಚ್.ಕೆ. ವೇದವ್ಯಾಸ ಆಚಾರ್ಯ. ೧೦. ಹರಿದಾಸ ಬೋಧೆ-ಅಮೃತಮಹಾದೇವ-ಅಣ್ಣಿಗೇರಿ. ೧೧. ದಾಸರ ಕೀರ್ತನೆಗಳು-(ಸಂಗ್ರಹ)-ಶ್ರೀ ತೆ, ಮಂಜುನಾಥಯ್ಯ. ೧೨. ಶೈಲಿ-ಡಾಃ ಎಸ್.ವಿ. ರಂಗಣ್ಣ. ೧೩. ಜೀವನ ಸೌಂದರ್ಯ ಮತ್ತು ಸಾಹಿತ್ಯ-ಡಿ. ವಿ. ಜಿ. ೧೪. ಶ್ರೀ ಕನಕದಾಸರ ಹಾಡುಗಳು- ಶ್ರೀ ಕೃಷ್ಣಶರ್ಮ ಬೆಟಗೇರಿ. ಶ್ರೀ ಹುಚೂರಾವ್ ಬೆಂಗೇರಿ. ಸಿರಿಗನ್ನಡಂ ಗೆಲ್ಗೆ ! ಬಾಳೆ !