ಪುಟ:Kanakadasa darshana Vol 1 Pages 561-1028.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ೮೩೧ ಆಕೆಯ ಕಾರ್ಯತತ್ಪರತೆ, ನಳನನ್ನು ಪತ್ತೆಹಚ್ಚುವುದಕ್ಕಾಗಿ ಅವಳು ಏರ್ಪಡಿಸುವ ಪುನಃಸ್ವಯಂವರ, ವಿರೂಪಗೊಂಡಿದ್ದ ವ್ಯಕ್ತಿ ನಳನೇ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಮಾಡುವ ಉಪಾಯಗಳು.... ಇಲ್ಲೆಲ್ಲ ದಮಯಂತಿಯ ಕಾರ್ಯಶೀಲತೆ ಬಹಳ ಚೆನ್ನಾಗಿ ವ್ಯಕ್ತವಾಗಿದೆ. ಕಾವ್ಯದ ಹೆಸರು ನಳಚರಿತ್ರೆಯೇ ಆದರೂ ಇಡೀ ಕಾವ್ಯದಲ್ಲಿ ಕಾರ್ಯಶೀಲೆಯಾಗಿರುವ ದಮಯಂತಿಯ ಪಾತ್ರವೇ ಹೆಚ್ಚು ಪರಿಣಾಮಕಾರಿಯಾಗಿದೆ. ಮೋಹನ ತರಂಗಿಣಿಯ ನಂತರ ನಳಚರಿತ್ರೆಯನ್ನು ಗಮನಿಸುವಾಗ ಇಷ್ಟೊಂದು ಸ೦ಯಮ ಕನಕನಿಗೆ ಹೇಗೆ ಸಾಧ್ಯವಾಯಿತು ಎಂದು ವಿಸ್ಮಯವಾಗುತ್ತದೆ. ಕನಕನು ದಾಸನಾಗಿ ಪರಿವರ್ತನೆ ಹೊಂದಿ, ದಾಸಜೀವನದಲ್ಲಿ ಸಾಕಷ್ಟು ಕಾಲ ಪಳಗಿದ ಮೇಲೆ ಈ ಕೃತಿ ರಚನೆಯಾಗಿರಬಹುದು ಎಂಬ ಹೇಳಿಕೆ ಹೌದೆನಿಸುತ್ತದೆ, ಕನಕದಾಸನ ವೈಯಕ್ತಿಕ ಜೀವನದಲ್ಲಿ ಸಂಭವಿಸಿದ ಆತ್ಮೀಯ ಬಂಧುಗಳ ವಿಯೋಗವೂ ಈ ಪರಿವರ್ತನೆಗೆ ಕಾರಣವಾಗಿರಬಹುದು. ಒಟ್ಟಿನಲ್ಲಿ ವನಿತೆಯರೆಂದರೆ 'ಕೊಬ್ಬಿದ ಕುಚಗಳ'ರಮಣಿಯರಷ್ಟೆ ಎಂಬ ಭಾವ ಈ ಕಾವ್ಯದಲ್ಲಿ ಬದಲಾಗಿ ವನಿತೆ ಕಷ್ಟನಷ್ಟಗಳನ್ನು ಧೈರ್ಯದಿಂದ ಎದುರಿಸಿ, ಎರಡು ತೊಡರುಗಳನ್ನು ಪರಿಹರಿಸಿಕೊಳ್ಳುವ ಕ್ರಿಯಾಶೀಲೆಯೂ ಆಗಿರುತ್ತಾಳೆ ಎಂಬುದನ್ನು ಕನಕ ಗ್ರಹಿಸಿರುವಂತೆ ತೋರುತ್ತದೆ, ಕೀರ್ತನೆಗಳನ್ನು ರಚಿಸುವ ಕಾಲಕ್ಕೆ ಕನಕದಾಸ ಭವಬಂಧನಗಳ ವ್ಯಾಮೋಹವನ್ನು ಸಾಕಷ್ಟು ಕಳಚಿಕೊಂಡಿರಬೇಕು. ಆದ್ದರಿಂದಲೇ ಹೆಣ್ಣಿನ ಬಗ್ಗೆ ಒಂದು ನಿರ್ಲಿಪ್ತ ಭಾವನೆ ಬೆಳೆದಿರುವುದನ್ನು ಕನಕನ ಕೀರ್ತನೆಗಳಲ್ಲಿ ಗುರುತಿಸಬಹುದು. ಮೋಹನ ತರಂಗಿಣಿಯಲ್ಲಿ ಔಚಿತ್ಯ ಅನೌಚಿತ್ಯಗಳ ಪರಿವೆ ಇಲ್ಲದೆ ಹೆಣ್ಣಿನ ಅಂಗಾಂಗಗಳ ವರ್ಣನೆಯನ್ನು ಬಳಸುತ್ತಿದ್ದ ಕವಿ ಕೀರ್ತನೆಗಳಲ್ಲಿ ಹೆಣ್ಣನ್ನೇ ವಣಿಸುವಾಗಲೂ ಆಕೆಯ ಅಂಗಾಂಗಗಳ ವರ್ಣನೆ ಮಾಡಹೋಗುವುದಿಲ್ಲ. ಸರಸ್ವತಿಯ ವರ್ಣನೆ ಮಾಡುವ ಕವಿ ಮುಗ್ಧಮಗುವಿನಂತೆ ಸ್ತ್ರೀವರ್ಣನೆ ಮಾಡುತ್ತಾನೆ. ಇಷ್ಟಾಗಿಯೂ ಕವಿ ತಾನು ಸಂಪೂರ್ಣ ವಿರಕ್ತನೆಂದು ಸುಳ್ಳು ಸುಳ್ಳೇ ಹೇಳಿಕೊಳ್ಳುವುದಿಲ್ಲ. ಹೆಣ್ಣಿನ ರೂಪ ಸೌಂದರ್ಯಗಳು ಈಗಲೂ ತನ್ನನ್ನು ಆಕರ್ಷಿಸುತ್ತವೆ ಎಂಬ ಸತ್ಯವನ್ನು ವ್ಯಕ್ತಪಡಿಸುತ್ತ ಆ ಭಗವಂತನ ಲೀಲೆಗೆ ಅದನ್ನು ಆರೋಪಿಸುತ್ತಾನೆ. ತನು ನಿನ್ನದು... ಎಂಬ ಕೀರ್ತನೆಯಲ್ಲಿ 'ನವ ಮೋಹನಾಂಗೀರ ರೂಪವ ಕಣ್ಣಲಿ ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯಾ' ಎನ್ನುತ್ತಾನೆ. ಹೆಣ್ಣಿನ ಆಕರ್ಷಣೆಯನ್ನು ತಪ್ಪಿಸಿಕೊಳ್ಳುವುದು ಕಷ್ಟ ಎಂಬ ಅನಿಸಿಕೆ ಅನೇಕ ಕೀರ್ತನೆಗಳಲ್ಲಿ ಪ್ರಸ್ತಾವಿತವಾಗಿದೆ. ಈ ರೀತಿ ಆಗದಂತೆ ಮಾಡು ಎಂದು ದೇವರಲ್ಲಿ ಮೊರೆ ಹೋಗುತ್ತಾನೆ ಕನಕ ! ' ದುರ್ಜನರ ಸಂಗ ಎಂದಿಗೊಲ್ಲೆನು ಹರಿಯೆ' ಎಂಬ ಕೀರ್ತನೆಯಲ್ಲಿ 'ಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗ ರಂಭ ಸ್ತ್ರೀಯರ ನೋಡಿ ಮೋಹಿಪನ ಸಂಗ ಬೇಡ' ಎನ್ನುತ್ತಾನೆ ಹರಿಭಕ್ತಿಯಲ್ಲಿ ಸಂಪೂರ್ಣವಾಗಿ ಲೀನವಾದ ಮನಸ್ಸಿಗೆ ಹೆಣ್ಣು ಅರುಚಿಕರ ವಸ್ತುವಾಗಿದ್ದಾಳೆ ಎಂಬುದನ್ನು ಅನೇಕ ಕೀರ್ತನೆಗಳಲ್ಲಿ ಪ್ರಸ್ತಾವಿಸಿದ್ದಾನೆ. “ಕೇಶವನೊಲುಮೆಯು