ಪುಟ:Kanakadasa darshana Vol 1 Pages 561-1028.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೨೮ ಕನಕ ಸಾಹಿತ್ಯ ದರ್ಶನ-೧ ಕನಕಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ೮೨೯ ಬಹುಬಾರಿ ಅನ್ನಿಸಿದರೂ ಸೌಂದರ್ಯವನ್ನು ಗುರುತಿಸುವ ಕನಕದಾಸನ ರಸಿಕತೆ ಮತ್ತು ಧರಣೆ ಮೆಚ್ಚುಗೆಯಾಗುತ್ತದೆ. ಕನಕ ದಾಸರು ಸೌಂದರ್ಯಾರಾಧಕನಾಗಿದ್ದ ಕಾರಣದಿಂದಲೇ ಮನಮೋಹಕವಾದ, ನವೋನವೀನವಾದ ಹೆಣ್ಣಿನ ವರ್ಣನೆ ದೊರೆಯುವಂತಾಯಿತು ಎಂಬುದಂತೂ ಸತ್ಯ. “ವ್ಯರ್ಥವಾಗಿ ಬ್ರಹ್ಮನ ಒಂದು ಕೋಟಿವರುಷಗಳವರೆಗೆ ಬದುಕಿದ್ದು ಸತ್ತರೇನು ? ಈ ಸುರುಳಿಗೂದಲ ಚೆಲುವೆಯ ತೋಳತೆಕ್ಕೆಯಲ್ಲಿ ಒಂದು ಗಳಿಗೆ ಬಾಳಿದರೆ ಸಾಕು ಮುಕ್ತಿ ದೊರೆಯುವುದು' ಎಂದು ನುಡಿದ ಅನಿರುದ್ಧನ ದನಿಯ ಜೊತೆ ಕನಕದಾಸನೂ ಧ್ವನಿಗೂಡಿಸಿರುವಂತೆ ತೋರುತ್ತದೆ. ಮೋಹನತರಂಗಿಣಿಯ ಸ್ತ್ರೀವರ್ಣನಾ ಭೋರ್ಗರೆತಕ್ಕೆ ಪ್ರತಿಯಾಗಿ “ನಳಚರಿತ್ರೆ' ಅತ್ಯಂತ ಸರಳ ಕಾವ್ಯ, ಇಲ್ಲಿ ಕಥಾ ನಿರೂಪಣೆಯಷ್ಟೆ ಕವಿಯ ಮುಖ್ಯ ಉದ್ದೇಶ, ಇಲ್ಲಿ ಬರುವ ಮುಖ್ಯ ಪಾತ್ರಗಳು ನಳ, ದಮಯಂತಿ ಇವೆರಡೇ...ಇದು ಪ್ರೇಮಕಥೆಯಾದರೂ ಶೃಂಗಾರಪ್ರಧಾನವಾದ ಕಾವ್ಯವಲ್ಲ, ದಮಯಂತಿಯ ಸೌಂದರ್ಯ ವರ್ಣನೆಗೆ ಇಲ್ಲಿ ಬೇಕಾದಷ್ಟು ಅವಕಾಶವಿದ್ದರೂ ಕವಿಗೆ ಅದು ಮುಖ್ಯವಲ್ಲ. ಪ್ರತಿಯಾಗಿ ಮೆಚ್ಚಿ ಮದುವೆಯಾದ ಪತಿಯಿಂದ ಅಗಲಿ ದೂರವಾದರೂ ಪುನಃ ಅವನನ್ನು ಪಡೆಯುವ ತನಕ ದಮಯಂತಿಯು ಅನುಭವಿಸುವ ದುಃಖ, ಕೋಟಲೆ ಹಾಗೂ ಆದರ್ಶ ಪ್ರೇಮವನ್ನು ಚಿತ್ರಿಸುವುದು ಕವಿಯ ಗುರಿ, ಹೀಗಾಗಿ ಇಲ್ಲಿ ದಮಯಂತಿಯ ಗುಣ, ಆದರ್ಶ, ಶೀಲಗಳ ಚಿತ್ರಣಕ್ಕೆ ಕೊಟ್ಟಷ್ಟು ಮಹತ್ವವನ್ನು ಕವಿ ಅವಳ ಬಾಹ್ಯ ಸೌಂದರ್ಯಕ್ಕೆ ಕೊಟ್ಟಿಲ್ಲ ದಮಯಂತಿಯ ವ್ಯಕ್ತಿತ್ವವನ್ನು ವರ್ಣಿಸುವ ಈ ಪದ್ಯವನ್ನು ನೋಡಬಹುದು; ಗುಣದೊಳಗೆ ಶೀಲದಲ್ಲಿ ಮಾತಿನ ಭಣಿತೆಯಲಿ ಗಾಂಭೀರದಲಿ ವಿತ ರಣದಲನುಪಮ ವಿದ್ಯೆಯಲಿ ಗುರುದೇವಭಕ್ತಿಯಲಿ ಪ್ರಣುತಿಸಲು ಶರ್ವಾಣಿ ರತಿಯರಿ ಗೆಣೆಯೆನಿಪ ಸುಂದರಿಗೆ ಮಿಕ್ಕಿನ ಬಣಗು ಸತಿಯರು ಸರಿಯೆ ಲೋಕದೊಳೆಂದನಾ ಮುನಿಪ ನಳನನ್ನೆ ಮದುವೆಯಾಗಬೇಕೆಂದು ಸಂಕಲ್ಪ ತಾಳಿದ ದಮಯಂತಿಯನ್ನು