ಆಗುವ ತನಕ' ಎಂಬ ಕೀರ್ತನೆಯಲ್ಲಿ 'ಅಂಗಜ ವಿಷಯಗಳನ್ನು ತೊರೆದಾತಗೆ ಅಂಗನೆಯರ ಸುಖ ಸೊಗಸೀತೆ, ಸುಖದುಃಖಗಳು ಹಿಂಗಿದ ಮನುಜಗೆ ಶೃಂಗಾರದ ಬಗೆ ಸೊಗಸೀತೆ' ಎನ್ನುತ್ತಾನೆ. ಭವಪ್ರಪಂಚದ ಆಕರ್ಷಣೆಗಳಲ್ಲಿ ರುಚಿ ಕಳೆದುಕೊಂಡ ಕನಕ ಇಷ್ಟುದಿನ ಜೀವನವನ್ನು ವ್ಯರ್ಥವಾಗಿ ಕಳೆದೆ ಎಂದು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿದ್ದಾನೆ. 'ಏನು ಬರುವುದು' ಎಂಬ ಕೀರ್ತನೆಯಲ್ಲಿ 'ಎನ್ನದೆಂದು ತನ್ನದೆಂದು ಹೆಣ್ಣು ಹೊನ್ನು ಮಣ್ಣಿಗಾಗಿ ಘನ್ನವಾಗಿ ಬಾಯ ಬಿಡುತ ಬಂದೆ ಮೋಹನ' ಎಂದಿದ್ದಾನೆ. ಸಕಲವನ್ನು ಹರಿಯ ಪದತಲಕ್ಕೊಪ್ಪಿಸಿ ಹರಿಭಕ್ತಿಯೊಂದೇ ಜೀವನದ ಸಕಲಭಾಗ್ಯವೆಂದುಕೊಂಡ ಕನಕ : ಭಾರ ನಿನ್ನದೊ ದೂರು ನಿನ್ನದೊ ಕೃಷ್ಣ ನಾರಿ ಮಕ್ಕಳು ತನುಮನ ನಿನ್ನವಯ್ಯ ಕ್ಷೀರದೊಳಗದ್ದು ನೀರೊಳಗದ್ದು ಗೋವಿಂದ ಹೇರನೊಪ್ಪಿಸಿದ ಮೇಲೆ ಸುಂಕವೇತಕೆ ದೇವ || ಎನ್ನುತ್ತಾನೆ. ಆದರೆ ಬಹುತೇಕ ಕೀರ್ತನೆಗಳಲ್ಲಿ ಕನಕ ಹೆಣ್ಣನ್ನು ಸಾಂಪ್ರದಾಯಿಕ ಚೌಕಟ್ಟಿನಲ್ಲಿಯೇ ನೋಡಿದ್ದಾನೆ. ಪತಿಭಕ್ತಿ, ಶೀಲಗಳೇ ಹೆಣ್ಣಿನ ಪರಮ ಧೈಯವಾಗಿರಬೇಕು ಎಂದು ಕನಕ ಒಪ್ಪಿಕೊಂಡಿದ್ದಾನೆ. ಹೇವವಿಲ್ಲದ ಹೆಣ್ಣು ಗಜುಗ ಬೆಳೆದ ಕಣ್ಣು ಗಂಡಗಂಜದ ನಾರಿ ಅವಳೇ ಹೆಮ್ಮಾರಿ ಸತ್ಯವಂತರ ಸಂಗವಿರಲು ಎಂಬ ಕೀರ್ತನೆಯಲ್ಲಿ - ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನ್ಯಾತಕೆ | ಸನ್ನೆಯನರಿತು ನಡೆಯದಿರುವ ಸತಿಯು ಯಾತಕೆ || ಎಂದಿದ್ದಾನೆ. ಕೇಶವನೊಲುಮೆಯು ಆಗುವ ತನಕ ಎಂಬ ಕೀರ್ತನೆಯಲ್ಲಿ “ಮಾನಿನಿಯ ಮನಸು ನಿಧಾನವಿರದಿರೆ ಮಾನಾಭಿಮಾನಗಳುಳಿದೀತೆ?