ದೇವಾಂಗನೆಯರು ಬಂದು ದೇವೇಂದ್ರನನ್ನು ವರಿಸುವಂತೆ ನಾನಾ ರೀತಿಯಲ್ಲಿ ಓಲೈಸಿದಾಗ “ಚಿತ್ತವನಗೊಬ್ಬನಲಿ ಸಿಲುಕಿತು ಮರಳಿಪೊಡೆ ಕಮಲಾಕ್ಷಗಳವಲ್ಲ” ಎಂದು ತನ್ನ ನಿರ್ಧಾರಕ್ಕೆ ಬದ್ಧವಾಗಿರುವಲ್ಲಿ ಅವಳ ದೃಢ ನಿಲುವು ವ್ಯಕ್ತವಾಗುತ್ತದೆ-ಎಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಕಂಗೆಡದಿರುವುದು ದಮಯಂತಿಯ ಗುಣ, ಸ್ವಯಂವರ ಪ್ರಸಂಗದಲ್ಲಿ ದೇವೇಂದ್ರ, ಯಮ, ವರುಣ, ವಾಯುಗಳು ನಳನಂತೇ ಕಾಣಿಸಿಕೊಂಡಾಗ ಕಂಗೆಡದೆ ಮಂದಿರಕ್ಕೆ ಹೋಗಿ ಶಾರದೆಯನ್ನು ಸ್ತುತಿಸಿ ನಿಜವಾದ ನಳನನ್ನು ಕಂಡುಹಿಡಿಯುವ ಬಗೆಯನ್ನು ತಿಳಿದುಕೊಳ್ಳುತ್ತಾಳೆ. ನಳನು ಜೂಜಿನಲ್ಲಿ ಸೋತಾಗ ಆತನನ್ನು ಸ್ವಲ್ಪವೂ ದೂಷಿಸುವುದಿಲ್ಲ. ನಳನ ಸದ್ಗುಣಗಳನ್ನು ಅವಳು ಸಂಪೂರ್ಣ ಅರಿತವಳು. ಆದ್ದರಿಂದಲೇ 'ಇದೆಲ್ಲವೂ ದೈವದ ಕರುಣೆ ತಪ್ಪಿದ ಪರಿಣಾಮ' ಎಂದಷ್ಟೆ ಹಲುಬುತ್ತಾಳೆ. ನಳನೊಂದಿಗೆ ಸಂತೋಷದಿಂದಲೇ ಕಾಡಿಗೆ ಹೊರಟ ದಮಯಂತಿಯ ಗುಣನಡತೆಗಳನ್ನು ಕವಿ ಹೀಗೆ ಪ್ರಶಂಸಿಸುತ್ತಾನೆ !... ಏನನೆಂಬೆನು ಜೀಯ ಲೋಕದ ಮಾನಿನಿಯೆ ದಮಯಂತಿ ಸತ್ಯ ಜ್ಞಾನಿಯಲ್ಲಾ ಸತಿಯರಿಗೆ ಗುರು ಪತಿವ್ರತಾಗುಣದಿ ಲಲಿತಹೇಮದ ತೂಗುಮಂಚದಿ ಹೊಳೆವ, ಮೇಲ್ವಾಸಿನಲಿ ಮಲಗುವ ಲಲನೆ ಬೆಂಕಿಯಲ್ಲಿ ಬಿದ್ದ ಬಾಳೆಯಂತೆ ಕಷ್ಟದಲಿ ಬೇಯುವುದನ್ನು ಕಂಡು ನಳ ಮರುಗಿದಾಗ-'ಮರುಗಲಿನ್ನೇಕರಸ ಬಿಡು ವಿಧಿ ಬರೆದ ಬರಹವ ತಪ್ಪಿಸಲು ಹರಿಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು.....' ಎಂದು ಧೈರ್ಯ ಹೇಳುತ್ತಾಳೆ. ತಂದೆಯ ಮನೆಗೆ ಹೋಗಿ ಸುಖವಾಗಿರುವಂತೆ ನಳನು ತಿಳಿಸಿದಾಗ ಅವಳು ಹೇಳುವ ಮಾತು ಅವಳ ಪತಿಪ್ರೇಮಕ್ಕೆ ಹಿಡಿದ ಕನ್ನಡಿ: ನೆಳಲು ತನುವಿನ ಬಳಿಯೊಳಲ್ಲದೆ ಚಲಿಸುವುದೆ ತಾ ಬೇರೆ ನಿಮ್ಮಡಿ ನಳಿನದಲಿ ಸುಖದುಃಖವಲ್ಲದೆ ಬೇರೆ ಗತಿಯುಂಟೆ ಹಳುವವೇ ? ನೆಳಲಿನಲಿ ನಾನಿರುವೆನಲ್ಲದೆ ನಿಳಯವೇ ನನಗಡವಿ.... ಚೇದಿ ನೃಪನರಸಿಯ ಸೇವೆಗೆ ನಿಂತಾಗಲೂ ದಮಯಂತಿ ತಾನು ಅರಸುಕುಲದವಳೆಂದು ಬೀಗದೆ ನಮ್ಮಳಾಗಿ ಇರಬಯಸುತ್ತಾಳೆ ; ದಮಯಂತಿಯ ಗುಣಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವ ಅಂಶವೆಂದರೆ